ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೂಯೆಜ್ ಫಾರಂ ಪ್ರಾಜೆಕ್ಟ್‌ ಬಗ್ಗೆ ಮೊದಲು ಮಾಹಿತಿ ಕೊಡಿ; ಶಾಸಕ ರಾಮದಾಸ್‌ ತಿರುಗೇಟು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 08: ಸೂಯೆಜ್ ಫಾರಂ ಪ್ರಾಜೆಕ್ಟ್ ಅಂದರೆ ಏನು ಅಂತ ಶಾಸಕನಾದ ನನಗೇ ಇನ್ನೂ ಗೊತ್ತಿಲ್ಲ. ಮೊದಲು ಈ ಯೋಜನೆಯನ್ನು ಜನರ ಮುಂದೆ ತನ್ನಿ, ನಂತರ ಜಾರಿಗೊಳಿಸಿ ಎಂದು ಶಾಸಕ ರಾಮದಾಸ್‌ ಅವರು ಸಂಸದ ಪ್ರತಾಪ್‌ ಸಿಂಹ ಅವರಿಗೆ ತಿರುಗೇಟು ನೀಡಿದ್ದಾರೆ.

Recommended Video

MP ಪ್ರತಾಪ್ ಸಿಂಹ VS MLA ರಾಮ್ ದಾಸ್...ಸಮರ ಅಲ್ವಂತೆ ಚರ್ಚೆಯಂತೆ!!ಭಿನ್ನಾಭಿಪ್ರಾಯ ಯಾಕೆ?

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕರು, ಪಾಲಿಕೆ ಮೇಯರ್ ಹಾಗೂ ಅಧಿಕಾರಿಗಳು ನಾಗಪುರಕ್ಕೆ ಹೋಗಿದ್ದೇ ನನಗೆ ಗೊತ್ತಿಲ್ಲ. ನಾನು ಕೆ.ಆರ್.ಕ್ಷೇತ್ರದ ಶಾಸಕನಾಗಿದ್ದೇನೆ. ಆದರೂ ಈ ವಿಚಾರವೇ ಗೊತ್ತಿಲ್ಲ. ನಿಮ್ಮ ಯೋಜನೆ ಏನು? ಇದರಿಂದ ಜನರಿಗೇನು ಅನುಕೂಲ? ಇದನ್ನು ಮೊದಲು ಜನರ ಮುಂದೆ ತರುವ ಕೆಲಸ ಮಾಡಿ. ಯಾವಾಗ ಮಾಡಿದ್ದಾರೆ ಎಂಬುದು ಕೂಡ ನನಗೆ ಗೊತ್ತಿಲ್ಲ ಎಂದರು.

ಮೈಸೂರಿನಲ್ಲಿ ರೈತರ ಕ್ಯಾಂಟೀನ್ ಮೈಸೂರಿನಲ್ಲಿ ರೈತರ ಕ್ಯಾಂಟೀನ್ "ಭೋಜನ ಮಂದಿರ" ಉದ್ಘಾಟನೆ

ಮೂರು ದಿನಗಳ ಹಿಂದೆ ಉಸ್ತುವಾರಿ ಸಚಿವ ಸೋಮಶೇಖರ್‌ ಅವರ ಎದುರೇ ಅಧಿಕಾರಿಗಳ ಸಭೆಯಲ್ಲಿ ಸಂಸದ ಸಿಂಹ ಮತ್ತು ರಾಮದಾಸ್‌ ನಡುವೆ ಈ ಕುರಿತು ಮಾತಿನ ಚಕಮಕಿ ನಡೆದಿತ್ತು.

Ramdas Pratap Simha Argument On Suyej Farm Project

ಇದೇ ವೇಳೆ ಸಂಸದರು ಮತ್ತು ಶಾಸಕರ ವಾಕ್ ಸಮರ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, "ಅದು ಮಾತಿನ ಸಮರ ಅಲ್ಲ, ಒಂದು ಚರ್ಚೆ ಅಷ್ಟೇ. ಸೂಯೆಜ್ ಫಾರಂ ಕಸದ ಸಮಸ್ಯೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಅಲ್ಲಿನ ರಾಶಿ ರಾಶಿ ಕಸಕ್ಕೆ ಮುಕ್ತಿಯೇ ಸಿಕ್ಕಿರಲಿಲ್ಲ. ಇಲ್ಲಿಯವರೆಗೆ ಸಚಿವರು ಆಗಿದ್ದರೂ ಅದಕ್ಕೆ ಮುಕ್ತಿ ಕೊಟ್ಟಿರಲಿಲ್ಲ. ಸಚಿವರಾಗಿ ಸೋಮಣ್ಣ ಅವರು ಬಂದಾಗ ಈ ಬಗ್ಗೆ ಹೇಳಿದ್ದೆ. ಪ್ಲಾಂಟ್ ಅಕ್ಕಪಕ್ಕದಲ್ಲಿ ಶಾಲೆಗಳು, ವಸತಿ ಬಡಾವಣೆ ಇದೆ.

ಎಲ್ಲರಿಗೂ ಸಮಸ್ಯೆ ಆಗೋ ದೃಷ್ಟಿಯಿಂದ ಕೇಂದ್ರದಿಂದ ಈ ಬಗ್ಗೆ ಯೋಜನೆ ಸಿದ್ಧಪಡಿಸಿದ್ದೇವೆ. ಇದೀಗ ಟೆಂಡರ್ ಕರೆಯೋದೊಂದೇ ಬಾಕಿ. ಆದರೆ ಈ ವೇಳೆ ಹೊಸದಾಗಿ ಟೆಂಡರ್ ಕರೆಯಬೇಕು ಅಂದರೆ ಅರ್ಥ ಇಲ್ಲ. ಯಾರು ಏನೇ ಹೇಳಿದರು ಈ ಪ್ರಾಜೆಕ್ಟ್ ಮಾಡಿಯೇ ತಿರುತ್ತೇನೆ. ಈ ಯೋಜನೆಯಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ" ಎಂದು ಶಾಸಕ ರಾಮದಾಸ್‌ಗೆ ಖಾರವಾಗಿ ತಿರುಗೇಟು ನೀಡಿದರು.

English summary
"I dont know what is suyej farm project. Bring this project infront of people" Ramdas spoke against pratap simha in mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X