ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿಗೆ ವಿಶ್ವ ಪಾರಂಪರಿಕ ಸ್ಥಾನ ಲಭಿಸಲು ವಿಶೇಷ ದಾಖಲೆಗಳ ಸಂಗ್ರಹ

|
Google Oneindia Kannada News

ಮೈಸೂರು, ಜುಲೈ 9: ಮೈಸೂರನ್ನು ವಿಶ್ವ ಪಾರಂಪರಿಕ ನಗರವನ್ನಾಗಿ ಘೋಷಿಸಲು ಅಗತ್ಯವಿರುವ ದಾಖಲೆಗಳು ಹಾಗೂ ವರದಿಯನ್ನು ಯುನೆಸ್ಕೋಗೆ ಕಳಿಸುವ ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ. ಇದಕ್ಕಾಗಿ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಕಲ್ಚರಲ್ ಹೆರಿಟೇಜ್ ತಂಡ ಅಗತ್ಯ ಸಿದ್ಧತೆ ಆರಂಭಿಸಿದೆ.

 ಮೈಸೂರಿಗೆ ಪ್ರವಾಸಿಗರನ್ನು ಸೆಳೆಯಲು ಸ್ವಾಗತ ಕಮಾನು ನಿರ್ಮಾಣಕ್ಕೆ ಚಿಂತನೆ ಮೈಸೂರಿಗೆ ಪ್ರವಾಸಿಗರನ್ನು ಸೆಳೆಯಲು ಸ್ವಾಗತ ಕಮಾನು ನಿರ್ಮಾಣಕ್ಕೆ ಚಿಂತನೆ

ಈಗಾಗಲೇ ರಾಜ್ಯ ಸರ್ಕಾರ ಮೈಸೂರು ನಗರವನ್ನು ಪಾರಂಪರಿಕ ನಗರವೆಂದು ಘೋಷಿಸಿದ್ದರೂ ಇಲ್ಲಿನ ಪಾರಂಪರಿಕತೆ ಹಾಗೂ ಪಾರಂಪರಿಕ ಕಟ್ಟಡಗಳ ರಕ್ಷಣೆ, ಪ್ರವಾಸೋದ್ಯಮದ ಅಭಿವೃದ್ಧಿ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಹೆರಿಟೇಜ್ ತಂಡ, ವಿಶೇಷ ಸ್ಥಾನಮಾನಕ್ಕೆ ಈ ಯೋಜನೆ ರಚಿಸಲು ಮುಂದಾಗಿದೆ.

Collection of special documents to name Mysore as World Heritage Site

ಮೈಸೂರು ಅರಮನೆ ಹಾಗೂ ಇಲ್ಲಿನ ಕಟ್ಟಡಗಳ ಶೈಲಿ ವಿಶೇಷವಾಗಿದ್ದು, ಇಲ್ಲಿನ ಪಾರಂಪರಿಕ ಕಟ್ಟಡಗಳು ಯುರೋಪಿನ ಸಾಂಸ್ಕೃತಿಕ ಹಾಗೂ ಇಂಡೋ ಸಾರ್ಸನಿಕ್ ಶೈಲಿಯ ಕಟ್ಟಡ ವಿನ್ಯಾಸದ ಜನಪ್ರಿಯತೆಯನ್ನು ಉಳಿಸಿಕೊಂಡಿವೆ. ಈ ಕಟ್ಟಡಗಳನ್ನು ಸಾರ್ವಜನಿಕವಾಗಿ ಪ್ರವಾಸೋದ್ಯಮ ಕೇಂದ್ರವನ್ನಾಗಿ ವಿಶ್ವದಾದ್ಯಂತ ಗುರುತಿಸುವಂತೆ ಮಾಡಲು ತಂಡ ತೀರ್ಮಾನಿಸಿದೆ.

ಸಾಮಾನ್ಯರಂತೆ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಯದುವೀರ್ ದಂಪತಿ ಸಾಮಾನ್ಯರಂತೆ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಯದುವೀರ್ ದಂಪತಿ

ಆಯ್ಕೆಯಾದ ತಾಣಗಳ ನಿರ್ವಹಣೆ, ಸಂರಕ್ಷಣೆ ಹಾಗೂ ಕೈಗೊಳ್ಳಬಹುದಾದ ತತ್‌ಕ್ಷಣದ ಹಾಗೂ ಭವಿಷ್ಯದ ಕ್ರಮಗಳನ್ನು ಆಧರಿಸಿ ಕಾಯಂ ಪಟ್ಟಿಗೆ ಇದನ್ನು ಸೇರ್ಪಡೆಗೊಳಿಸಲಾಗುತ್ತದೆ. ಮೈಸೂರಿಗೆ ವಿಶ್ವಮಾನ್ಯತೆ ಸಿಕ್ಕರೆ ಸೌಲಭ್ಯಗಳು ಹೆಚ್ಚಾಗಲಿವೆ ಎಂಬುದರಲ್ಲಿ ಅನುಮಾನವಿಲ್ಲ.

English summary
Indian national trust for art and cultural team collecting details and special documents for mysuru to add as world heritage site. The details will be sent to UNESCO team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X