ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ಖಜಾನೆ ಖಾಲಿ ಎಂದ ಸಿದ್ದುಗೆ ಬಿಎಸ್ವೈ ತಿರುಗೇಟು!

By ಮೈಸೂರು ಪ್ರತಿನಿಧಿ
|
Google Oneindia Kannada News

Recommended Video

ಸಿದ್ದರಾಮಯ್ಯ ಆರೋಪಕ್ಕ ಸರಿಯಾಗಿ ಉತ್ತರಕೊಟ್ಟ ಯಡಿಯೂರಪ್ಪ | Oneindia Kannada

ಮೈಸೂರು, ಜನವರಿ 26: ರಾಜ್ಯದ ಖಜಾನೆ ಖಾಲಿಯಾಗಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್ ಗೆ ಮುಖ್ಯಮಂತ್ರಿ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಮೈಸೂರಿನ ಸುತ್ತೂರು ಜಾತ್ರೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಮಾರ್ಚ್‌ ತಿಂಗಳಿನಲ್ಲಿ ಬಜೆಟ್ ಮಂಡಿಸಿ ಸದನದಲ್ಲೇ ಸಿದ್ದರಾಮಯ್ಯನವರ ಟೀಕೆಗೆ ಉತ್ತರ ಕೊಡುತ್ತೇನೆ ಎಂದು ಹೇಳಿದರು.

ರಾಜ್ಯದ ಖಜಾನೆ ಕಾಲಿಯಾಗಿದೆಯೋ ಇಲ್ಲವೋ ಎಂಬುದು ಬಜೆಟ್ ಮಂಮಡನೆ ಬಳಿಕ ಸಿದ್ದರಾಮಯ್ಯನವರಿಗೆ ತಿಳಿಯಲಿದೆ ಎಂದರು.

"ಯಾರು ಏನೇ ಹೇಳಲಿ, ರಾಜ್ಯದಲ್ಲಿ 3 ವರ್ಷ ಯಡಿಯೂರಪ್ಪ ಸರ್ಕಾರ ಗ್ಯಾರಂಟಿ"

ಎಸ್.ಎಂ.ಕೃಷ್ಣ ಅವರ ನಂತರ ನಾನು ದಾವೋಸ್ ಪ್ರವಾಸಕ್ಕೆ ಹೋಗಿ ಬಂದಿದ್ದೇನೆ. ರಾಜ್ಯದಲ್ಲಿ ಕೈಗಾರಿಕೆಗಳಿಗೆ ಬಂಡಾವಳ ಹೂಡಿಕೆ ಮಾಡಲು ಪ್ರಮುಖ ಒಪ್ಪಂದಗಳು ಆಗಿವೆ ಎಂದು ತಿಳಿಸಿದ ಯಡಿಯೂರಪ್ಪ, ಇದು ಅತ್ಯಂತ ಫಲಪ್ರದಾಯಕ ವಿದೇಶ ಪ್ರವಾಸ ಎಂದು ಬಣ್ಣಿಸಿದರು. ಸಿಎಂ ಯಡಿಯೂರಪ್ಪ ಭಾಷಣ ಆರಂಭಿಸುತ್ತಿದ್ದಂತೆ ಮುಂದಿನ ಸಚಿವರಾದ ಸುಧಾಕರ್ ಎಂದು ಹೇಳಿದ್ದು, ಸಚಿವ ಸಂಪುಟ ವಿಸ್ತರಣೆಯಲ್ಲಿ ಸುಧಾಕರ್ ಗೆ ಸಚಿವ ಸ್ಥಾನ ಖಾತ್ರಿ ಪಡಿಸಿದರು. ಮುಂದಿನ ಸಚಿವ ಎನ್ನುತ್ತಿದ್ದಂತೆ ಶಾಸಕ ಡಾ.ಸುಧಾಕರ್ ನಗು ಬೀರಿದ್ದು ವಿಶೇಷವಾಗಿತ್ತು.

ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಾಗುವುದು

ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಾಗುವುದು

ಈ ಬಾರಿಯ ಬಜೆಟ್ ರೈತಸ್ನೇಹಿ ಬಜೆಟ್ ಆಗಿರಲಿದೆ. ಮಾರ್ಚ್ 5 ರಂದು ಮಂಡಿಸುವ ಬಜೆಟ್ ನಲ್ಲಿ ಯಾವ ಕ್ಷೇತ್ರಕ್ಕೆ ಅನುದಾನ ಕೊರತೆ ಆದರೂ ಸರಿಯೇ ಆದರೆ ಕೃಷಿ ಕ್ಷೇತ್ರಕ್ಕೆ ಹಣಕಾಸಿನ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ "ಪ್ರತ್ಯೇಕ ಕೃಷಿ ಬಜೆಟ್' ಮಂಡಿಸುವ ಸುಳಿವು ಬಿಟ್ಟುಕೊಟ್ಟರು.

ಸಾಲ ಮಾಡಿಯಾದರೂ ಸರಿಯೇ ರೈತರಿಗೆ ಅನುಕೂಲ‌ ಆಗುವಂತೆ ನೋಡಿಕೊಳ್ಳುತ್ತೇನೆ. ವಿಶೇಷ ಯೋಜನೆಗಳನ್ನು ಕೃಷಿ ಕ್ಷೇತ್ರಕ್ಕೆ ನೀಡುತ್ತೇನೆ. ಖಜಾನೆ ಖಾಲಿ ಆಗಿದೆ ಅಂತ ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ಬಜೆಟ್ ಮಂಡನೆ ಮಾಡಿ ಸದನದಲ್ಲಿ ಉತ್ತರ ಕೊಡುತ್ತೇನೆ ಎಂದು ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದರು.

ಯಡಿಯೂರಪ್ಪ ಅವರಿಂದ ರಾಜ್ಯದಲ್ಲಿ ಉತ್ತಮ ಮಳೆ: ಶೋಭಾ

ಯಡಿಯೂರಪ್ಪ ಅವರಿಂದ ರಾಜ್ಯದಲ್ಲಿ ಉತ್ತಮ ಮಳೆ: ಶೋಭಾ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕರಿಗೆ 2 ಕೋಟಿ ರೂ, ನೀಡಿದೆ. ಕಾನೂನಾತ್ಮಕವಾಗಿ ತೆರಿಗೆ ಹಿಡಿದು ಅವರ ಖಾತೆಗೆ ಹಣ ಜಮೆ ಆಗಿದೆ. ಬೆಂಗಳೂರಿನಲ್ಲಿ ವಸತಿ ಸಚಿವ ಸೋಮಣ್ಣ ಅವರು 50 ಲಕ್ಷ ರೂ, ಮೌಲ್ಯದ ವಸತಿ ನೀಡಿದ್ದಾರೆ ಎಂದರು.

ಸಚಿವ ಸಂಪುಟ ವಿಸ್ತರಣೆ: ಆರ್. ಅಶೋಕ್ ನೀಡಿದ ಬ್ರೇಕಿಂಗ್ ನ್ಯೂಸ್ಸಚಿವ ಸಂಪುಟ ವಿಸ್ತರಣೆ: ಆರ್. ಅಶೋಕ್ ನೀಡಿದ ಬ್ರೇಕಿಂಗ್ ನ್ಯೂಸ್

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೇ, ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಆದಾಗಲೆಲ್ಲಾ ರಾಜ್ಯದಲ್ಲಿ ಉತ್ತಮ ಮಳೆಯಾಯಿತು, ಇದರಿಂದ ರೈತರು ಖುಷಿಯಾಗಿದ್ದಾರೆ ಎಂದರು.

