ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಕೊರೊನಾ ಲಸಿಕಾ ಡ್ರೈ ರನ್ ಆರಂಭ: ಡಿಸಿ ಉದ್ಘಾಟನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನೆವರಿ 2: ಕೊರೊನಾ ಲಸಿಕಾ ಡ್ರೈ ರನ್ ಕೇಂದ್ರವನ್ನು ಟೆಪ್ ಕತ್ತರಿಸುವ ಮೂಲಕ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಉದ್ಘಾಟಿಸಿದರು.

ಮೈಸೂರಿನ ಜಯನಗರ ಆರೋಗ್ಯ ಕೇಂದ್ರದಲ್ಲಿ ನಿಯೋಜನೆಯಾಗಿರುವ ಲಸಿಕಾ ಕೇಂದ್ರದಲ್ಲಿ ಲಸಿಕಾ ಡ್ರೈ ರನ್ ಅನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿದರು.

ಮೈಸೂರು: ಮೂರು ಕೇಂದ್ರಗಳಲ್ಲಿ ಕೋವಿಡ್ ಲಸಿಕಾ ಅಣಕು ಕಾರ್ಯಾಚರಣೆಮೈಸೂರು: ಮೂರು ಕೇಂದ್ರಗಳಲ್ಲಿ ಕೋವಿಡ್ ಲಸಿಕಾ ಅಣಕು ಕಾರ್ಯಾಚರಣೆ

ನಂತರ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೂರು ಕೊಠಡಿಯ ಪೂರ್ವಭ್ಯಾಸದ ಸಿದ್ಧತೆ ಪರಿಶೀಲನೆ ಮಾಡಲಾಗಿದ್ದು, ಮೈಸೂರಿನಲ್ಲಿ 32 ಸಾವಿರ ಆರೋಗ್ಯ ಇಲಾಖೆ ಸಿಬ್ಬಂದಿ ಮೊದಲು ಕೊರೊನಾ ಲಸಿಕೆ ನೀಡುತ್ತೇವೆ ಎಂದರು.

Corona Vaccine Dry Run Launched In Mysuru: Inaugurated By Rohini Sindhuri

ಸದ್ಯಕ್ಕೆ ಮೂರು ಲಸಿಕಾ ಕೇಂದ್ರ ಸ್ಥಾಪನೆ ಮಾಡಿದ್ದೇವೆ, ಉಳಿದದ್ದು ಅಗತ್ಯಕ್ಕೆ ತಕ್ಕಂತೆ ನಿರ್ಮಾಣ ಮಾಡುತ್ತೇವೆ. ಲಸಿಕೆಗಾಗಿ ವಿಶೇಷ ಕೋಲ್ಡ್ ಸ್ಟೋರೆಜ್ ನಿರ್ಮಾಣದ ಅವಶ್ಯಕತೆ ಇಲ್ಲ ಎಂದು ರೋಹಿಣಿ ತಿಳಿಸಿದರು.

ನಮ್ಮಲ್ಲಿರುವ ಕೋಲ್ಡ್ ಸ್ಟೋರೆಜ್‌ನಲ್ಲೆ ಕೋವಿಡ್ ಲಸಿಕೆ ಶೇಖರಣೆ ಮಾಡಬಹುದು. ಮೈಸೂರಿನಲ್ಲಿ ಮೊದಲು ಆರೋಗ್ಯ ಇಲಾಖೆ ಸಿಬ್ಬಂದಿಗೆ ಲಸಿಕೆ ನೀಡಿ, ನಂತರ 5 ಲಕ್ಷ ಜನರಿಗೆ ಲಸಿಕೆ ನೀಡುತ್ತೇವೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿ ಏನು ಬರುತ್ತದೆ ಅದನ್ನು ಮಾತ್ರ ಅನುಸರಿಸಿ ಲಸಿಕೆ ನೀಡುತ್ತೇವೆ. ಲಸಿಕೆ ಪಡೆದವರ ಮಾಹಿತಿ ಪಡೆದು ಅವರ ಮೇಲೆ‌ ನಿಗಾ ಇರಿಸುತ್ತೇವೆ ಎಂದು ಡಿಸಿ ಹೇಳಿದರು.

Corona Vaccine Dry Run Launched In Mysuru: Inaugurated By Rohini Sindhuri

ಮೈಸೂರಿಗೆ ಬ್ರಿಟನ್ ಕೊರೊನಾ ಆತಂಕ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿ ರೋಹಿಣಿ ಸಿಂಧೂರಿ, ಬಹುಶಃ ಮೈಸೂರಿನಲ್ಲಿ ಬ್ರಿಟನ್‌ನಿಂದ ಬಂದವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಅವರನ್ನು ರೂಪಾಂತರ ಕೊರೊನಾ ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಿದ್ದೇವೆ. ಅದರ ವರದಿಯ ಫಲಿತಾಂಶ ನಮಗೆ ತಿಳಿಸಿಲ್ಲ ಎಂದರು.

ನಾವು ಎರಡು ಮೂರು ಬಾರಿ ಕೇಳಿದೇವು ಅವರು ಹೇಳಿಲ್ಲ. ಬಹುಶಃ ಅವರಿಗೆ ರೂಪಾಂತರ ಕೊರೊನಾ ವರದಿ ನೆಗೆಟಿವ್ ಇರಬಹುದು. ಸದ್ಯಕ್ಕೆ ಅವರನ್ನು ಬಿಟ್ಟರೆ 136 ಮಂದಿಯ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದು ಮೈಸೂರಿನಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

English summary
Rohini Sindhuri, District Collector of Mysuru, inaugurated of Corona Vaccine Dry Run Center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X