ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು : ವಾಹನಗಳಲ್ಲಿ ಟಿಂಟೆಡ್ ಗ್ಲಾಸ್ ಇದ್ದರೆ ದಂಡ

|
Google Oneindia Kannada News

ಮೈಸೂರು, ಫೆ.6 : ಮೈಸೂರಿನಲ್ಲಿ ಕಾರು ಸೇರಿದಂತೆ ಇತರ ವಾಹನಗಳಿಗೆ ಟಿಂಟೆಡ್ ಗ್ಲಾಸ್ ಅಳವಡಿಸಿದರೆ ದಂಡ ಕಟ್ಟಬೇಕಾಗುತ್ತದೆ. ಹೌದು, ನಗರದಲ್ಲಿ ಟಿಂಡೆಡ್ ಗ್ಲಾಸ್ ಅಳವಡಿಕೆ ನಿಷೇಧಿಸಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಮೊದಲ ಬಾರಿ ಸಿಕ್ಕಿಬಿದ್ದರೆ 100 ರೂ. ದಂಡ ಪಾವತಿ ಮಾಡಬೇಕು.

ಮೈಸೂರು ಪೊಲೀಸ್ ಆಯುಕ್ತ ಎಂ.ಎ.ಸಲೀಂ ಅವರು ಈ ಕುರಿತು ಆದೇಶ ಹೊರಡಿಸಿದ್ದು, ಕಾರು ಸೇರಿದಂತೆ ಯಾವುದೇ ವಾಹನಗಳಿಗೆ ಟಿಂಟೆಡ್ ಗ್ಲಾಸ್ ಅಳವಡಿಸುವಂತಿಲ್ಲ ಎಂದು ಹೇಳಿದ್ದಾರೆ. ಮೊದಲ ಬಾರಿ ಸಿಕ್ಕಿಬಿದ್ದರೆ 100ರೂ., ಎರಡನೇ ಬಾರಿಗೆ 300ರೂ. ದಂಡ ವಿಧಿಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.

M.A.Saleem

ಟಿಂಟೆಡ್ ಗಾಜನ್ನು ಅಳವಡಿಸುವಂತಿಲ್ಲ ಎಂದು ಶೋರೂಂ, ಗ್ಯಾರೇಜ್‌ಗಳಿಗೂ ಪೊಲೀಸರು ಸೂಚನೆ ನೀಡಿದ್ದಾರೆ. ವಾಹನಗಳಿಗೆ ಟಿಂಟೆಡ್ ಗ್ಲಾಸ್ ಹಾಕುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಲೀಂ ಹೇಳಿದ್ದಾರೆ. [ನಟ ದುನಿಯಾ ವಿಜಿಗೆ 100 ರೂ. ದಂಡ!]

ಹಿಂದೆ ಕೇಂದ್ರ ಸರ್ಕಾರವೂ ಟಿಂಟೆಡ್ ಗ್ಲಾಸ್ ತೆರವುಗೊಳಿಸುವಂತೆ ಆದೇಶ ನೀಡಿತ್ತು. ಅದರಂತೆ, ನಗರದಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಕೆಲವರು ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಈ ಕಾರ್ಯ ಸ್ಥಗಿತಗೊಂಡಿತ್ತು. ಸದ್ಯ, ಕೋರ್ಟ್ ಟೆಂಟೆಡ್ ಗ್ಲಾಸ್ ತೆರವುಗೊಳಿಸಲು ಆದೇಶ ನೀಡಿದೆ ಎಂದು ತಿಳಿಸಿದರು. [ಬಣ್ಣದ ಪೇಪರ್ರೂ ಕೀಳ್ತಾರೆ, ದುಡ್ಡೂ ಕೀಳ್ತಾರೆ]

ಶುಕ್ರವಾರದಿಂದಲೇ ಮೈಸೂರು ನಗರದಲ್ಲಿ ಟಿಂಟೆಡ್ ಗ್ಲಾಸ್ ತೆರವುಗೊಳಿಸುವ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ವಾಹನ ಸವಾರರು ಟಿಂಟೆಡ್ ಗ್ಲಾಸ್ ತೆರವುಗೊಳಿಸಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಸಲೀಂ ಮವಿ ಮಾಡಿದರು.

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಟಿಂಟೆಡ್ ಗ್ಲಾಸ್ ನಿಷೇಧಿಸಲಾಗಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಪೊಲೀಸರು ಟಿಂಟೆಡ್ ಗ್ಲಾಸ್ ಆಳವಿಡಿಸಿದ್ದ ನಟ ದುನಿಯಾ ವಿಜಯ್ ಮತ್ತು ದರ್ಶನ್‌ಗೆ ದಂಡ ಹಾಕಿ, ಟಿಂಟೆಡ್ ತೆರವುಗೊಳಿಸಿದ್ದರು.

English summary
The Supreme Court banned tinted glass on four-wheelers. Mysuru Police commissioner M.A.Saleem said, we will enforce no-tinted glass rule in city from Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X