ವಿಜಯೇಂದ್ರಗೆ ಉತ್ತಮ ಭವಿಷ್ಯವಿದೆ ಎಂದ ಸೋಮಣ್ಣ

ವಿಜಯೇಂದ್ರಗೆ ಉತ್ತಮ ಭವಿಷ್ಯವಿದೆ ಎಂದ ಸೋಮಣ್ಣ

ರೈತರಿಗೆ ಸುಲಭವಾಗಿ ಮತ್ತು ಉಚಿತವಾಗಿ ಪಹಣಿ ಸಿಗುವಂತಹ ವ್ಯವಸ್ಥೆಯನ್ನು ಸಿಎಂ ಯಡಿಯೂರಪ್ಪನವರು ಮಾಡಬೇಕು ಎಂದು ಸುತ್ತೂರು ಜಾತ್ರಾ ಮಹೋತ್ಸವದ ವೇದಿಕೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೇ ಮನವಿ ಮಾಡಿಕೊಂಡರು.

ಸುತ್ತೂರು ಜಾತ್ರೆಯಲ್ಲಿ ಬಿ.ವೈ.ವಿಜಯೇಂದ್ರ ಪರ ಪ್ರಚಾರ ಮಾಡಿದ ಸಚಿವ‌ ವಿ.ಸೋಮಣ್ಣ ಅವರು, ""ಅದೃಷ್ಟ ಯಾರಪ್ಪನ ಸ್ವತ್ತು ಅಲ್ಲ, ವಿಜಯೇಂದ್ರ ಅವರು ಮುಂದೆ ಏನಾಗುತ್ತಾರೆ ಅಂತ ಯಾರಿಗೂ ಗೊತ್ತಿಲ್ಲ. ಅವರಿಗೆ ಈ ಕ್ಷೇತ್ರದ ಹಾಗೂ ಸುತ್ತೂರು ಶ್ರೀಗಳ ಆಶೀರ್ವಾದ ಬೇಕು ಎಂದು ಹೇಳಿದರು.

ಮುಂದಿನ ಸಚಿವ ಎಂದಿರುವುದು ಖುಷಿ ತಂದಿದೆ ಎಂದ ಸುಧಾಕರ್

ಮುಂದಿನ ಸಚಿವ ಎಂದಿರುವುದು ಖುಷಿ ತಂದಿದೆ ಎಂದ ಸುಧಾಕರ್

ಇದೇ ಸಂದರ್ಭದಲ್ಲಿ ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಬೆದರಿಕೆ ಸಂಬಂಧಿಸಿದಂತೆ, ಝಡ್ ಪ್ಲಸ್ ಸೆಕ್ಯುರಿಟಿಗೆ ಶಿಫಾರಸು ಮಾಡೋಣ ಎಂದು ಕುಹಕವಾಡಿದರು.

ಎಚ್.ಡಿ.ಕುಮಾರಸ್ವಾಮಿ ಅವರು ಬಹಳ ಸರಳವಾಗಿ ಇದ್ದವರು.‌ ಅವರಿಗೆ ಕೊಲೆ ಬೆದರಿಕೆ ಇದೆ ಎಂಬ ವಿಚಾರ ನಿಮ್ಮಿಂದಲೇ(ಮಾಧ್ಯಮ) ನನಗೆ ಗೊತ್ತಾಗಿದೆ. ಯಾರಿಂದ ಬೆದರಿಕೆ ಇದೆ ಎಂದು ನನಗೆ ಗೊತ್ತಿಲ್ಲ, ನಾನು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ಝಡ್ ಪ್ಲಸ್ ಸೆಕ್ಯುರಿಟಿ ನೀಡಬೇಕೆಂದು ರಾಜ್ಯ ಸರ್ಕಾರದ ಮೂಲಕ ಶಿಫಾರಸ್ಸು ಮಾಡಲಾಗುವುದು ಎಂದು ವ್ಯಂಗ್ಯಭರಿತವಾಗಿ ಮಾತನಾಡಿದರು.

English summary
Chief Minister Yediyurappa react To Former CM Siddaramaiah tweeted that the state treasury is empty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X