ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ಕೊನೆಗೂ ಒಂದಾದ ಜೆಡಿಎಸ್-ಕಾಂಗ್ರೆಸ್

|
Google Oneindia Kannada News

ಮೈಸೂರು, ಏಪ್ರಿಲ್ 08: ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಮುಸಿನು ಮೇಲ್ನೋಟಕ್ಕೆ ಉಗಿದಂತೆ ಕಾಣುತ್ತಿದೆ.

ನಿನ್ನೆ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಜೊತೆಯಾಗಿ ಜಂಟಿ ಪತ್ರಿಕಾಗೋಷ್ಠಿ ನಡಸಿ, ನಮ್ಮಲ್ಲಿನ ಅಸಮಾಧಾನ ಕೊನೆಗೊಂಡಿದೆ ಎಂದು ತೋರಿಸಿದ್ದಾರೆ. ಆದರೆ ಮಾಧ್ಯಮಗಳ ಮುಂದೆ ತೋರಿದ ಈ ಒಗ್ಗಟ್ಟು ಪ್ರಚಾರ ಕಣದಲ್ಲಿಯೂ ಕಾಣುತ್ತದೆಯಾ ಎಂದು ನೋಡಬೇಕಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ ನಿಂದ ವಿಜಯಶಂಕರ್ ಅವರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಎದುರು ಚುನಾವಣೆಗೆ ನಿಂತಿದ್ದಾರೆ. ಆದರೆ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ನಡುವೆ ಸಮನ್ವಯದ ಕೊರತೆ ಏರ್ಪಟ್ಟಿತ್ತು.

ಮೈಸೂರಿನಲ್ಲಿ ನಾಳೆಯಿಂದ ಒಂದಾದ ಮೇಲೆ ಒಂದರಂತೆ ಚುನಾವಣಾ ಪ್ರಚಾರಮೈಸೂರಿನಲ್ಲಿ ನಾಳೆಯಿಂದ ಒಂದಾದ ಮೇಲೆ ಒಂದರಂತೆ ಚುನಾವಣಾ ಪ್ರಚಾರ

ಚುನಾವಣೆ ಘೋಷಣೆ ಆಗಿ ಇಷ್ಟು ದಿನವಾದರೂ ಸಹ ಮೈಸೂರಿನಲ್ಲಿ ಜೆಡಿಎಸ್ ಮುಖಂಡರು ವಿಜಯಶಂಕರ್ ಪರ ಪ್ರಚಾರಕ್ಕೆ ಇಳಿದಿರಲಿಲ್ಲ. ವಿಜಯಶಂಕರ್ ಅವರ ಪ್ರಚಾರ ಕಾರ್ಯಕ್ರಮಗಳಲ್ಲಿ ಜೆಡಿಎಸ್ ಮುಖಂಡರನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಮೈತ್ರಿ ಪಕ್ಷಗಳ ಕಾರ್ಯಕರ್ತರ ಮಧ್ಯೆ ಅಸಮಾಧಾನವಿತ್ತು

ಮೈತ್ರಿ ಪಕ್ಷಗಳ ಕಾರ್ಯಕರ್ತರ ಮಧ್ಯೆ ಅಸಮಾಧಾನವಿತ್ತು

ಜಿ.ಟಿ.ದೇವೇಗೌಡ ಅವರಂತೂ 'ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತರೆ, ನಾವು ಜವಾಬ್ದಾರರಲ್ಲ' ಎಂದು ಬಹಿರಂಗವಾಗಿ ಹೇಳಿದ್ದರು, ಇದು ಎರಡೂ ಪಕ್ಷದ ಮುಖಂಡರ ನಡುವೆ ಅಸಮಾಧಾನ ಹೆಚ್ಚಿಸಿತ್ತು, ಮತ್ತು ಕಾಂಗ್ರೆಸ್‌ಗೆ ಸೋಲಿನ ಆತಂಕ ತಂದಿತ್ತು.

