ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ಕಲ್ಪವೃಕ್ಷದೆತ್ತರಕ್ಕೇರಿದ ತೆಂಗಿನಕಾಯಿ ಬೆಲೆ!

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಫೆಬ್ರವರಿ 7 : ಶುಭ ಕಾರ್ಯಗಳಿಗೆ, ಮನೆಯ ಅಡುಗೆಯಲ್ಲಿ ರಾಜನ ಸ್ಥಾನದಲ್ಲಿದ್ದ ತೆಂಗಿನ ಕಾಯಿ, ಸದ್ಯ ಗಗನಕುಸುಮವೇ ಸರಿ. ಹಿಂದೆಂದೂ ಕೇಳರಿಯದ ದರ ತೆಂಗಿನಕಾಯಿಗೆ ಸಿಕ್ಕಿದ್ದು, ತಿಂಡಿಪೋತರಿಗೆ ಕಣ್ಣೀರು ಭರಿಸುವಂತಿದೆ.

ಕಳೆದ ಒಂದು ತಿಂಗಳಿನಿಂದೀಚೆಗೆ ತೆಂಗಿನ ಕಾಯಿ ಬೆಲೆ ಗಗನಕ್ಕೇರಿದ್ದು, ಕಳೆದ ವರ್ಷದ ಡಿಸೆಂಬರ್ ವೇಳೆಯಲ್ಲಿ ಗಾತ್ರದ ಆಧಾರದಲ್ಲಿ ತೆಂಗಿನಕಾಯಿ ಒಂದಕ್ಕೆ 16 ರಿಂದ 35 ರೂ.ವರೆಗೆ ಬೆಲೆ ಇತ್ತು. ಆದರೆ ಪ್ರಸಕ್ತ ವರ್ಷದ ಆರಂಭದಿಂದ ಆ ಕಾಯಿ ದರ 40. ರೂ ವರೆಗೆ ಏರಿಕೆಯಾಗಿದೆ. ದೇವರಾಜ ಮಾರುಕಟ್ಟೆಯಲ್ಲಿ ತೆಂಗಿನ ಕಾಯಿಯೊಂದಕ್ಕೆ ಗಾತ್ರದ ಆಧಾರದಲ್ಲಿ ಸಣ್ಣ ಕಾಯಿಗೆ ಕನಿಷ್ಠ 20ರೂ ಇದ್ದರೆ, ದೊಡ್ಡಗಾತ್ರದ ಕಾಯಿಯೊಂದಕ್ಕೆ 40 ರೂ. ಬೆಲೆ ನಿಗದಿಯಾಗಿತ್ತು. ಸಾಧಾರಣ ಗಾತ್ರದ ಕಾಯಿಯೊಂದಕ್ಕೆ 22 ರಿಂದ 35 ರವರೆಗೆ ಬೆಲೆ ಇತ್ತು.

ತೆಂಗು ಬೆಳೆಗಾರರಿಗೆ ಉಪಯೋಗವಾಗುವ ಅನೇಕ ಮಾಹಿತಿಗಳುತೆಂಗು ಬೆಳೆಗಾರರಿಗೆ ಉಪಯೋಗವಾಗುವ ಅನೇಕ ಮಾಹಿತಿಗಳು

ಬೇಡಿಕೆ ಹೆಚ್ಚು
ಮೂರು ತಿಂಗಳಿನಿಂದಲೂ ತೆಂಗಿನಕಾಯಿ ಬೆಲೆಯಲ್ಲಿ ಸಾಕಷ್ಟು ಚೇತರಿಕೆಯಾಗುತ್ತಿದ್ದು, ವಾರದಿಂದ ವಾರಕ್ಕೆ ಬೆಲೆ ಏರಿಕೆಯಾಗುತ್ತಿದೆ. ಇಳುವರಿ ಕೊರತೆ, ಕೊಬ್ಬರಿ ಎಣ್ಣೆ ಉತ್ಪಾದನೆಯಲ್ಲಾದ ಹೆಚ್ಚಳ ಹಾಗೂ ನೆರೆಯ ರಾಜ್ಯಗಳಲ್ಲಿ ತೆಂಗಿನಕಾಯಿಯ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಧಾರಣೆ ಏರಿಕೆಯಾಗುತ್ತಿದೆ. ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ಬೆಲೆ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ವರ್ತಕ ಹಾಗೂ ಬೆಳೆಗಾರರಿಂದ ಕೇಳಿಬರುತ್ತಿವೆ.

