ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜುಬಿಲಿಯಂಟ್ ಕಾರ್ಖಾನೆಯಿಂದ ಕೊರೊನಾಗೆ ಲಸಿಕೆ ತಯಾರಿಕೆ

|
Google Oneindia Kannada News

ಮೈಸೂರು, ಮೇ 15: ಮಹಾಮಾರಿ ಕೋವಿಡ್19 ವಿರುದ್ಧ ಇಡೀ ದೇಶವೇ ಒಂದಾಗಿ ಹೋರಾಡುತ್ತಿದೆ. ಈ ಸಂದರ್ಭದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಕಳೆದ ತಿಂಗಳು ಕೊರೊನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಬೆಂಗಳೂರನ್ನೇ ಮೀರಿಸಿಬಿಡುವ ಆತಂಕ ಎದುರಾಗಿತ್ತು. ಇದಕ್ಕೆ ಮೈಸೂರು ಸಮೀಪದ ನಂಜನಗೂಡಿನಲ್ಲಿ ಇರುವ ಜುಬಿಲಿಯಂಟ್ ಕಾರ್ಖಾನೆಯ ನೌಕರನೊಬ್ಬನಿಗೆ ಕಾಣಿಸಿಕೊಂಡ ಸೋಂಕು ಕಾರಣ.

ನಂತರ ಜುಬಿಲಿಯಂಟ್ ಕಾರ್ಖಾನೆಯ 1500 ಕ್ಕೂ ಹೆಚ್ಚು ನೌಕರರನ್ನು ಕ್ವಾರಂಟೈನ್ ಮಾಡಲಾಗಿತ್ತು. ಮೈಸೂರಿನಲ್ಲಿ ಒಟ್ಟು ದಾಖಲಾದ 90 ಕೊರೊನಾ ವೈರಸ್ ಪ್ರಕರಣಗಳಲ್ಲಿ 72 ಪ್ರಕರಣಗಳು ಜುಬಿಲಿಯಂಟ್ ಕಾರ್ಖಾನೆಯ ನೌಕರನೊಬ್ಬನಿಂದಲೇ ಹರಡಿತ್ತು. ಇದರಿಂದ ಕಂಪನಿಯು ಕುಖ್ಯಾತಿಗೆ ಪಾತ್ರವಾಗಿತ್ತು. ಈಗಲೂ ಜುಬಿಲಿಯಂಟ್ ಎಂದ ಕೂಡಲೇ ಒಂದು ಕ್ಷಣ ಮೈಸೂರಿಗರು ಬೆಚ್ಚಿ ಬೀಳುತ್ತಾರೆ. ಆದರೆ ಇನ್ಮುಂದೆ ಭಯ ಪಡಬೇಕಿಲ್ಲ. ಇದಕ್ಕೂ ಕಾರಣವಿದೆ. ಕೊರೊನಾ ವೈರಸ್ ವಿರುದ್ಧ ಬಳಸಲಾಗುವ "ರೆಮ್ಡೆ ಸಿವಿರ್' ಎಂಬ ಔಷಧವನ್ನು ತಯಾರಿಸಲು ಜುಬಿಲಿಯಂಟ್ ಕಂಪನಿ ಅನುಮತಿ ಪಡೆದುಕೊಂಡಿದೆ.

 ಇನ್ನೆರಡು ದಿನಗಳಲ್ಲಿ ಆರೆಂಜ್ ಝೋನ್ ಆಗುತ್ತದಾ ಮೈಸೂರು? ಇನ್ನುಳಿದಿರುವ ಕೇಸ್ ಎಷ್ಟು? ಇನ್ನೆರಡು ದಿನಗಳಲ್ಲಿ ಆರೆಂಜ್ ಝೋನ್ ಆಗುತ್ತದಾ ಮೈಸೂರು? ಇನ್ನುಳಿದಿರುವ ಕೇಸ್ ಎಷ್ಟು?

ರೆಮ್ಡೆ ಸಿವಿರ್ ಎಂಬ ಔಷಧ ಕಂಡುಹಿಡಿಯಲಾಗುತ್ತಿದೆ

ರೆಮ್ಡೆ ಸಿವಿರ್ ಎಂಬ ಔಷಧ ಕಂಡುಹಿಡಿಯಲಾಗುತ್ತಿದೆ

ಸರ್ಕಾರ ಅನುಮತಿ ನೀಡಿದರೆ ಕಾರ್ಖಾನೆ ತೆರೆಯಲಾಗುವುದು ಮತ್ತು ಔಷಧಿ ತಯಾರಿಸಲಾಗುವುದು ಎಂದು ಜುಬಿಲಿಯಂಟ್ ಲೈಫ್ ಸೈನ್ಸಸ್ ಅಧ್ಯಕ್ಷ ಶಾಮ್ ಎಸ್‌. ಭಾರ್ತಿಯ ಪ್ರಕಟಿಸಿದ್ದಾರೆ.

