ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಒಂದು ಕಟ್ಟು ಕೊತ್ತಂಬರಿ ಸೊಪ್ಪಿನ ಬೆಲೆ ಕೇಳಲೇಬೇಡಿ!

|
Google Oneindia Kannada News

ಮೈಸೂರು, ನವೆಂಬರ್ 3 : ದೀಪಾವಳಿ ಹಬ್ಬ ಇನ್ನೇನು ಬಂದೇಬಿಟ್ಟಿತು. ಆದರೆ, ದೀಪಾವಳಿ ಹಬ್ಬದಂದು ಮಾಡಲಾಗುವ ವೈವಿಧ್ಯಮಯ ಅಡುಗೆಗಳಿಗೆ ಅಗತ್ಯವಾಗಿ ಬೇಕಾಗಿಯೇ ಇರುವ ಕೊತ್ತಂಬರಿ ಸೊಪ್ಪು ಬೆಲೆ ಮಾತ್ರ ಗಗನಕ್ಕೇರಿದೆ.

ದೀಪಾವಳಿ ವಿಶೇಷ ಪುರವಣಿ

ಮೈಸೂರು ನಗರದಲ್ಲಿ ಕೊತ್ತಂಬರಿ ಸೊಪ್ಪಿನ ಧಾರಣೆ ಸದ್ಯ ಬಲು ದುಬಾರಿ. ಒಂದು ಸಣ್ಣ ಕಟ್ಟು ಎಂದು ಕೂಡ ಹೇಳಲಾಗದಷ್ಟು ಸೊಪ್ಪಿಗೆ 8 ರಿಂದ 10 ರು.ವರೆಗೆ ದರ ನಿಗದಿಯಾಗಿದೆ. ಜನರು ಗತ್ಯಂತರವಿಲ್ಲದೆ ಕೊತ್ತಂಬರಿ ಘಮಲಿಲ್ಲದೆ ಅಡುಗೆ ಮಾಡಲು ನಿರ್ಧರಿಸುತ್ತಿದ್ದಾರೆ.

ಸುಜ್ಞಾನದ ಪ್ರತೀಕ ಬೆಳಕಿನ ಹಬ್ಬ ದೀಪಾವಳಿ ಆಚರಣೆಯ ಮಹತ್ವಸುಜ್ಞಾನದ ಪ್ರತೀಕ ಬೆಳಕಿನ ಹಬ್ಬ ದೀಪಾವಳಿ ಆಚರಣೆಯ ಮಹತ್ವ

ಈ ಕುರಿತಾಗಿ ರೈತರು ಹೇಳುವುದಿಷ್ಟೇ, ಕೊತ್ತಂಬರಿ ಸೊಪ್ಪಿನ ಉತ್ಪಾದನೆ ಈಗ ಕುಂಠಿತವಾಗಿದೆ. ಕೇವಲ ಕೊಳವೆ ಬಾವಿ ಹೊಂದಿರುವರಷ್ಟೇ ಬೆಳೆಯುತ್ತಿದ್ದಾರೆ. ಮಳೆಯಾಶ್ರಿತ ಪ್ರದೇಶದಲ್ಲಿ ಇನ್ನೂ ಬಿತ್ತನೆಯಾಗಿಲ್ಲ. ದೀಪಾವಳಿಯ ಸಮಯದಲ್ಲಿ ಬೀಳುವ ಮಳೆಗೆ ಸಾಮಾನ್ಯವಾಗಿ ಬಹಳಷ್ಟು ಕಡೆ ಕೊತ್ತಂಬರಿಯನ್ನು ಬಿತ್ತನೆ ಮಾಡುತ್ತಾರೆ. ನಂತರ, ಚಳಿಗಾಲದಲ್ಲಿ ಬೀಳುವ ಇಬ್ಬನಿಗೆ ಇದು ಬೆಳೆಯುತ್ತದೆ. ಆಗ ದರ ನಿಯಂತ್ರಣಕ್ಕೆ ಬರಲಿದೆ ಎನ್ನುತ್ತಾರೆ.