Coconut prices in Msyru reches all time high

ಹಿಂದೂಗಳ ಧಾರ್ಮಿಕ ಕಾರ್ಯಕ್ಕೆ ಹೆಚ್ಚು ಬಳಕೆಯಾಗುವ ತೆಂಗಿನಕಾಯಿ ಬೆಲೆಯಲ್ಲಿ ಏರಿಕೆಯಾಗುತ್ತಿರುವುದು ಧಾರ್ಮಿಕ ಕಾರ್ಯ ಕೈಗೊಳ್ಳುವವರಿಗೆ ನಿರಾಸೆ ಮೂಡಿಸಿದೆ. ಜೊತೆಗೆ ಎಲ್ಲ ವರ್ಗದ ಗ್ರಾಹಕರಿಗೂ ತೆಂಗಿನಕಾಯಿ ಬೆಲೆಯ ಬಿಸಿ ತಟ್ಟಿದೆ. ಗಗನದತ್ತ ಮುಖ ಮಾಡಿರುವ ತೆಂಗಿನಕಾಯಿ ಬೆಲೆ ಕುರಿತಂತೆ ಮಾಹಿತಿ ನೀಡಿದ ತೆಂಗಿನಕಾಯಿ ವ್ಯಾಪಾರಿಗಳು, ಈ ಬಾರಿಯ ಕಾಯಿಯ ಬೆಲೆ ಏರಿಕೆ ಕಂಡು ತಿಂಗಳಾಯಿತು.

ತೆಂಗಿನಕಾಯಿ ಬೆಲೆ ಪ್ರಪಾತಕ್ಕೆ ಕುಸಿಯಲು ಕಾರಣಗಳೇನು?ತೆಂಗಿನಕಾಯಿ ಬೆಲೆ ಪ್ರಪಾತಕ್ಕೆ ಕುಸಿಯಲು ಕಾರಣಗಳೇನು?

ಕಳೆದ ವರ್ಷ ಮಳೆ ಕೈಕೊಟ್ಟಿದ್ದೇ ಇದಕ್ಕೆ ಮುಖ್ಯ ಕಾರಣ. ಮಳೆಯಿಲ್ಲದೆ ಬರ ಆವರಿಸಿಕೊಂಡ ಹಿನ್ನೆಲೆಯಲ್ಲಿ ತೆಂಗಿನ ಬೆಳೆಯೂ ನೆಲಕಚ್ಚಿದೆ. ಇದರಿಂದ ಸಹಜವಾಗಿ ತೆಂಗಿನಕಾಯಿಯನ್ನು ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡುವುದು ಕಷ್ಟ ಎಂದರು.

ಇಳುವರಿ ಕಡಿಮೆ
ಐದಾರು ವರ್ಷಗಳಿಂದ ಕೆರೆಕಟ್ಟೆಗಳಲ್ಲಿ ನೀರು ನಿಲ್ಲುವಂತಹ ಸಮೃದ್ಧ ಮಳೆ ಬಾರದ ಕಾರಣ, ತೆಂಗು ಇಳುವರಿಯಲ್ಲಿ ಶೇ 50ರಷ್ಟು ಕುಸಿತಗೊಂಡಿದೆ. ಇದರಿಂದಾಗಿ 1,000 ತೆಂಗಿನಕಾಯಿ ಕೆಡವುತ್ತಿದ್ದವರು ಇಂದು 500 ಕಾಯಿ ಕೆಡವುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆಯಾಗಿರುವುದು ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ಬೆಳೆಗಾರರು. ತಿಂಗಳ ಹಿಂದೆ ಸಣ್ಣ ಗಾತ್ರದ ಕಾಯಿಯೊಂದಕ್ಕೆ ಹದಿನಾರು ರೂ ಇದ್ದರೆ ಈಗ 17 ರೂ ಏರಿಕೆಯಾಗಿದೆ ಅಂತೆಯೇ 20, ರೂ ಬೆಲೆ ಕಾಯ್ದುಕೊಂಡಿದ್ದ ಕಾಯೊಂದರ ಬೆಲೆ 25ಕ್ಕೆ ಏರಿಕೆಯಾಗಿದೆ ಅದೇ ರೀತಿ ವಿವಿಧ ಗಾತ್ರದ ಕಾಯಿಗಳ ಬೆಲೆಯೂ 35 - 40ರೂ ಗೆ ಜಿಗಿದಿದೆ.