ಅಮೆರಿಕ ಮೂಲದ ಗಿಲೀಡ್ ಸೈನ್ಸಸ್ ಎಂಬ ಕಂಪೆನಿಯು ರೆಮ್ಡೆ ಸಿವಿರ್ ಎಂಬ ಔಷಧ ಕಂಡುಹಿಡಿದಿದ್ದು, ಇದನ್ನು ಕೊರೊನಾ ವೈರಸ್ ವಿರುದ್ಧ ಅಮೆರಿಕದಲ್ಲಿ ಬಳಕೆ ಮಾಡಲಾಗುತ್ತಿದೆ. ಗಿಲೀಡ್ ಸೈನ್ಸಸ್ ಸಂಸ್ಥೆ ಕಂಡು ಹಿಡಿದ ರೆಮ್ಡೆ ಸಿವಿರ್ ಔಷಧವನ್ನು ಭಾರತ ಸೇರಿದಂತೆ 127 ದೇಶಗಳಲ್ಲಿ ಉತ್ಪಾದನೆ ಮಾಡುವ ಹಕ್ಕನ್ನು ಇದೀಗ ಜುಬಿಲಿಯಂಟ್ ಕಂಪನಿ ಪಡೆದುಕೊಂಡಿದೆ.

ಕೊರೊನಾಗೆ ಔಷಧ ತಯಾರಾಗಲಿದೆ

ಕೊರೊನಾಗೆ ಔಷಧ ತಯಾರಾಗಲಿದೆ

ನಂಜನಗೂಡು ಸೇರಿದಂತೆ ದೇಶದ 7 ಕಡೆಗಳಲ್ಲಿ ಜುಬಿಲಿಯಂಟ್ ಕಾರ್ಖಾನೆಗಳು ಇವೆ. ನಂಜನಗೂಡು ಹೊರತುಪಡಿಸಿ ಉಳಿದ ಎಲ್ಲ ಕಡೆ ಶೀಘ್ರದಲ್ಲಿಯೇ ಕಾರ್ಖಾನೆ ಪುನರಾರಂಭಗೊಳ್ಳಲಿದೆ. ನಂಜನಗೂಡಿನಲ್ಲಿ ಕಾರ್ಖಾನೆ ಪ್ರಾರಂಭಕ್ಕೆ ರಾಜ್ಯ ಸರಕಾರ ಅನುಮತಿ ನೀಡಿದಲ್ಲಿ ಇಲ್ಲೂ ಕೂಡ ಕೊರೊನಾಗೆ ಔಷಧ ತಯಾರಾಗಲಿದೆ.

ತೀವ್ರ ತೆರನಾದ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ರೆಮ್ಡೆ ಸಿವಿರ್ ನ್ನು ಬಳಸಲು ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆ ಅನುಮತಿ ನೀಡಿದೆ.

ತೀವ್ರ ಲಕ್ಷಣ ಇರುವವರಿಗೆ ಬಳಕೆ ಮಾಡಬಹುದು

ತೀವ್ರ ಲಕ್ಷಣ ಇರುವವರಿಗೆ ಬಳಕೆ ಮಾಡಬಹುದು

ಈ ಔಷಧ ಎರಡು ಜಾಗತಿಕ ಕ್ಲಿನಿಕಲ್ ಪ್ರಯೋಗಗಳಿಗೆ ಒಳಪಡಿಸಲಾಗಿದೆ. ಅಮೆರಿಕದ ನ್ಯಾಷನಲ್‌ ಇನ್ಸ್ಟಿಟ್ಯೂಟ್ ಫಾರ್‌ ಅಲರ್ಜಿ ಅಂಡ್‌ ಇನ್ಪೆಕ್ಷಿಯಸ್ ಡಿಸೀಸಸ್ ಹಾಗೂ ಗಿಲೀಡ್ ಪ್ರಯೋಗಾಲಯದಲ್ಲಿ ನಡೆದ ಪ್ರಯೋಗದ ಪ್ರಕಾರ ಈ ಔಷಧವನ್ನು ಮಧ್ಯಮದಿಂದ ತೀವ್ರ ಲಕ್ಷಣ ಇರುವ ಕೊರೊನಾ ಸೋಂಕಿತರಿಗೆ ಬಳಕೆ ಮಾಡಬಹುದು.

ಕೊರೊನಾ ವೈರಸ್ ಸೋಂಕನ್ನು ನಿವಾರಿಸುತ್ತದೆ ಎಂಬ ಖಚಿತತೆ ಇಲ್ಲ

ಕೊರೊನಾ ವೈರಸ್ ಸೋಂಕನ್ನು ನಿವಾರಿಸುತ್ತದೆ ಎಂಬ ಖಚಿತತೆ ಇಲ್ಲ

ರೆಮ್ಡೆಸಿವಿರ್ ಸುರಕ್ಷತೆ ಹಾಗೂ ಸಾಮರ್ಥ್ಯ ಕುರಿತಂತೆ ಈಗಲೂ ಸಂಶೋಧನೆಗಳು ಮುಂದುವರೆದಿವೆ. ಈ ಔಷಧವನ್ನು ಬಳಕೆ ಮಾಡಿದರೂ ಇದು ಕೊರೊನಾ ವೈರಸ್ ಸೋಂಕನ್ನು ನಿವಾರಿಸುತ್ತದೆ ಎಂಬ ಖಚಿತತೆಯೇನೂ ಇಲ್ಲ. ಅಮೆರಿಕ ಮತ್ತು ಇತರ ದೇಶಗಳಲ್ಲಿ ಇದನ್ನು ಬಳಕೆ ಮಾಡಲಾಗುತ್ತಿದ್ದರೂ ಸಾವಿನ ಸಂಖ್ಯೆ ಕಡಿಮೆ ಆಗಿಲ್ಲ.

English summary
The Jubilent Company has obtained permission to manufacture a drug called "Remdecivir" used against the corona virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X