ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೋರ್ಜರಿ ಆರೋಪದಲ್ಲಿ ನಾಲ್ವರು ಸಹಾಯಕ ಪ್ರಾಧ್ಯಾಪಕರು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 6: ನಕಲಿ ಪತ್ರ ಸೃಷ್ಟಿಸಿರುವ ಆರೋಪದ ಮೇಲೆ ನಾಲ್ವರು ಸಹಾಯಕ ಪ್ರಾಧ್ಯಾಪಕರ ಮೇಲೆ ಇನ್ಫೋಟೆಕ್ ಅಂಡ್ ಹೌಸಿಂಗ್ ಡೆವಲಪ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ದೂರು ದಾಖಲಿಸಿದೆ.

ಕಂಪೆನಿಯ ವ್ಯವಸ್ಥಾಪಕ ಎನ್.ಎಸ್.ನಂಜುಂಡಸ್ವಾಮಿ ಎಂಬುವವರು ದೂರು ದಾಖಲಿಸಿದ್ದು, ಗುಂಡ್ಲುಪೇಟೆಯ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಜಿ.ಮಲ್ಲೇಶ್, ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕುಮಾರ್, ಬಾಲಕರ ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ಯೋಗಾನರಸಿಂಹಾಚಾರಿ ಹಾಗೂ ಕೆ.ಆರ್.ನಗರದ ಸರ್ಕಾರಿ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿಜಯ್ ವಿರುದ್ಧ ದೂರು ದಾಖಲಾಗಿದೆ.

ಇನ್ಮುಂದೆ ಆಸ್ತಿ ಪತ್ರ ಫೋರ್ಜರಿ ಮಾಡಿದ್ರೆ ಸಿಕ್ಕಿ ಬೀಳ್ತೀರ ಹುಷಾರ್!ಇನ್ಮುಂದೆ ಆಸ್ತಿ ಪತ್ರ ಫೋರ್ಜರಿ ಮಾಡಿದ್ರೆ ಸಿಕ್ಕಿ ಬೀಳ್ತೀರ ಹುಷಾರ್!

Complaint Against Four Assistant Professors Over Allegations Of Forgery In Mysuru

ಈ ನಾಲ್ವರು ಮೈಸೂರು ತಾಲೂಕಿನ ಕೊಪ್ಪಲೂರು ಗ್ರಾಮದ ಗುರುಕುಲ ಬಡಾವಣೆಯಲ್ಲಿ ನಿವೇಶನ ಹೊಂದಿದ್ದು, ಮನೆ ನಿರ್ಮಾಣಕ್ಕಾಗಿ ನಮ್ಮ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡು ಸಾಲ ಪಡೆದಿದ್ದರು. ಈ ಹಣಕಾಸಿನ ವಿಷಯದ ವ್ಯಾಜ್ಯ ನ್ಯಾಯಾಲಯದಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ಕಂಪನಿಯ ಲೆಟರ್ ಹೆಡ್ ಹಾಗೂ ನನ್ನ ಸಹಿಯನ್ನು ಫೋರ್ಜರಿ ಮಾಡಿ ಹಣ ತೀರುವಳಿಯ ನಕಲಿ ಪತ್ರ ಸೃಷ್ಟಿಸಿದ್ದಾರೆ ಎಂದು ನಂಜುಂಡಸ್ವಾಮಿ ದೂರು ನೀಡಿದ್ದಾರೆ.

ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ

English summary
Infotech and Housing Development Pvt Ltd has lodged a complaint against four assistant professors over allegations of forgery,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X