ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊತ್ತಂಬರಿ ಕೊಳ್ಳಲು ಹೋದ್ರೆ ಜೇಬಿಗೆ ಕತ್ತರಿ ಗ್ಯಾರಂಟಿ

|
Google Oneindia Kannada News

ಮೈಸೂರು, ಜೂನ್ 19: ತಿಳಿ ಸಾರು, ಸಾಂಬಾರು, ಚಟ್ನಿ ಏನೇ ಇರಲಿ, ಅದಕ್ಕೆ ಕೊತ್ತಂಬರಿ ಇದ್ದರೇನೆ ರುಚಿ. ಆದರೆ ಈಗ ಕೊತ್ತಂಬರಿ ಸೊಪ್ಪಿನ ಬೆಲೆ ಕೇಳಿದರೆ ಹೌಹಾರೋದಂತೂ ಗ್ಯಾರಂಟಿ. ನಗರದಲ್ಲಿ ಒಂದು ಕಟ್ಟು ಕೊತ್ತಂಬರಿ ಸೊಪ್ಪಿನ ಬೆಲೆ ಬರೋಬ್ಬರಿ 15-20ರೂಗೆ ಏರಿದೆ. ನಾಲ್ಕೈದು ಗಿಡ ಸೇರಿಸಿ ಮಾರುವ ಒಂದು ಕಟ್ಟು ಸೊಪ್ಪು ಕತ್ತರಿಸಿದರೆ ಒಂದು ಹಿಡಿಯೂ ಬರುತ್ತಿಲ್ಲ.

ಯಾವುದೇ ಖಾದ್ಯದಲ್ಲಿ ಕೊತ್ತಂಬರಿ ಸೊಪ್ಪು ಇದ್ದರೇನೆ ರುಚಿ. ತಿಂಡಿ, ಊಟ, ಚಾಟ್ಸ್ ಏನಿದ್ದರೂ ಕೊತ್ತಂಬರಿ ಬಳಕೆ ಇದ್ದೇ ಇರುತ್ತದೆ. ಆದರೆ ವಾರದಿಂದ ಗಗನಕ್ಕೇರಿರುವ ಈ ಸೊಪ್ಪಿನ ಬೆಲೆ ಕೇಳಿದರೆ ಸೊಪ್ಪಿನ ಸಹವಾಸವೇ ಬೇಡ ಎನ್ನುವಂತಾಗಿದೆ. ಇದರಿಂದ ಹೋಟೆಲ್, ಪಾನಿಪುರಿ ಅಂಗಡಿ, ಚುರುಮುರಿ ಗಾಡಿ ಸೇರಿದಂತೆ ಯಾವುದೇ ತಿಂಡಿ-ತಿನಿಸು ತಯಾರು ಮಾಡುವ ಸ್ಥಳಗಳಲ್ಲಿ ಕೊತ್ತಂಬರಿ ಸೊಪ್ಪಿನ ವಾಸನೆಯೇ ಕಾಣೆಯಾಗಿದೆ.

 ಮೈಸೂರಿನಲ್ಲಿ ಒಂದು ಕಟ್ಟು ಕೊತ್ತಂಬರಿ ಸೊಪ್ಪಿನ ಬೆಲೆ ಕೇಳಲೇಬೇಡಿ! ಮೈಸೂರಿನಲ್ಲಿ ಒಂದು ಕಟ್ಟು ಕೊತ್ತಂಬರಿ ಸೊಪ್ಪಿನ ಬೆಲೆ ಕೇಳಲೇಬೇಡಿ!

ನೀರಿನ ಕೊರತೆಯಿಂದ ಕೊತ್ತಂಬರಿ ಸೊಪ್ಪನ್ನು ಹೆಚ್ಚು ಬೆಳೆದಿಲ್ಲ. ಇದರಿಂದ ಸ್ಥಳೀಯವಾಗಿ ಮಾರುಕಟ್ಟೆಗೆ ಹೆಚ್ಚು ಬರುತ್ತಿಲ್ಲ. ಹವಾಮಾನ ವೈಪರೀತ್ಯ, ಮಳೆ ಕೊರತೆಗೆ ಸೊಪ್ಪಿನ ಇಳುವರಿ ನೆಲಕಚ್ಚಿದೆ. ಇಳುವರಿ ಕುಸಿತವಾಗಿರುವುದರಿಂದ ನಗರದ ಮಾರುಕಟ್ಟೆಗೆ ನಿತ್ಯ ಲೋಡುಗಟ್ಟಲೆ ಬರುತ್ತಿದ್ದ ಸೊಪ್ಪಿನ ಪ್ರಮಾಣದಲ್ಲೂ ಇಳಿಕೆಯಾಗಿದೆ.

Coriander leaves price hike in mysuru market

 ಮಕರ ಸಂಕ್ರಾಂತಿ: ಮೈಸೂರಿನಲ್ಲಿ ಗಗನಕ್ಕೇರಿದ ತರಕಾರಿ-ತೆಂಗು ದರ ಮಕರ ಸಂಕ್ರಾಂತಿ: ಮೈಸೂರಿನಲ್ಲಿ ಗಗನಕ್ಕೇರಿದ ತರಕಾರಿ-ತೆಂಗು ದರ

ಬೇಡಿಕೆಗೆ ತಕ್ಕಂತೆ ಸೊಪ್ಪು, ತರಕಾರಿ ಫಸಲು ಇಲ್ಲ. ಹಾಗಾಗಿ ವಾರದಿಂದ ವಾರಕ್ಕೆ ತರಕಾರಿ ಬೆಲೆ ಗಗನಮುಖಿಯಾಗುತ್ತಿದೆ. ಹಾಗೆಯೇ, ಕೊತ್ತಂಬರಿ ಸೊಪ್ಪು ಸಾಕಷ್ಟು ಸಿಗದೆ ಬೆಲೆ ಗಗನಕ್ಕೇರಿ ಗ್ರಾಹಕರ ಕೈ ಸುಡುತ್ತಿದೆ.

English summary
Coriander leaves rate has hiked in Mysuru due to less growth and huge demand. It cost 15-20rs per piece of coriander leaves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X