ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಜಿಪಂ ಉಪಾಧ್ಯಕ್ಷರ ಆಯ್ಕೆ: ಅಸಮಾಧಾನ ಶಮನಕ್ಕೆ ಹರಸಾಹಸ

|
Google Oneindia Kannada News

Recommended Video

ಮೈಸೂರು ಜಿಪಂ ಉಪಾಧ್ಯಕ್ಷರ ಆಯ್ಕೆ: ಅಸಮಾಧಾನ ಶಮನಕ್ಕೆ ಹರಸಾಹಸ | Oneindia Kannada

ಮೈಸೂರು, ಫೆಬ್ರವರಿ 23 : ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ನಡೆಯುತ್ತಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ - ಜೆಡಿಎಸ್ ಮೈತ್ರಿಗೆ ಸ್ವತಃ ಕೈ ಪಾಳಯದ ಅಭ್ಯರ್ಥಿಗಳಿಂದಲೇ ಅಸಮಾಧಾನ ಏರ್ಪಟ್ಟಿದೆ.

ಏಕಪಕ್ಷೀಯವಾಗಿ ಕಾಂಗ್ರೆಸ್ ನಾಯಕರು ನಿರ್ಧಾರ ತೆಗೆದುಕೊಂಡಿದ್ದಾರೆಂದು ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಅಭ್ಯರ್ಥಿಯ ವಿರುದ್ಧ ಅಪಸ್ವರ ಎದ್ದಿದೆ.

ಮೈಸೂರು ಜಿ.ಪಂ.ನಲ್ಲಿ ಮೈತ್ರಿ ಕಗ್ಗಂಟು:ನಾಳೆ ಸಿಗಲಿದೆಯಾ ಉತ್ತರ? ಮೈಸೂರು ಜಿ.ಪಂ.ನಲ್ಲಿ ಮೈತ್ರಿ ಕಗ್ಗಂಟು:ನಾಳೆ ಸಿಗಲಿದೆಯಾ ಉತ್ತರ?

ಕಾಂಗ್ರೆಸ್ ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರು ಉಪಾಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಆಕಾಂಕ್ಷಿಯಾಗಿದ್ದರು. ಕಳೆದ ಬಾರಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋಲನ್ನು ಕೂಡ ಅನುಭವಿಸಿದ್ದರು. ಆದರೆ ಹೈಕಮಾಂಡ್ ನಿರ್ಧಾರ ಅಂತ ನಮ್ಮನ್ನು ಕಡೆಗಣಿಸಿದರು ಎಂದು ಆಕ್ರೋಶ ಹೊರಹಾಕಿದ್ದಾರೆ.

Congress JDS coalition government problem in Mysuru ZP

ಕಾಂಗ್ರೆಸ್ ನಲ್ಲಿ ಸಾಮಾಜಿಕ ನ್ಯಾಯವಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಮೀಸಲಾತಿ ಬಂದಿದೆ. ಆದರೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಆದರೂ ನಾನು ಆಕಾಂಕ್ಷಿಯಾಗಿದ್ದರೂ, ನಮ್ಮ ಮನವಿ ಪುರಸ್ಕರಿಸದೆ ತಿರಸ್ಕಾರ ಮಾಡಿದ್ದಾರೆ.

ಎರಡು ಹುದ್ದೆಗಳಿಗೆ ಮಹಿಳೆಯರನ್ನೇ ಆಯ್ಕೆ ಮಾಡಿದ್ದಾರೆ. ಇದು ಆಡಳಿತ ನಡೆಸುವುದಕ್ಕೆ ಅಷ್ಟು ಸೂಕ್ತವಲ್ಲ. ಜಿಲ್ಲೆಯ ಯಾವ ಕಾಂಗ್ರೆಸ್ ನಾಯಕರು ನಮ್ಮ ಮಾತಿಗೆ ಬೆಲೆ ಕೊಟ್ಟಿಲ್ಲ. ನಮ್ಮ ನಾಯಕರಾದ ಸಿದ್ದರಾಮಯ್ಯನವರ ಗಮನಕ್ಕೆ ತರುತ್ತೇವೆ. ಮುಂದೆ ಹೀಗೆ ಆಗದಂತೆ ಪಕ್ಷದ ಗಮನಕ್ಕೆ ತರಲು ಪ್ರಯತ್ನ ಮಾಡುತ್ತೇವೆ.

ಮೈಸೂರು ಜಿಪಂನಲ್ಲಿ ಅಧಿಕಾರಕ್ಕಾಗಿ ಜೆಡಿಎಸ್-ಕಾಂಗ್ರೆಸ್ ಕಸರತ್ತು ಮೈಸೂರು ಜಿಪಂನಲ್ಲಿ ಅಧಿಕಾರಕ್ಕಾಗಿ ಜೆಡಿಎಸ್-ಕಾಂಗ್ರೆಸ್ ಕಸರತ್ತು

ಇದರಿಂದ ನಮಗೆ ಅಸಮಾಧಾನ ಆಗಿರುವುದು ನಿಜ. ಆದರೂ ನಾವು ಪಕ್ಷದಲ್ಲಿ ಇರುತ್ತೇವೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತೇನೆ ಎಂದಿದ್ದಾರೆ. ಕೃಷ್ಣ ಅವರೊಟ್ಟಿಗೆ ರಾವಂದೂರು ಕ್ಷೇತ್ರದ ಮಣಿ ಹಾಗೂ ಹಾರೋವಳ್ಳಿ ಕ್ಷೇತ್ರದ ಭಾಗ್ಯ ಸಾಥ್ ನೀಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ನಾಯಕರು ಕೃಷ್ಣರವರೊಂದಿಗೆ ಮಾತುಕತೆ ನಡೆಸಿದರು. ಇದಾದ ಬಳಿಕ ಹೇಳಿಕೆ ನೀಡಿದ ಕೃಷ್ಣರವರು, ನಮ್ಮ ಕೆಲ ಕೈ ಅಭ್ಯರ್ಥಿಗಳು ಗೌರಮ್ಮ ಅವರ ಆಯ್ಕೆಗೆ ಅಸಮಾಧಾನ ಹೊರ ಹಾಕಿದ್ದು ನಿಜ.

ಮೈಸೂರು ಜಿ.ಪಂ.ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿ ಮೈಸೂರು ಜಿ.ಪಂ.ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿ

ಆದರೆ ವರಿಷ್ಠರ ಸೂಚನೆ ಮೇರೆಗೆ ನಾವು ತಲೆಬಾಗಬೇಕಿದೆ. ಸ್ಥಳೀಯ ಮುಖಂಡರು ವೈಯಕ್ತಿಕ ನಿರ್ಧಾರದಿಂದ ಸ್ಥಾನ ತಪ್ಪಿದೆ. ಆದರೆ ಮುಂದೆ ಒಳ್ಳೆಯ ಸ್ಥಾನ ಸಿಗಲಿದೆ. ಸದ್ಯ ವರಿಷ್ಠರ ಸೂಚನೆಯಂತೆ ನಾವೆಲ್ಲ ಒಟ್ಟಾಗಿ ಹೋಗುತ್ತೇವೆ ಎಂದು ಬೇಸರದಿಂದಲೇ ಮರು ಹೇಳಿಕೆಯನ್ನು ನುಡಿದರು.

English summary
For Mysuru Zilla panchayath there is conflict between congress and JDS coalition. Local leaders apposing the present form.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X