Coconut prices in Msyru reches all time high

ಚೌಕಾಸಿಯೂ ನಡೆಯೋಲ್ಲ!
ಹಾಪ್ ಕಾಮ್ಸ್ ನಲ್ಲೂ ದಪ್ಪ ತೆಂಗಿನಕಾಯಿಗೆ 38 ಮತ್ತು ಸಣ್ಣ ತೆಂಗಿನಕಾಯಿಗೆ 29ದರ ಇದ್ದು, ಚೌಕಾಸಿ ಕೂಡ ನಡೆಯುತ್ತಿಲ್ಲ.ಚಿಲ್ಲರೆ ಅಂಗಡಿಗಳಲ್ಲಿ ತೆಂಗಿನಕಾಯಿಗಳ ಗಾತ್ರಕ್ಕೆ ಅನುಸಾರವಾಗಿ 40ರಿಂದ 50ರವರೆಗೆ ಮಾರಾಟ ಮಾಡುತ್ತಿದ್ದಾರೆ. ಕಡಿಮೆ ಬೆಲೆಗೆ ಸಿಗುತ್ತಿದ್ದ ಕಾಯಿ ಬೆಲೆ ಈಗ ಕಲ್ಪವೃಕ್ಷದ ಎತ್ತರಕ್ಕೇರಿದೆ. 38ರಿಂದ 50ರ ಆಸುಪಾಸಿಗೆ ತಲುಪಿದೆ. ದರ ಹೆಚ್ಚಿರುವುದರಿಂದ ತಿಂಡಿ ಜತೆಗೆ ಚಟ್ನಿ ಪ್ರಮಾಣ ತಗ್ಗಿಸಿ ಊಟದ ದರ ಏರಿಸಲು ಚಿಂತನೆ ಸಹ ನಡೆಯುತ್ತಿದೆ.

ತೆಂಗಿನ ಕಾಯಿ ಬೆಲೆ ಏರಿಕೆ ತಗ್ಗಿಸಲು ಸರ್ಕಾರ ತೆಂಗಿನ ಕಾಯಿ ಆಮದು ಮಾಡಿಕೊಳ್ಳುವ ಬಗ್ಗೆ ನಿರ್ಧಾರ ಮಾಡಿಲ್ಲ. ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ತೆಂಗಿನ ಕಾಯಿ ದಾಸ್ತಾನು ಇದೆ. ಬೆಲೆಯೂ ಅಷ್ಟೇನೂ ದುಬಾರಿ ಮಟ್ಟಕ್ಕೆ ತಲುಪಿಲ್ಲ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು. ಅತ್ತ ಬೆಲೆ ಏರಿಕೆ ತೆಂಗು ಬೆಳೆಗಾರರಿಗೆ ಹಬ್ಬವಾದರೆ ಇತ್ತ ಗ್ರಾಹಕರಿಗೆ ತೆಂಗಿನಕಾಯಿ ಕೈಗೆಟುಕುವ ಸ್ಥಿತಿಯಲ್ಲಿಲ್ಲ ಎಂಬ ಪರಿಸ್ಥಿತಿ ಎದುರಾಗಿದೆ.

English summary
Coconut prices in Msyru reches all time high. People have to pay minimum 30 to 40 rs for each coconut now. Here is a brief story which explains, reasons for coconut price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X