ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಕೀಯ ದಾಳಕ್ಕೆ ಸಾಕ್ಷಿಯಾದ ಗಾರ್ಬೇಜ್ ಪಾಲಿಟಿಕ್ಸ್

By Yashaswini
|
Google Oneindia Kannada News

ಮೈಸೂರು, ಡಿಸೆಂಬರ್ 14 : ಮೈಸೂರಿನ ಕಸ ವಿಲೇವಾರಿ ಸಮಸ್ಯೆ ಸದ್ಯ ರಾಜಕೀಯ ದಾಳವಾಗಿ ಪರಿವರ್ತನೆಗೊಂಡಿದೆ ಎಂದರೆ ತಪ್ಪಾಗಲಾರದು.

ಇದಕ್ಕೆ ಪುಷ್ಟಿಕೊಡುವಂತೆ ನಮ್ಮ ಪಕ್ಷ ಅಧಿಕಾರವಧಿಯಲ್ಲಿ ಕಸ ಹಾಕಿಲ್ಲವೆಂದು ಮಾಜಿ ಸಚಿವ ರಾಮ್ ದಾಸ್ ಸಮರ್ಥಿಸಿಕೊಂಡರೇ, ಇತ್ತ ಶಾಸಕ ಸೋಮಶೇಖರ್, ನಮ್ಮ ಪಕ್ಷದ ಅಧಿಕಾರವಧಿಯಲ್ಲಿ ಕಸ ಹರಡಿಲ್ಲವೆಂದು ಮತ್ತೊಂದು ಕಡೆ ವಾಗ್ಯುದ್ಧ. ಇದಕ್ಕೆಲ್ಲಾ ಕಾರಣವಾಗಿದ್ದು ಉಭಯ ನಾಯಕರ ಸುದ್ದಿಗೋಷ್ಠಿಯ ವೇದಿಕೆ.

ಶಾಸಕ .ಕೆ. ಸೋಮಶೇಖರ್ ಹೇಳಿದ್ದಿಷ್ಟು ?
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಾಪದ ಪಿಂಡ ಎಂಬ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಕೇಂದ್ರ ಸಚಿವರ ವಿರುದ್ಧ ವಾಗ್ದಳಿ ನಡೆಸಿದರು. ರಾಜ್ಯದಲ್ಲಿ ಯಾವುದೇ ಹೆಣ ಬಿದ್ದರೂ ರಾಜಕಾರಣ ಮಾಡೋದಕ್ಕೆ ಓಡೋಡಿ ಹೋಗುತ್ತಾರೆ. ಎಲ್ಲಂದರಲ್ಲಿ ಬೆಂಕಿ ಹಚ್ಚುತ್ತಾರೆ. ಶಿಸ್ತಿನ ಪಕ್ಷ ಎಂದುಕೊಳ್ಳುವ ಬಿಜೆಪಿಯವರು. ಮೊದಲು ಸಾವಿನ ಹೆಸರಲ್ಲಿ ರಾಜಕಾರಣ ಮಾಡುವುದನ್ನು ನಿಲ್ಲಿಸಲಿ ಎಂದರು.

congress MLA and BJP ex-MLA s’ Garbage Politics in Mysuru

ಎಸ್. ಎ ರಾಮದಾಸ್ ಉಸ್ತುವಾರಿ ಸಚಿವರಾಗಿದ್ದಾಗ ಯಾಕೆ ಕಸದ ಸಮಸ್ಯೆ ಬಗೆಹರಿಸಲಿಲ್ಲ. ಇವರ ಅವದಿಯಲ್ಲಿ ಒಂದೇ ಒಂದು ಟನ್ ಕಸ ಕಡಿಮೆ ಮಾಡಲ್ಲಿಲ್ಲ . ಆಗ ಇವರ ಮೂಗಿಗೆ ಕಸದ ವಾಸನೇ ಬಡಿಯಲಿಲ್ಲವೇ..? ಆದ್ರೆ ಈಗ ಉಪವಾಸ ಮಾಡ್ತಿನಿ ಅಂತಾ ಡ್ರಾಮ ಮಾಡೋ ಮೂಲಕ ಡೋಂಗಿ ರಾಜಕೀಯ ಮಾಡ್ತಿದ್ದಾರೆ.

ರಾಮದಾಸ್ ಗೆ ತಾಕತ್ತಿದ್ದರೆ ಅವರು ಸಚಿವರಾಗಿದ್ದಾಗ ಕಸದ ಸಮಸ್ಯೆ ಬಗೆಹರಿಸಲು ಕೈಗೊಂಡ ದಾಖಲೆ ಬಿಡುಗಡೆ ಮಾಡಲಿ. ಇನ್ನೆರಡು ತಿಂಗಳಲ್ಲಿ ಜೆ ಪಿ ನಗರದ ಎಕ್ಸ್ ಎಲ್ ಪ್ಲಾಂಟ್ ನ ಕಸದ ಸಮಸ್ಯೆ ಸಂಪೂರ್ಣ ಬಗೆಹರಿಸುತ್ತೇನೆ. ಆದರೆ ಈಗ ಸಂಸದ ಪ್ರತಾಪ್ ಸಿಂಹ ಹಾಗೂ ರಾಮದಾಸ್ ನಾವೇ ಔಷದಿ ಹೊಡೆಸ್ತಿವಿ ಎಂದು ಮೈಲೇಜ್ ತಗೊಳೋಕೆ ಪ್ರಯತ್ನ ಮಾಡ್ತಿದ್ದಾರೆ. ಇವರ ಈ ಡ್ರಾಮವನ್ನ ಕೆ ಆರ್ ಕ್ಷೇತ್ರದ ಜನ ಸಹಿಸೋದಿಲ್ಲ ಎಂದರು