Coriander rate skyrockets in Mysuru

ಕೋಳಿಮೊಟ್ಟೆಗೆ ಬೇಡಿಕೆ ಏರಿಕೆ : ನವರಾತ್ರಿ ಸಹ ಕಳೆದಿರುವುದರಿಂದ ಕೋಳಿ ಮೊಟ್ಟೆಗಳಿಗೆ ಕೂಡ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ, ದರದಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಒಂದು ಮೊಟ್ಟೆಗೆ 4.33 ರು. ದರ ನಿಗದಿಯಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿಯ ದರ ಕಡಿಮೆ ಎನಿಸಿದೆ.

ದೀಪಾವಳಿಗೆ ಹೊಸ ವಾಹನ ಖರೀದಿಗೆ ಬ್ರೇಕ್ ಹಾಕುತ್ತಾ ಸರ್ಕಾರ? ದೀಪಾವಳಿಗೆ ಹೊಸ ವಾಹನ ಖರೀದಿಗೆ ಬ್ರೇಕ್ ಹಾಕುತ್ತಾ ಸರ್ಕಾರ?

ಮುಂದಿನ ವಾರ ಕಾರ್ತೀಕ ಮಾಸ ಬರುವುದರಿಂದ ವಿಶೇಷವಾಗಿ ರಾಜ್ಯದಲ್ಲಿ ಮೊಟ್ಟೆಗಳಿಗೆ ಬೇಡಿಕೆ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಹೀಗಾಗಿ, ದರವು ಇಳಿಕೆಯಾಗುವ ಸಂಭವವಿದೆ. ಕಾರ್ತೀಕ ಮಾಸ ಮುಗಿದ ಬಳಿಕವಷ್ಟೇ ದರ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ದೀಪಾವಳಿಗೆ ಕೆಎಸ್‌ಆರ್‌ಟಿಸಿ ಇಂದ 1500 ಹೆಚ್ಚುವರಿ ಬಸ್‌ ದೀಪಾವಳಿಗೆ ಕೆಎಸ್‌ಆರ್‌ಟಿಸಿ ಇಂದ 1500 ಹೆಚ್ಚುವರಿ ಬಸ್‌

ಈ ಬಾರಿ ಉತ್ತರ ಭಾರತದಲ್ಲಿ ಕಾಳಸಂತೆಕೋರರು ಮೊಟ್ಟೆಗಳನ್ನು ಅಕ್ರಮವಾಗಿ ಶೇಖರಿಸಿಟ್ಟುಕೊಂಡಿರುವುದರಿಂದ ದರವು ನಿರೀಕ್ಷಿಸಿದಷ್ಟು ಏರಿಕೆಯಾಗುತ್ತಿಲ್ಲ. ಮುಖ್ಯವಾಗಿ, ಪಂಜಾಬ್‌ನ ಬರ್ವಾಲಾದಲ್ಲಿ ಈ ಬಗೆಯ ವ್ಯಾಪಾರಸ್ಥರ ಚಟುವಟಿಕೆ ಹೆಚ್ಚು. ಹೆಚ್ಚಾಗಿ ಮೊಟ್ಟೆಗಳನ್ನು ಸಂಗ್ರಹಿಸಿಟ್ಟು, ಬೆಲೆ ಹೆಚ್ಚಿಸಿ ಒಮ್ಮೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಈ ದಂಧೆಯ ಕಾರಣದಿಂದ ಕಳೆದ ವರ್ಷದಷ್ಟು ಪ್ರಮಾಣದಲ್ಲಿ ದರ ಏರಿಕೆಯಾಗಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

English summary
Coriander rate has skyrocketed in Mysuru due to less growth and huge demand. The rates may come down only after Deepavali as the winter begins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X