ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡಿಬೆಟ್ಟದಲ್ಲಿನ ಬೈನಾಕೂಲರ್ ಗೆ ವ್ಯೂ ಪಾಯಿಂಟ್‍ ಗೆ ಚಾಲನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 21 : ಇನ್ಮುಂದೆ ಪ್ರವಾಸಿಗರು ಚಾಮುಂಡಿ ಬೆಟ್ಟದಿಂದಲೇ ಇಡೀ ಮೈಸೂರಿನ ಅಂದ-ಚೆಂದವನ್ನು ಕಣ್ತುಂಬಿಕೊಳ್ಳಬಹುದು.

In Pics : ಖಾಸಗಿ ದರ್ಬಾರ್ ನಲ್ಲಿ ಯದುವೀರರಿಗೆ ತ್ರಿಷಿಕಾರಿಂದ ಪೂಜೆ

ಹೌದು. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನೂತನವಾಗಿ ನಿರ್ಮಿಸಿರುವ ಬೈನಾಕೂಲರ್ ವ್ಯೂ ಪಾಯಿಂಟ್‍ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಗುರುವಾರ) ಚಾಲನೆ ನೀಡಿದರು.

ಬೈನಾಕೂಲರ್ ನಿಂದ ಬೆಟ್ಟದ ತಪ್ಪಲಿನಲ್ಲಿ ನಿಂತು ಮೈಸೂರನ್ನು ಸುಲಭವಾಗಿ ವೀಕ್ಷಿಸಬಹುದಾಗಿದೆ. ಬೈನಾಕ್ಯೂಲರ್ ಗೆಚಾಲನೆ ನೀಡಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬೈನಾಕೂಲರ್ ನಿಂದಾಗಿ ಬರುವ ಪ್ರವಾಸಿಗರಿಗೆ ಇಡೀ ಮೈಸೂರನ್ನು ನೋಡಲು ಅವಕಾಶ ಸಿಕ್ಕಿದಂತಾಗಿದೆ ಎಂದರು.

CM Siddaramaiah inaugurates binocular view point at chamundi hills Mysuru

ಮೈಸೂರಿನ ಶೈಲೇಂದ್ರ ಅಗ್ರಹಾರ್ ಎಂಬುವರು ಇದನ್ನು ನೀಡಿದ್ದು, ಈ ಸಿಸ್ಟಮ್ ಬೆಲೆ ಮೂರೂವರೆಗೆ ಲಕ್ಷ ರೂ. ಎಂದು ಹೇಳಲಾಗಿದೆ. ಅದನ್ನು ಅಮೇರಿಕಾದಿಂದ ತರಿಸಲಾಗಿದ್ದು, ಎಲ್ಲವೂ ಸೇರಿ ಏಳೂವರೆ ಲಕ್ಷ ರು. ತಗುಲಿದೆ.

ಶಾಸಕರಾದ ಜಿ.ಟಿ.ದೇವೇಗೌಡ, ಎಂ.ಕೆ.ಸೋಮಶೇಖರ್, ಸಾ.ರಾ.ಮಹೇಶ್, ಮೇಯರ್ ಎಂ.ಜೆ.ರವಿಕುಮಾರ್, ಪ್ರವಾಸ್ಯೋದಮ ಉಪನಿರ್ದೇಶಕ ಜನಾರ್ಧನ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

ಬಾಲ್ಯದ ದಸರೆಯ ಸವಿನೆನಪು ಬಿಚ್ಚಿಟ್ಟ ಸಿದ್ದರಾಮಯ್ಯಬಾಲ್ಯದ ದಸರೆಯ ಸವಿನೆನಪು ಬಿಚ್ಚಿಟ್ಟ ಸಿದ್ದರಾಮಯ್ಯ

ಪೊಲೀಸ್ ಸಹಾಯ ಕೇಂದ್ರಕ್ಕೆ ಚಾಲನೆ: ಸೆಪ್ಟೆಂಬರ್ 21 ರಿಂದ 30 ರವರೆಗೆ ದಸರಾ ನಾಡಹಬ್ಬದ ಅಂಗವಾಗಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ದಸರಾ ಮತ್ತು ಉತರೆ ಮಾಹಿತಿ ನೀಡಲು ನಗರದ 30 ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಹಾಯ ಕೇಂದ್ರಗಳನ್ನು ತೆರೆಯಲಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ವಸ್ತುಪ್ರದರ್ಶನ- ಮಾರಾಟ ಮೇಳ ದಸರಾ ಮಹೋತ್ಸವ ಅಂಗವಾಗಿ ಜೆ.ಕೆ. ಮೈದಾನದಲ್ಲಿ ಆಯೋಜಿಸಿರುವ ಮಹಿಳಾ ಮತ್ತು ಮಕ್ಕಳ ದಸರಾವನ್ನು ಸಚಿವೆ ಉಮಾಶ್ರೀ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.

ಇದಕ್ಕೂ ಮುನ್ನಾ ಮಹಿಳಾ ಉದ್ಯಮಿಗಳು ಹಾಗೂ ಸ್ತ್ರೀಶಕ್ತಿ, ಸ್ವ ಸಹಾಯ ಸಂಘಗಳ ಉತ್ಪನ್ನಗಳ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಟೇಪ್ ಕತ್ತರಿಸಿ ಡೊಳ್ಳು ಬಾರಿಸುವುದರ ಮೂಲಕ ಉದ್ಘಾಟಿಸಿದರು. ಒಟ್ಟು 47 ಮಳಿಗೆಯಿದ್ದು ಸಚಿವೆ ಉಮಾಶ್ರೀ ರವರು ಪ್ರತಿ ಮಳಿಗೆಯನ್ನು ವೀಕ್ಷಿಸಿದರು.

English summary
Karnataka chief minister Siddaramaiah inaugurates binocular view point at chamundi hills Mysuru on September 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X