ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ: ಮೈಸೂರಿನಲ್ಲಿ ಮೊಬೈಲ್ ಕ್ಲಿನಿಕ್ ಸೇವೆ ಆರಂಭ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 30: ಕೊರೊನಾ ವೈರಸ್ ವಿರುದ್ಧದ ಹೋರಾಟವನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಲು ಮೈಸೂರು ಮಹಾನಗರ ಪಾಲಿಕೆಯು ಮೊಬೈಲ್ ಕ್ಲಿನಿಕ್ ಒಂದನ್ನು ಆರಂಭಿಸಿದೆ. ಈ ಕ್ಲಿನಿಕ್‌ ಹಾಟ್ ಸ್ಪಾಟ್‌ ಸ್ಥಳಗಳಲ್ಲಿ ನಿತ್ಯ ತಪಾಸಣೆ ಮತ್ತು ವೈದ್ಯಕೀಯ ಸೇವೆ ಒದಗಿಸಲಿದೆ.

Recommended Video

ಮೈಸೂರಿನಲ್ಲಿ ಲಕ್ಷ ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು | Mysore | Excise Dept

"ನಿಮ್ಮ ಮನೆ ಬಾಗಿಲಿಗೆ ವೈದ್ಯರು' ಎಂಬ ಘೋಷ ವಾಕ್ಯದಡಿ ಈ ಮೊಬೈಲ್ ಕ್ಲಿನಿಕ್ ಆರಂಭಿಸಲಾಗಿದೆ. ನಗರಪಾಲಿಕೆಯ ಮಂಡಕಳ್ಳಿ, ರಮಾಬಾಯಿನಗರ, ಗುಂಡೂರಾವ್ ನಗರ, ಗೋಕುಲ್ 2ನೇ ಹಂತ, ಪೌರಕಾರ್ಮಿಕರ ಕಾಲೋನಿ, ಗಿರಿಯ ಭೋವಿಪಾಳ್ಯ, ಬಸವನಗುಡಿ, ಹೆಬ್ಬಾಳ, ಮಂಚೇಗೌಡನ ಕೊಪ್ಪಲು, ಕೈಲಾಸಪುರಂ, ಕುರಿಮಂಡಿ, ಹೈವೇ ಸರ್ಕಲ್ ಈ 10 ಸ್ಥಳಗಳಲ್ಲಿ ತಪಾಸಣೆ ಮಾಡಲಾಗುವುದು.

ಜೊತೆಗೆ ಹಾಟ್​ಸ್ಪಾಟ್​ನಿಂದ ಸೀಲ್​ಡೌನ್ ಆಗಿರುವ ಪ್ರದೇಶಗಳಿಗೆ ತೆರಳಿ ಇತರ ರೋಗಿಗಳ ಆರೋಗ್ಯ ತಪಾಸಣೆ ಮಾಡಲಾಗುವುದು. ಮೊಬೈಲ್ ಕ್ಲಿನಿಕ್ ಗೆ ಸಚಿವ ಎಸ್.ಟಿ ಸೋಮಶೇಖರ್ ಅವರು ಚಾಲನೆ ನೀಡಿದರು.

Corona: Mobile Clinic Service Launches In Mysuru

ನಂತರ ಮಾತನಾಡಿದ ಅವರು, ""ನಂಜನಗೂಡು ಬಿಟ್ಟು ಉಳಿದ ತಾಲ್ಲೂಕುಗಳಿಗೆ ಸಡಿಲಿಕೆ ನೀಡಬೇಕು ಅಥವಾ ಬೇಡವೇ ಎಂಬುದರ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಇಂದು ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು‌. ಜಿಲ್ಲೆಯಲ್ಲಿ ಕೊರೊನಾ ಮುಕ್ತ ಆಗುವವರೆಗೂ ಸಡಲಿಕೆ ನೀಡುವುದು ಬೇಡವೆಂದು ಹಲವು ಸಂಸ್ಥೆಗಳು ಪರ-ವಿರೋಧ ವ್ಯಕ್ತಪಡಿಸಿವೆ'' ಎಂದರು.

English summary
Mysuru metropolis has launched a mobile clinic to make the fight against coronavirus more effective.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X