ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಮನೆ ಮುಂದೆ ಯೋಗ ಮಾಡಿದ್ದಕ್ಕೆ ಕಾಂಗ್ರೆಸ್‌ ಕಿಡಿ

|
Google Oneindia Kannada News

ಮೈಸೂರು, ಜೂ22. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಅರಮನೆ ಮುಂದೆ ಬಿಜೆಪಿಯವರು ಯೋಗಾಭ್ಯಾಸ ಮಾಡಿದ್ದಕ್ಕೆ ಕಾಂಗ್ರೆಸ್‌ ಖಂಡಿಸಿದೆ.

ರಾಜ್ಯ ಸರ್ಕಾರ ಶಾಲಾ ಮಕ್ಕಳ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಸಾಕಷ್ಟು ವಿವಾದ ಸೃಷ್ಟಿಸಿದ್ದಲ್ಲದೆ ಹಲವಾರು ಸಾಹಿತಿಗಳು ಲೇಖಕರು ತಮ್ಮ ಕವಿತೆ ಲೇಖನಗಳನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು. ಅಲ್ಲದೆ ಹಲವಾರು ಸಂಘಟನೆಗಳು ಬೃಹತ್‌ ಪ್ರತಿಭಟನೆಯನ್ನು ಮಾಡಿದ್ದವು. ಮೈಸೂರಿನ ಅರಸರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪಠ್ಯವನ್ನು ಕೈಬಿಟ್ಟು ಈಗ ಅವರು ರಾಜ್ಯಭಾರ ಮಾಡಿದ ಅರಮನೆ ಮುಂದೆ ಯೋಗಾಭ್ಯಾಸ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.

ಮೋದಿ ಜೊತೆ ಸಂವಾದ; ಸಂತಸ ಹಂಚಿಕೊಂಡ ಮಂಡ್ಯದ ನಿತೀಶ್ ಕುಮಾರ್ಮೋದಿ ಜೊತೆ ಸಂವಾದ; ಸಂತಸ ಹಂಚಿಕೊಂಡ ಮಂಡ್ಯದ ನಿತೀಶ್ ಕುಮಾರ್

ಈ ಬಗ್ಗೆ ಟ್ವಿಟ್‌ ಮಾಡಿ ಕರ್ನಾಟಕ ಕಾಂಗ್ರೆಸ್‌ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ನೆಲದಲ್ಲಿ ನಿಂತು ಯೋಗ ಮಾಡುವ ಬಿಜೆಪಿಗರೇ, ಅದೇ ರಾಜರ್ಷಿ ನಾಲ್ವಡಿಯವರ ಪಠ್ಯವನ್ನು ಕಿತ್ತು ಹಾಕಿ ವಿಕೃತಿ ಮೆರೆದಿದ್ದೀರಲ್ಲ ನಾಚಿಕೆಯಾಗುವುದಿಲ್ಲವೇ ನಿಮಗೆ? ಎಂದಿರುವ ಕಾಂಗ್ರೆಸ್‌ ಸಂವಿಧಾನಕ್ಕೂ ಮೊದಲೇ ತಳಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದ ಮಹಾಪುರಷನಿಗೆ ಮಾತ್ರವಲ್ಲ ಇದು ಇಡೀ ಕರುನಾಡಿಗೆ ಎಸಗಿದ ದ್ರೋಹ ನೆನಪಿರಲಿ ಎಂದು ಬರೆದುಕೊಂಡಿದೆ.

Congress blames BJP for doing yoga in front of palace

ಇದಕ್ಕೂ ಮೊದಲು ಅರಮನೆ ಮುಂದೆ ಯೋಗಭ್ಯಾಸ ಮಾಡಿದ ಪೋಟೋವನ್ನು ಬಿಜೆಪಿ ಹಂಚಿಕೊಂಡಿದ್ದು, ರಾಜರ್ಷಿ ನಾಲ್ವಡಿಯವರ ರಾಜನಗರಿಯಲ್ಲಿ ಮೋದಿ ಜೀ ಅವರ ಉಪಸ್ಥಿತಿ ಮೈಸೂರಿನಿಂದ ಯೋಗ ಕಹಳೆ ಮೊಳಗಿದ ಯೋಗಾಯೋಗದ ಉದ್ದೇಶ ಸಂದೇಶ ಸ್ಪಷ್ಟವಿದೆ. ನಮ್ಮ ನಾಡಿನ ಸಂಸ್ಕೃತಿ, ಆಚಾರ ವಿಚಾರಗಳೇ ನಮ್ಮನ್ನು ಕೈಹಿಡಿದು ನಡೆಸುವ ನಂದಾದೀಪಗಳು ಎಂದು ಬಿಜೆಪಿ ಟ್ವಿಟ್‌ ಮಾಡಿತ್ತು.

ಚಾಮುಂಡಿ ಬೆಟ್ಟಕ್ಕೆ ಮೋದಿ ಭೇಟಿ, ರಾಜಕೀಯ ಹಿನ್ನಡೆ ಆರಂಭ: ಜ್ಯೋತಿಷಿಚಾಮುಂಡಿ ಬೆಟ್ಟಕ್ಕೆ ಮೋದಿ ಭೇಟಿ, ರಾಜಕೀಯ ಹಿನ್ನಡೆ ಆರಂಭ: ಜ್ಯೋತಿಷಿ

ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ ಹಿನ್ನೆಲೆಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.

Congress blames BJP for doing yoga in front of palace

ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮೈಸೂರಿನ ಅರಮನೆ ಆವರಣದಲ್ಲಿ ನಡೆದ ಯೋಗ ಕಾರ್ಯಕ್ರಮ ಅತ್ಯಂತ ಅವಿಸ್ಮರಣೀಯವಾದುದು. ಈ ಯಶಸ್ಸಿಗೆ ಕಾರಣೀಭೂತರಾದ ಯೋಗಪಟುಗಳು, ನಾಗರಿಕರು, ಅಧಿಕಾರಿಗಳು, ಜನಪ್ರತಿನಿಧಿಗಳು, ಮಾಧ್ಯಮ ಮಿತ್ರರು, ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದರು. ಮೈಸೂರಿನಲ್ಲಿ ನಡೆದ ಯೋಗಾ ದಿನಾಚರಣೆಯಲ್ಲಿ 1 ಗಂಟೆ 15 ನಿಮಿಷಗಳ ಯೋಗ ಕಾರ್ಯಕ್ರಮದಲ್ಲಿ 15 ಸಾವಿರ ಜನ ಪಾಲ್ಗೊಂಡಿದ್ದರು.

English summary
Congress condemns BJP doing yoga practice in front of palace as part of International Yoga Day,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X