ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಕೆಮಿಕಲ್ ರಹಿತ ರೇಷ್ಮೆ ಸೀರೆ ಸಿಗುತ್ತದೆ, ಕೊಳ್ಳಿರಿ

By Mahesh
|
Google Oneindia Kannada News

ಮೈಸೂರು, ನ.17: ಕೋ ಆಪ್ ಟೆಕ್ಸ್ ಮಳಿಗೆಯಲ್ಲಿ ಕಾಂಚೀಪುರಂ ಸಾಂಪ್ರದಾಯಿಕ ರೇಷ್ಮೆ ಸೀರೆ, ನೈಸರ್ಗಿಕ ಬಣ್ಣದಿಂದ ತಯಾರಿಸಿದ ರೇಷ್ಮೆ ಸೀರೆ ಹಾಗೂ ಲೈಲಾನ್ ಶರ್ಟ್‍ಗಳನ್ನು ಮಾರಾಟ ಹೊಸದಾಗಿ ಪ್ರಾರಂಭಿಸಲಾಗಿದೆ.

ಕೋ ಆಫ್ ಟೆಕ್ಸ್ ನ ಕಾರ್ಯನಿರ್ವಹಕ ನಿರ್ದೇಶಕ ಟಿ.ಎನ್. ವೆಂಕಟೇಶ್ ಅವರು ರಾಜ್‍ ಕಮಲ್ ಚಿತ್ರಮಂದಿರದ ಹತ್ತಿರವಿರುವ ಕೋ ಆಪ್ ಟೆಕ್ಸ್ ಮಳಿಗೆಯಲ್ಲಿ ಈ ಹೊಸ ಉತ್ಪನ್ನಗಳನ್ನು ಮಾರಾಟಕ್ಕೆ ಮುಕ್ತಗೊಳಿಸಿ ಮಾತನಾಡಿದರು. [ಆಗಿನ ಕಾಲದ ಟೈಲರ್ ಗಳು! ಡ್ರೆಸ್ ಶೈಲಿಗಳು]

ಕೈಯಿಂದ ನೇಯಲ್ಪಟ್ಟ ಮೃದು ರೇಷ್ಮೆ ಸೀರೆಗಳನ್ನು ಅತ್ಯುತ್ತಮ ಗುಣಮಟ್ಟದ ರೇಷ್ಮೆ ದಾರಗಳಿಂದ ಮಾಡಲ್ಪಟ್ಟಿದೆ. ರೇಷ್ಮೆದಾರಗಳನ್ನು ನೈಸರ್ಗಿಕ ಬಣ್ಣಗಳಿಂದ ಕೂಡಿದ ಹೂಗಳಿಂದ ಅಂದರೆ ಚಂಡುವ, ಹಲಸಿನ ಹಣ್ಣಿನ ತೊಗಟೆ, ಟೀ ಎಲೆಗಳಿಂದ ಮಾಡಲ್ಪಟ್ಟಿದ್ದು, ಯಾವುದೇ ರಾಸಾಯನಿಕ ಪದಾರ್ಥಗಳನ್ನು ಉಪಯೋಗಿಸಿಲ್ಲ ಎಂದರು.

Co optex Mysuru

ಕಾಂಚೀಪುರಂ ಪಾರಂಪರಿಕ ರೇಷ್ಮೆ ಸೀರೆಯು ಕಾಂಚೀಪುರಂ ನಗರದಲ್ಲಿ ಕೈಯಿಂದ ನೇಯಲ್ಪಟ್ಟಿದೆ. ರೇಷ್ಮೆಸೀರೆಗಳು ಸರಳವಾದ ಜರಿಬಾರ್ಡರ್ ಹಾಗೂ ಸರಳವಾದ ರೇಷ್ಮೆಸೆರಗುನ್ನು ಹೊಂದಿದ್ದು, ಸೀರೆಗಳ ಬಾರ್ಡರ್, ಸೆರಗು ಮತ್ತು ಬುಟ್ಟಗಳಿಗೆ ಬೆಳ್ಳಿ ಜರಿಯನ್ನು ಅಳವಡಿಸಲಾಗಿದೆ ಎಂದು ಹೇಳಿದರು.

ರೆಡಿಮೇಡ್ ಶರ್ಟ್: ಕೋ-ಅಪ್ಟೆಕ್ಸ್ ಲೆನಿನ್ ದಾರವನ್ನು ಪ್ರಸಿದ್ಧ ಮಾರುಕಟ್ಟೆಯ ಏಜನ್ಸಿಗಳಿಂದ ಸಂಗ್ರಹಿಸಿ ಲೆನಿನ್‍ನಿಂದ ಲೆನಿನ್ ರೆಡಿಮೇಡ್ ಶರ್ಟ್‍ಗಳನ್ನು 6 ವಿವಿಧ ಬಣ್ಣಗಳಿಂದ ತಯಾರಿಸಿ 'ಲೀಕೋ' ಕೋ-ಅಪ್ಟೆಕ್ಸ್ ಯಿಂದ ಲೆನಿನ್ ಎಂಬ ಬ್ರಾಂಡ್‍ನ್ನು ಪರಿಚಯಿಸಲಾಗಿದೆ. ಲೆನಿನ್ ದಾರವು ಹತ್ತಿಯ ತರಹ ಒಂದು ನೈಸರ್ಗಿಕ ನಾರು ಎಂದು ತಿಳಿಸಿದರು. [ಮೊಳಕಾಲ್ಮೂರು ಸೀರೆಗೂ ಹತ್ತಿದ ತೆಲಂಗಾಣ ಕಿಚ್ಚು]

'ಕೋ ಆಪ್ಟೆಕ್ಸ್' ಈಗ ಹೊಸದಾಗಿ ಆರ್ಗಾನಿಕ್ ಸೀರೆಯನ್ನು ಪರಿಚಯಿಸುತ್ತಿದೆ. ಸೀರೆಗಳನ್ನು ಒಳ್ಳೆ ಹತ್ತಿ, ಅಂದರೆ ಯಾವುದೇ ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕಗಳನ್ನು ಬಳಸದೆ ಬೆಳೆದ ಹತ್ತಿಯಿಂದ ಮತ್ತು ಹಣ್ಣು ಮತ್ತು ತರಕಾರಿಗಳ ಬಣ್ಣಗಳನ್ನು ಉಪಯೋಗಿಸಿ ತಯಾರಿಸಲಾಗಿದೆ ಎಂದು ವಿವರಿಸಿದರು. (ಒನ್ ಇಂಡಿಯಾ ಸುದ್ದಿ)

English summary
Handloom Weavers Cooperative Society Limited Managing Director T.N. Venkatesh introduced some new products including linen shirts for men, organic cotton sarees, and naturally dyed cotton fabrics for Mysuru shoppers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X