ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಮ್ಮರಗಾಲ ಗ್ರಾಮದಲ್ಲಿ ಎರಡು ಕೋಮುಗಲಭೆ : ನಿಷೇಧಾಜ್ಞೆ ಜಾರಿ

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 1 : ಕಳೆದ 3 ದಿನಗಳ ಹಿಂದೆಯಷ್ಟೇ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ನಿನ್ನೆ ರಾತ್ರಿ ಎರಡು ಕೋಮುಗಳ ನಡುವೆ ಘರ್ಷಣೆ ಉಂಟಾಗಿದೆ.

6 ದಿನಗಳ ಧರಣಿ ಕೈ ಬಿಟ್ಟ ಜೆಡಿಎಸ್ ಕಾರ್ಯಕರ್ತರು6 ದಿನಗಳ ಧರಣಿ ಕೈ ಬಿಟ್ಟ ಜೆಡಿಎಸ್ ಕಾರ್ಯಕರ್ತರು

ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲ ಕೆಲ ದಿನಗಳ ಹಿಂದೆ ಡಾ. ಬಿ,ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಗಣಿ ಬಳಿದು ಕಿಡಿಗೇಡಿಗಳು ಅಪಮಾನ ಮಾಡಿದ್ದರು. ಈ ನಡುವೆ ಇದೀಗ ಗ್ರಾಮದಲ್ಲಿ ಕೋಮುಗಲಭೆ ಉಂಟಾಗಿದ್ದು, ಎರಡು ಗುಂಪಿನ ಯುವಕರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಇದರಿಂದ ಹಲವರಿಗೆ ಗಾಯಗಳಾಗಿದ್ದು, ಗಾಯಗೊಂಡಿರುವವರನ್ನು ನಂಜನಗೂಡು ಮತ್ತು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಇನ್ನು ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಹೆಮ್ಮರಗಾಲ ಗ್ರಾಮದಲ್ಲಿ ರಾತ್ರಿಯಿಂದಲೆ ನಿಷೇಧಾಜ್ಞೆ (ಸಿ ಆರ್ ಪಿ ಸಿ 144 ಸೆಕ್ಷನ್) ಜಾರಿ ಮಾಡಲಾಗಿದೆ.

Communal clash in Hemmargal village, Nanjangud taluk, Mysuru

ಒಂದು ಕೋಮಿನ ಜನರಿಂದ ಮತ್ತೊಂದು ಕೋಮಿನ ಜನರ ವಿರುದ್ದ ಗ್ರಾಮದ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಪರಿಸ್ಥಿತಿ ನಿಯಂತ್ರಿಸಲು ಕವಲಂದೆ ಮತ್ತು ನಂಜನಗೂಡು ಪೋಲಿಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ನಂಜನಗೂಡು ವಿಭಾಗದ ಡಿವೈಎಸ್ಪಿ ದಿವ್ಯಾ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಇದೇ ವೇಳೆ ಎರಡು ಗುಂಪಿನ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬದನವಾಳು ಗ್ರಾಮದ ಹತ್ತು ಮಂದಿ ಹೆಮ್ಮರಗಾಲ ಗ್ರಾಮದ ಮಹದೇವ ಸ್ವಾಮಿ ಮತ್ತು ಮಹೇಶ ಸೇರಿದಂತೆ ಹದಿನೈದಕ್ಕೂ ಹೆಚ್ಚು ಜನರ ಬಂದನವಾಗಿದೆ. ಗ್ರಾಮದಲ್ಲಿ ಪೋಲಿಸರು ಬೀಡು ಬಿಟ್ಟಿದ್ದಾರೆ.

Communal clash in Hemmargal village, Nanjangud taluk, Mysuru

ಬೀದಿಗಿಳಿದ ಅನ್ನದಾತ : ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ
ಕಳೆದೆರಡು ದಿನಗಳ ಕೆಳಗೆ ಮೈಸೂರಿನಲ್ಲಿ ಜೆಡಿಎಸ್ ಮುಖಂಡರು ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದು ನಮಗೆ ತಿಳಿದಿದೆ. ಇದೇ ಬೆನ್ನಲ್ಲೇ ಇಂದು ಮೈಸೂರಿನ ನಂಜನಗೂಡಿನಲ್ಲಿ ರೈತರು ಬೀದಿಗಿಳಿದಿದ್ದಾರೆ. ಕಬಿನಿ ಜಲಾಶಯದಿಂದ ಎಲ್ಲಾ ನಾಲೆಗಳಿಗೂ ನೀರು ಹರಿಸುವಂತೆ ಒತ್ತಾಯಿಸಿ ನಂಜನಗೂಡಿನಲ್ಲಿ ರೈತರಿಂದ ಉಗ್ರ ಪ್ರತಿಭಟನೆ ನಡೆಯುತ್ತಿದೆ.

ನಂಜನಗೂಡಿನ ಕಪಿಲಾನದಿ ಸೇತುವೆಯ ಮೇಲ್ಭಾಗದಲ್ಲಿ ನೂರಾರು ರೈತರು ದಿಢೀರ್ ಧರಣಿ ನಡೆಸುತ್ತಿದ್ದಾರೆ. ಮೈಸೂರು ನಂಜನಗೂಡು ನಡುವೆ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದ್ದು, ರಸ್ತೆಯ ಇಕ್ಕೆಲಗಳಲ್ಲೂ ವಾಹನಗಳು. ಸಾಲುಗಟ್ಟಿ ನಿಂತಿವೆ. ದೂರದ ಊರುಗಳಿಗೆ ಹೋಗಬೇಕಾಗಿದ್ದ ಪ್ರಯಾಣಿಕರು ಮಾರ್ಗ ಮಧ್ಯದಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಎಲ್ಲಾ ನಾಲೆಗಳಿಗೆ ನೀರು ಬಿಡುಗಡೆ ಮಾಡದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Communal clash in Hemmargal village, Nanjangud taluk, Mysuru

ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮೂರು ಘಂಟೆಗಳು ಕಳೆದರೂ ಅತ್ತಿತ್ತ ಜಗ್ಗುತ್ತಿಲ್ಲ. ಪ್ರತಿಭಟನೆಯ ಸುದ್ದಿ ತಿಳಿದರೂ ಜನಪ್ರತಿನಿಧಿಗಳುಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ರೈತರು ಗರಂ ಆಗಿದ್ದಾರೆ.

ಸುಡು ಬಿಸಿಲಿನಲ್ಲೂ ನಂಜನಗೂಡು ಮೈಸೂರು ಮುಖ್ಯ ರಸ್ತೆತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಜೈಲ್ ಬರೋಗೆ ಸಿದ್ಧರಾಗಿದ್ದಾರೆ.ತಾಲ್ಲೂಕು ಮಟ್ಟದ ಅಧಿಕಾರಿಗಳ ಪೊಳ್ಳು ಭರವಸೆಗೆ ಕಿವಿಗೊಡದೇ ನೀರು ಬಿಡದಿದ್ದರೆ ಸ್ವತಃ ರೈತರೇ ನಾಲೆಗಳಿಗೆ ನೀರು ಬಿಟ್ಟುಕೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

English summary
A communal clash took place in Hemmargal village, Nanjangud taluk, Mysuru after some people blackened founder of Indian constitution B.R.Ambedkar's poster in the village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X