• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆನೆ ಹೋಗುತ್ತೆ, ನಾಯಿ ಬೊಗಳುತ್ತೆ: ಎಚ್.ಸಿ.ಮಹದೇವಪ್ಪ ವ್ಯಂಗ್ಯ

By ಮೈಸೂರು ಪ್ರತಿನಿಧಿ
|

ಮೈಸೂರು, ಫೆಬ್ರವರಿ 27: ಆನೆ ಹೋಗುತ್ತದೆ, ನಾಯಿ ಬೊಗಳುತ್ತದೆ, ಅದರಿಂದ ಏನು ಆಗೋಲ್ಲ. ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ವಿಚಾರಕ್ಕೆ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಖಾರವಾದ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಎಚ್.ಸಿ.ಮಹದೇವಪ್ಪ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾನ್ ನಾಯಕರ ವಿರುದ್ಧ ದೂಷಣೆ ಮಾಡಿದ್ದರು, ಘೋಷಣೆಯನ್ನೂ ಕೂಗಿದ್ರು, ಆದ್ರೆ ಅವರ ಹೆಸರುಗಳೇನು ಚರಿತ್ರೆಯಲ್ಲಿ ಹಾಳಾಯ್ತಾ? ಹಾಗೆಯೇ ಸಿದ್ದರಾಮಯ್ಯ ವಿರುದ್ಧ ಕೂಗಿದ ಘೋಷಣೆಗೆ ಮಹತ್ವ ಕೊಡಬೇಕಿಲ್ಲ ಎಂದು ಹೇಳಿದರು.

ತವರು ಜಿಲ್ಲೆಯಲ್ಲಿ ನಡೆಯದ ಸಿದ್ದರಾಮಯ್ಯರ ಆಟ..!ತವರು ಜಿಲ್ಲೆಯಲ್ಲಿ ನಡೆಯದ ಸಿದ್ದರಾಮಯ್ಯರ ಆಟ..!

ಶಾಸಕ ತನ್ವೀರ್ ವಿರುದ್ಧ ಕೆಪಿಸಿಸಿ ಅಧ್ಯಕ್ಷರು ತೀರ್ಮಾನ ಕೈಗೊಳ್ಳುತ್ತಾರೆ. ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ್ದು ದುರಾದೃಷ್ಟಕರ ವಿಚಾರ. ಸಿದ್ದರಾಮಯ್ಯ ಒಬ್ಬ ಶ್ರೇಷ್ಠ ನಾಯಕ. ಬಡವರ ಬಗ್ಗೆ ಅಪಾರ ಕಾಳಜಿ ಇದೆ. ಜನರ ನಾಡಿಮಿಡಿತಗಳನ್ನು ಸಿದ್ದರಾಂಯ್ಯ ಚೆನ್ನಾಗಿ ಅರಿತಿದ್ದಾರೆ ಎಂದರು.

ನಾಡಿನ ಅಗ್ರಗಣ್ಯ ನಾಯಕರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು. ಪಕ್ಷದಲ್ಲಿ ಕೆಲ ಅಸಮಾಧಾನ ಭುಗಿಲೇಳುವುದು ಸರ್ವೇಸಾಮಾನ್ಯ, ಕಾರ್ಯಕರ್ತರು ಇದನ್ನ ಅರ್ಥ ಮಾಡಿಕೊಳ್ಳಬೇಕು ಅಂತ ಹೇಳಿದರು.

ಸಿದ್ದರಾಮಯ್ಯರನ್ನು ಅರ್ಥ ಮಾಡಿಕೊಳ್ಳದೆ ಕೆಲವರು ಘೋಷಣೆ ಕೂಗಿದ್ದು ಸರಿಯಲ್ಲ. ಈ ರೀತಿ ಬೆಳವಣಿಗೆ ಸ್ಥಳೀಯ ಕಾಂಗ್ರೆಸ್ ಸಂಘಟನೆಗೆ ಆರೋಗ್ಯಕರವಲ್ಲ. ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಯಾರೂ ಕೂಡ ಧಕ್ಕೆ ತರುವುದಕ್ಕೆ ಆಗೋದಿಲ್ಲ. ಕೆಪಿಸಿಸಿ ಅಧ್ಯಕ್ಷರು ಎಲ್ಲ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹೀಗಾಗಿ ತನ್ವೀರ್ ಹಾಗೂ ಕಾರ್ಯಕರ್ತರ ಅಂತ ಅವರೇ ಕ್ರಮಕೈಗೊಳ್ತಾರೆ ಎಂದು ಮಾಜಿ ಸಚಿವ ಎಚ್.ಸಿ ಮಹದೇವಪ್ಪ ತಿಳಿಸಿದರು.

English summary
Former minister HC Mahadevappa responded that the slogan against Siddaramaiah should not be emphasized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X