ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ದೊಡ್ಡ ಗಡಿಯಾರದ ಕಾಪರ್‌ ರಾಡ್ ಕಳವು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 30: ಮೈಸೂರು ನಗರದ ಸ್ಮಾರಕ, 75 ಅಡಿ ಎತ್ತರದ, 96 ವರ್ಷದ ಇತಿಹಾಸ ಹೊಂದಿರುವ ದೊಡ್ಡ ಗಡಿಯಾರದ ಕಾಪರ್ ಗ್ರೌಂಡಿಂಗ್ ರಾಡ್ ನಾಪತ್ತೆಯಾಗಿರುವುದು ಶುಕ್ರವಾರ (ಜ.29) ಬೆಳಕಿಗೆ ಬಂದಿದೆ.

ಮೈಸೂರಿನ ಪುರಭವನದ ಎದುರಿರುವ ಈ ಗಡಿಯಾರ ಕಂಬದ ಕೆಳಭಾಗದಲ್ಲಿ ಸುಮಾರು 15 ಅಡಿ ಎತ್ತರದ ತಾಮ್ರದ ಲೈಟ್ನಿಂಗ್ ರಾಡ್ ಅನ್ನು ಅಳವಡಿಸಲಾಗಿತ್ತು. ಭಾರೀ ಮಿಂಚು, ಸಿಡಿಲು ಬಡಿದಾಗ ಕಟ್ಟಡಕ್ಕೆ ಅಪಾಯ ಬಾರದಿರಲಿ ಎಂಬ ಕಾರಣಕ್ಕೆ ಈ ರಾಡ್ ಅನ್ನು ಎಲ್ಲ ಪಾರಂಪರಿಕ ಕಟ್ಟಡಗಳಿಗೂ ಅಳವಡಿಸಿರಲಾಗುತ್ತದೆ.

ಕುಗ್ಗಿದ ಕೊರೊನಾ ಸೋಂಕು; ಬಸ್‌ ಸಂಚಾರ ಅವಧಿ ವಿಸ್ತರಣೆ ಕುಗ್ಗಿದ ಕೊರೊನಾ ಸೋಂಕು; ಬಸ್‌ ಸಂಚಾರ ಅವಧಿ ವಿಸ್ತರಣೆ

ಆದರೆ ಈಗ ಈ ರಾಡ್‌ಗಳು ಕಳುವಾಗಿರುವುದು ಆತಂಕ ಮೂಡಿಸಿದೆ. ಅಲ್ಲದೆ ದೊಡ್ಡ ಗಡಿಯಾರದ ಕೆಳಭಾಗದಲ್ಲಿ ಇಲಿ, ಹೆಗ್ಗಣಗಳು ಭೂಮಿಯನ್ನು ಕೊರೆದು ದೊಡ್ಡ ಬಿಲ ಸೃಷ್ಟಿಸಿದ್ದು, ಕಟ್ಟಡದ ಸುರಕ್ಷತೆಗೂ ಅತಂಕ ಎದುರಾಗಿದೆ. ಈ ಕಾಪರ್‌ ರಾಡ್‌ನ್ನು ದುಷ್ಕರ್ಮಿಗಳು ಹಣದ ಆಸೆಗೆ ಕದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

Mysuru: Copper Rod Stolen In Mysurus Big Clock Tower

ಈಗಾಗಲೇ ದೊಡ್ಡ ಗಡಿಯಾರದ ಕೆಲವು ಭಾಗಗಳು ಶಿಥಿಲವಾಗಿವೆ. ಮಳೆಗಾಲದಲ್ಲಿ ಜೋರು ಗುಡುಗು ಅಥವಾ ಸಿಡಿಲು ಬಡಿದಾಗ ಕಟ್ಟಡಕ್ಕೆ ಅಪಾಯ ಆಗುವ ಸಾಧ್ಯತೆ ಹೆಚ್ಚಾಗಿದೆ. ಆದಷ್ಟು ಶೀಘ್ರವಾಗಿ ಮತ್ತೆ ರಾಡ್ ಅಳವಡಿಸಿ ಕಟ್ಟಡದ ಕೆಳಭಾಗದಲ್ಲಿ ಇಲಿ, ಹೆಗ್ಗಣಗಳು ಕೊರೆದಿರುವ ಸ್ಥಳವನ್ನು ಮುಚ್ಚಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದರಲ್ಲಿ ಅನುಮಾನವಿಲ್ಲ.

ಮಹಾನಗರ ಪಾಲಿಕೆ ಆಯುಕ್ತ ಗುರುದತ್‌ ಹೆಗಡೆ ಅವರು ಈ ರಾಡ್ ೨ ವರ್ಷಗಳ ಹಿಂದೆಯೇ ಕಳುವಾಗಿದ್ದು, ಮುಂದಿನ ಎರಡು-ಮೂರು ದಿನದಲ್ಲಿ ಬೇರೆ ರಾಡ್ ಅಳವಡಿಸಲಾಗುದಲ್ಲದೆ, ದುರಸ್ಥಿ ಮಾಡಲಾಗುವುದು ಎಂದು ಹೇಳಿದ್ದಾರೆ.

English summary
Mysuru city monument, a large clock tower's unearthed Copper rod was Stolen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X