ಮೈಸೂರಿಗೆ ನಾಳೆ ಪ್ರಧಾನಿ ಮೋದಿ ಆಗಮನ:ಪೊಲೀಸರಿಂದ ಬಿಗಿ ಭದ್ರತೆಮೈಸೂರಿಗೆ ನಾಳೆ ಪ್ರಧಾನಿ ಮೋದಿ ಆಗಮನ:ಪೊಲೀಸರಿಂದ ಬಿಗಿ ಭದ್ರತೆ

ಕಾಂಗ್ರೆಸ್-ಜೆಡಿಎಸ್ ಮುಖಂಡರ ಸಭೆ

ಕಾಂಗ್ರೆಸ್-ಜೆಡಿಎಸ್ ಮುಖಂಡರ ಸಭೆ

ಆದರೆ ನಿನ್ನೆ (ಭಾನುವಾರ) ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್, ಸಚಿವ ಜಿ.ಟಿ.ದೇವೇಗೌಡ, ಸಾರಾ.ಮಹೇಶ್ ಮತ್ತು ಕಾಂಗ್ರೆಸ್‌ನ ಎಚ್‌ಸಿ ಮಹದೇವಪ್ಪ, ಯತೀಂದ್ರ ಸಿದ್ದರಾಮಯ್ಯ, ತನ್ವೀರ್ ಸೇಠ್ ಅವರು ಸಭೆ ನಡೆಸಿ ನಂತರ ಸುದ್ದಿಗೋಷ್ಠಿ ನಡೆಸಿ ಜಂಟಿಯಾಗಿ ಪ್ರಚಾರ ಮಾಡುವುದಾಗಿ ಘೋಷಿಸಿದರು, ಅಂತೆಯೇ ಇಂದು ಹುಣಸೂರಿನಿಂದ ಪ್ರಚಾರ ಆರಂಭಿಸಿದ್ದಾರೆ.

ಲೋಕಸಮರ:ಕೊಳ್ಳೇಗಾಲದ ಆ ಜ್ಯೋತಿಷಿ ಪ್ರಕಾರ ಗೆಲ್ಲುವವರು ಯಾರು?ಲೋಕಸಮರ:ಕೊಳ್ಳೇಗಾಲದ ಆ ಜ್ಯೋತಿಷಿ ಪ್ರಕಾರ ಗೆಲ್ಲುವವರು ಯಾರು?

ದೇವೇಗೌಡ-ಸಿದ್ದರಾಮಯ್ಯ ಜಂಟಿ ಪ್ರಚಾರ

ದೇವೇಗೌಡ-ಸಿದ್ದರಾಮಯ್ಯ ಜಂಟಿ ಪ್ರಚಾರ

ಏಪ್ರಿಲ್ 12 ರಂದು ಜೆಡಿಎಸ್ ಮುಖಂಡ ದೇವೇಗೌಡ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಜಂಟಿಯಾಗಿ ಮೈಸೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ, ಏಪ್ರಿಲ್ 13 ರಂದು ರಾಹುಹಲ್ ಗಾಂಧಿ ಅವರು ಮೈಸೂರಿಗೆ ಆಗಮಿಸುವವರಿದ್ದಾರೆ.

ಕರ್ನಾಟಕದ ಲೋಕಸಭಾ ಸದಸ್ಯರಲ್ಲಿ ಯಾರು ಎಷ್ಟು ಓದಿದ್ದಾರೆ?

ಪ್ರತಾಪ್ ಸಿಂಹ-ವಿಜಯಶಂಕರ್ ನಡುವೆ ಸ್ಪರ್ಧೆ

ಪ್ರತಾಪ್ ಸಿಂಹ-ವಿಜಯಶಂಕರ್ ನಡುವೆ ಸ್ಪರ್ಧೆ

ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರತಾಪ್ ಸಿಂಹ ಅವರು ಇದ್ದು, ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪರಸ್ಪರ ಸಮನ್ವಯದಿಂದ ಪ್ರಚಾರ ಮಾಡಿದ್ದೇ ಆದಲ್ಲಿ ಪ್ರತಾಪ್ ಸಿಂಹ ಅವರಿಗೆ ಗೆಲುವು ಕಷ್ಟವಾಗುವ ಸಾಧ್ಯತೆ ಇದೆ. ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿಯಾಗಿ ವಿಜಯಶಂಕರ್ ಅವರು ಕಣಕ್ಕೆ ಇಳಿದಿದ್ದಾರೆ.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

English summary
Congerss leaders and JDS leaders did meeting in Mysuru and clears them problems and join hands together to defeat BJP candidate Prathap Simha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X