ಗೆಸ್ಟ್ ಹೌಸ್ ನಲ್ಲಿ ಮಲಗಿದ್ದರಂತೆ ರಾಮ್ ದಾಸ್ !
ಕಳೆದ ನಾಲ್ಕುವರೆ ವರ್ಷಗಳಲ್ಲಿ ಮೈಸೂರಿನ ಸುತ್ತಮುತ್ತಲ ಏಳೆಂಟು ಮನೆಗಳಲ್ಲಿ, ಕಂಡ ಕಂಡ ಗೆಸ್ಟ್ ಹೌಸ್ ಗಳಲ್ಲಿ ರಾಮದಾಸ್ ಮಲಗಿದ್ದು ಈಗ ಕಸದ ವಿಚಾರದಲ್ಲಿ ರಾಜಕೀಯ ಮಾಡೋಕೆ ಬರ್ತಿದ್ದಾರೆ ಎಂದು ಸೋಮಶೇಖರ್ ಲೇವಡಿ ಮಾಡಿದರು. ಈ ವೇಳೆ ಮಾಧ್ಯಮದವರು ಯಾವ ಮನೆ..?, ಯಾವ ಗೆಸ್ಟ್ ಹೌಸ್ ..? ಎಂದು ಪ್ರಶ್ನಿಸಿದಾಗ, ಸಮಯ ಬಂದಾಗ ಅವರು ಯಾವಾ ಯಾವ ಗೆಸ್ಟ್ ಹೌಸ್ ನಲ್ಲಿ ಮಲಗಿದ್ರು ಅಂತಾ ಹೇಳುತ್ತೇನೆ ಎಂದು ಶಾಸಕ ಸೋಮಶೇಖರ್ ಹಾರಿಕೆ ಉತ್ತರ ನೀಡಿದರು.

ಕಸ ವಿಂಗಡಣೆಗೊಳ್ಳದ ಹಿನ್ನೆಲೆ ಅಮರಣಾಂತ ಉಪವಾಸಕ್ಕೆ ಮುಂದಾದ ರಾಮ್ ದಾಸ್ :
ಸ್ಯೂಯೇಜ್ ಫಾರಂ ಕಸ ಸಂಸ್ಕರಣ ಘಟಕದಿಂದ ಆಗುತ್ತಿರುವ ಪರಿಸರ ಮಾಲಿನ್ಯವನ್ನು ತಡೆಯಲು ಸಾರ್ವಜನಿಕರು, ಸಂಘ ಸಂಸ್ಥೆಗಳು ಮತ್ತು ಶಾಲಾ ಕಾಲೇಜುಗಳ ಸಹಯೋಗದೊಂದಿಗೆ ಡಿ.14 ರಿಂದ ವಿದ್ಯಾರಣ್ಯಪುರಂ ಎಕ್ಸೆಲ್ ಪ್ಲಾಂಟ್ ಎದುರು ಸ್ವಚ್ಛ ಉಸಿರಿಗಾಗಿ ಹೋರಾಟ' ಎಂಬ ಘೋಷ ವ್ಯಾಕದೊಂದಿಗೆ ಅನಿರ್ದಿಷ್ಟ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಾದ್ಯಂತ ಪ್ರತಿ ದಿನ ಅಂದಾಜು 450 ಟನ್ ಕಸವನ್ನು ಸಂಗ್ರಹಿಸಲಾಗುತ್ತಿದೆ. ಸ್ಯೂಯೇಜ್ ಫಾರಂ ನಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಂಸ್ಕರಣ ಘಟಕ ದಿನಕ್ಕೆ 150 ಟನ್ ನಷ್ಟು ಕಸವನ್ನು ಸಂಗ್ರಹಿಸಿ ಸಂಸ್ಕರಣೆ ಮಾಡಲಾಗುತ್ತಿದೆ. ಆದರೆ ಉಳಿಕೆ ಕಸವನ್ನು ಸಂಸ್ಕರಿಸಲು ರಾಜ್ಯ ಸರ್ಕಾರ, ಜಿಲ್ಲಾಡಳಿತ, ಮುಡಾ, ಜಿಲ್ಲಾ ಪಂಚಾಯಿತಿ, ನಗರಪಾಲಿಕೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಶಾಸಕ ಸೋಮಶೇಖರ್ ಅವರು ಮಾಡಿರುವ ವೈಯಕ್ತಿಕ ಟೀಕಗೆ ಪ್ರತಿಕ್ರಿಯಿಸಿದ ರಾಮದಾಸ್, ನಾನು ಎಲ್ಲೂ ಎಂದೂ ಮಲಗಿಲ್ಲ. ಜನ ನನಗೆ 5 ವರ್ಷ ರಜೆ ನೀಡಿದ್ರು. ಆ ಅವದಿಯಲ್ಲಿ ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಯಾವುದೇ ವೈಯಕ್ತಿಕ ಆರೋಪಕ್ಕೆ ನಾನು ಉತ್ತರ ನೀಡೋದಿಲ್ಲ. ಎಂ ಕೆ ಸೋಮಶೇಖರ್ ಆರೋಪಕ್ಕೆ ಮಾಜಿ ಸಚಿವ ರಾಮದಾಸ್ ಟಾಂಗ್ ನೀಡಿದರು.

English summary
Former MLA Ramdas’s Guest House story alleged by MLA Somashekhar. In the past four years, Somashekhar ridiculed Ramdas’s bedroom story. where he had been politically motivated by the trash. Ramdas responded to the personal criticism of MLA Somashekhar, saying, “I have never been sleeping anywhere. People gave me 5 years of leave. I had studied enough at that time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X