ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಹಿಂದುಳಿದ ವರ್ಗಗಳ ನೂತನ ವಿದ್ಯಾರ್ಥಿ ನಿಲಯ ನಿರ್ಮಾಣ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 7: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ನೂತನ ಕಟ್ಟಡ ನಿರ್ಮಾಣ ಸ್ಥಳಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿ, ಪರಿಶೀಲಿಸಿದರು.

ಮೈಸೂರಿನ ವಸಂತನಗರದಲ್ಲಿ ನಡೆಯುತ್ತಿರುವ ಬಾಲಕರ ವಸತಿ ನಿಲಯ ಕಟ್ಟಡ ಕಾಮಗಾರಿಯ ಪ್ರಗತಿಯನ್ನು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

"ಮೈಸೂರನ್ನು ಪ್ರವಾಸೋದ್ಯಮ ಬ್ರ್ಯಾಂಡ್ ಮಾಡಲು ಹೆಲಿ ಟೂರಿಸಂ''

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ""ಜಿಲ್ಲಾ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 16 ವಸತಿ ನಿಲಯಗಳು ಇದ್ದು, ಸರಸ್ವತಿಪುರಂ, ಬೋಗಾದಿ, ಶ್ರೀರಾಂಪುರ, ಗೋಕುಲಂ, ಕುವೆಂಪುನಗರದ ಭಾಗಗಳಲ್ಲಿ ಖಾಸಗಿ ಹಾಸ್ಟೆಲ್‌ಗಳಲ್ಲಿ ನಡೆಯುತ್ತಿವೆ. ಈ ಹಾಸ್ಟೆಲ್‌ಗಳಿಗೆ ಸುಮಾರು 19 ಲಕ್ಷ ರೂ. ಬಾಡಿಗೆ ಸಂದಾಯವಾದರೆ ಸುಮಾರು ವರ್ಷಕ್ಕೆ 2.5 ಕೋಟಿ ರೂ. ಬೊಕ್ಕಸಕ್ಕೆ ನಷ್ಟವಾಗುತ್ತಿರುತ್ತದೆ'' ಎಂದರು.

Construction Of New Building For Backward Classes Student Hostel In Mysuru

ಸಿಎಂ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ಮೈಸೂರಿನ ಹೊರವಲಯ ವಸಂತನಗರದಲ್ಲಿ 4 ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ತಿಂಗಳಿಗೆ 5 ಲಕ್ಷದಂತೆ ವರ್ಷಕ್ಕೆ 60 ಲಕ್ಷ ರೂ. ಇಲಾಖೆಗೆ ಉಳಿತಾಯವಾಗುತ್ತದೆ. ಹಾಗೆಯೇ ಒಂದು ಕಟ್ಟಡದಲ್ಲಿ ಸುಮಾರು 120 ಮಕ್ಕಳು ವಸತಿಯನ್ನು ಪಡೆದರೆ, 500 ಮಕ್ಕಳಿಗೆ ವಸತಿ ವ್ಯವಸ್ಥೆಯನ್ನು ಮಾಡಬಹುದು ಎಂದು ತಿಳಿಸಿದರು.

ಕಟ್ಟಡ ನಿರ್ಮಾಣ ಕೆಲಸವನ್ನು ಕರ್ನಾಟಕ ಗೃಹ ಮಂಡಳಿ ನಿರ್ವಹಿಸುತ್ತಿದ್ದು, ಶೀಘ್ರವೇ ಕೆಲಸ ಮುಗಿಸಿ ಬಾಲಕರಿಗೆ ಅನುಕೂಲವಾಗುಂತೆ ಜೂನ್ ತಿಂಗಳಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕೆಂದು ಸೂಚಿಸಿದರು.

Construction Of New Building For Backward Classes Student Hostel In Mysuru

ಈ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಂದ್ಯಾ, ಕೆ.ಎಚ್.ಬಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಗದೀಶ್, ತಾಲ್ಲೂಕು ಕಲ್ಯಾಣ ಅಧಿಕಾರಿ ಚಂದ್ರಕಲಾ, ವಿಸ್ತರಣಾಧಿಕಾರಿ ಸತೀಶ್, ಇಂಜಿನಿಯರ್ ಕೃಷ್ಣಾ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ಗ್ರಾಮಾಂತರ ಅಧ್ಯಕ್ಷ ಪರಶುರಾಮಪ್ಪ ಇದ್ದರು.

English summary
Minister Kota Srinivasa Poojary visited and reviewed the new building construction of the student hostel of the Backward Classes Welfare Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X