ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ಇನ್ನೂ 15 ದಿನ ಚಳಿ: ಹೆಚ್ಚುತ್ತಿದೆ ಸಾಂಕ್ರಾಮಿಕ ಕಾಯಿಲೆ

|
Google Oneindia Kannada News

ಮೈಸೂರು, ಜನವರಿ 16 : ಉತ್ತರಭಾರತದ ಶೀತಗಾಳಿ ದಕ್ಷಿಣಭಾರತವನ್ನು ಆವರಿಸುತ್ತಿರುವ ಪರಿಣಾಮ ನಗರದಲ್ಲಿ ಚಳಿ ಜೋರಾಗಿದೆ. ಚಳಿ ನಡುವೆಯೇ ಮೈಸೂರಿಗರು ಪರಿಪಾಟಲು ಪಡುವಂತಾಗಿದೆ. ಇನ್ನೂ 15 ದಿನಗಳ ಕಾಲ ಚಳಿ ವಾತಾವರಣ ಇರಲಿದೆ.

ಡಿಸೆಂಬರ್ ಕೊನೆಯ ವಾರದಲ್ಲಿ ತಾಪಮಾನದಲ್ಲಿ ಏರಿಳಿತ ಉಂಟಾಗುತ್ತಿತ್ತು. ಜ.1ರಿಂದ ತೀವ್ರವಾದ ಚಳಿ ಶುರುವಾಗಿದೆ. ಉತ್ತರ ಒಳನಾಡಿನಲ್ಲಿ ಶೀತಗಾಳಿ ಬೀಸುತ್ತಿರುವುದರಿಂದ ಇನ್ನು ತಾಪಮಾನ ಇಳಿಕೆಯಾಗುತ್ತಲೇ ಇರುತ್ತದೆ. ರಾತ್ರಿ ಹಾಗೂ ಮುಂಜಾನೆ ಚಳಿ ಜೋರಾಗಿರುವುದರಿಂದ ರಾತ್ರಿ ಹಾಗೂ ಬೆಳಿಗ್ಗೆ ಸಾರ್ವಜನಿಕರು ತಿರುಗಾಡುವುದು ಕಷ್ಟವಾಗಿದೆ.

ಆರು ವರ್ಷಗಳಲ್ಲೇ ಜನವರಿಯಲ್ಲಿ ಅಧಿಕ ಚಳಿ ಕಂಡ ಬೆಂಗಳೂರು ಆರು ವರ್ಷಗಳಲ್ಲೇ ಜನವರಿಯಲ್ಲಿ ಅಧಿಕ ಚಳಿ ಕಂಡ ಬೆಂಗಳೂರು

ವಾಡಿಕೆಯಂತೆ ಡಿಸೆಂಬರ್‌ನಲ್ಲಿ ಚಳಿ ಆರಂಭಗೊಳ್ಳುವುದು ಸಹಜ. ಆದರೆ ಉತ್ತರ ಭಾರತದಲ್ಲಿ ಶೀತಗಾಳಿ ಹೆಚ್ಚಾದಷ್ಟು ಅದು ದಕ್ಷಿಣ ಭಾರತದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಮಂಜು ಹಾಗೂ ಇಬ್ಬನಿ ಸುರಿಯುತ್ತಿದೆ. ಮೈಸೂರಿನಲ್ಲಿ 15 ಡಿಗಿ ಸೆಲ್ಸಿಯಸ್ ಕನಿಷ್ಠ ಹಾಗೂ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಚಳಿ ತಾಪಮಾನವಿದೆ.

cool weather continue for another 15 days in Mysuru

ಭಾರಿ ಚಳಿ, ಹೆಚ್ಚುತ್ತಿದೆ ಹೃದಯಾಘಾತ, ನೀವು ಹೇಗಿರಬೇಕು?ಭಾರಿ ಚಳಿ, ಹೆಚ್ಚುತ್ತಿದೆ ಹೃದಯಾಘಾತ, ನೀವು ಹೇಗಿರಬೇಕು?

ಮೋಡದ ವಾತಾವರಣ ಇಲ್ಲದೇ ಇರುವುದರಿಂದ ಇನ್ನು 15 ದಿವಸಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ.

ಕಳೆದ 7 ವರ್ಷಗಳಲ್ಲಿ ಜನವರಿಯಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನ ಕಳೆದ 7 ವರ್ಷಗಳಲ್ಲಿ ಜನವರಿಯಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನ

ಮುಂಜಾನೆ 4ರಿಂದಲೇ ಶೀತದ ಗಾಳಿ ಜೋರಾಗಿ ಬೀಸತೊಡಗಿದೆ. ಇನ್ನೂ 15 ದಿನಗಳ ಕಾಲ ಚಳಿ ವಾತಾವರಣ ಬೀಸತೊಡಗುತ್ತದೆ. ಬೆಳಿಗ್ಗೆ 9ರ ನಂತರ ಕಡಿಮೆಯಾಗುತ್ತಿದೆ. ರಾತ್ರಿ 7 ನಂತರ ಚಳಿ ಹೆಚ್ಚಾಗುತ್ತಿದೆ. ಇನ್ನು ಇದರೊಟ್ಟಿಗೆ ಸಾಂಕ್ರಾಮಿಕ ಕಾಯಿಲೆ, ಜ್ವರ, ಶೀತ ಹೆಚ್ಚುತ್ತಿದ್ದು ಎಲ್ಲರೂ ವೈದ್ಯರತ್ತ ಧಾವಿಸುತ್ತಿದ್ದಾರೆ.

English summary
The cold winds of northern India affect the South India, which is a cold spring in the Mysuru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X