ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ರಾಹುಲ್ ಪಿಎಂ ಮಾಡ್ತೀನೆನ್ನುವ ಸಿದ್ರಾಮಯ್ಯನ್ನ ಆಸ್ಪತ್ರೆಗೆ ಸೇರಿಸಿ'

By Yashaswini
|
Google Oneindia Kannada News

ಮೈಸೂರು, ಜನವರಿ 13 : ರಾಹುಲ್ ಗಾಂಧಿಯನ್ನು 2019ಕ್ಕೆ ಪ್ರಧಾನಿ ಮಾಡುತ್ತಾರಂತೆ. ಇಂತಹ ಹೇಳಿಕೆ ಕೊಡುವ ಸಿದ್ದರಾಮಯ್ಯ ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಬಿಜೆಪಿ ಕುರಿತಾಗಿ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡಬಾರದು. ಹೇಳಿಕೆಗಳನ್ನು ಕೊಡುವ ಮುನ್ನ ಯೋಚಿಸಬೇಕು. ಸಿದ್ದರಾಮಯ್ಯ ವಿವೇಚನೆ ಇಲ್ಲದವರ ರೀತಿ ಹೇಳಿಕೆಗಳನ್ನು ನೀಡುತ್ತಿದ್ದು, ಅವರಿಗೆ ವಿವೇಚನೆಯ ಕೊರತೆಯಿದೆ ಎಂದರು.

ತಮ್ಮದೇ ಪಕ್ಷದವರ ಮೇಲೆ ಹರಿಹಾಯ್ದ ಶ್ರೀನಿವಾಸಪ್ರಸಾದ್ತಮ್ಮದೇ ಪಕ್ಷದವರ ಮೇಲೆ ಹರಿಹಾಯ್ದ ಶ್ರೀನಿವಾಸಪ್ರಸಾದ್

ತಿ. ನರಸೀಪುರದಲ್ಲಿ ಸಚಿವ ಮಹದೇವಪ್ಪ ಅವರು ಆನೆ ಹೋದರೆ ನಾಯಿ ಬೊಗಳುತ್ತದೆ ಎಂದು ಶ್ರೀನಿವಾಸ್ ಪ್ರಸಾದ್ ಗೆ ಟಾಂಗ್ ಕೊಟ್ಟಿದ್ದ ವಿಚಾರವಾಗಿ ಮಾತನಾಡಿದ ಅವರು, ಯಾರು ಬೊಗಳುತ್ತಾರೆ ಎಂಬುದು ಜನರಿಗೆ ಗೊತ್ತು. ಸಿದ್ದರಾಮಯ್ಯ ಆನೆಯೋ ಅಥವಾ ನಾಯಿಯೋ ಎಂದು ಜಗಜ್ಜಾಹಿರವಾಗಿದೆ ಎಂದು ಟಾಂಗ್ ನೀಡಿದರು.

V Srinivasa Prasad Book Release

ದಸರಾ ನಡೆಯುವ ಸಂದರ್ಭದಲ್ಲಿ ನಾನೇ ಮುಖ್ಯಮಂತ್ರಿ ಆಗುತ್ತೇನೆ ಅಂತಿದ್ದರು. ಇದೀಗ ಮಹದೇವಪ್ಪ ರೇಸ್ ನಲ್ಲಿದ್ದಾರೆ ಅಂತಾರೆ. ಎಷ್ಟೋ ಕುದುರೆಗಳಿರುವಾಗ ಕತ್ತೆ ಹೆಸರು ಹೇಳ್ತಿಯಲ್ಲಪ್ಪ ಎಂದು ಪರೋಕ್ಷವಾಗಿ ಮಹದೇವಪ್ಪ ಅವರನ್ನು ಕತ್ತೆಗೆ ಹೋಲಿಸಿ, ಸಿದ್ದರಾಮಯ್ಯ ಬೊಗಳೆ ರಾಮಯ್ಯ ಆಗಬೇಡಪ್ಪ ಎಂದರು.

ರಾಹುಲ್ ಗಾಂಧಿಯನ್ನು 2019ಕ್ಕೆ ಪ್ರಧಾನಿ ಮಾಡುತ್ತಾರಂತೆ. ಇಂತಹ ಹೇಳಿಕೆ ಕೊಡುವ ಸಿದ್ದರಾಮಯ್ಯ ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು. ಚಕ್ರವ್ಯೂಹ ಭೇದಿಸಿ ನಾನೂ ಹೊರಬಂದಿದ್ದೇನೆ. ಫೆಬ್ರವರಿ ಎರಡನೇ ವಾರ ನಾನ್ಯಾರು, ಅವನ್ಯಾರು ಎಂಬುದು ಗೊತ್ತಾಗಲಿದೆ ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಅಜಾತಶತ್ರು ಪುಸ್ತಕ ಬಿಡುಗಡೆ
ಇನ್ನು ಇದೇ ವೇಳೆ ಎಚ್.ವಿ.ರಾಜೀವ್ ಸ್ನೇಹ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಅಜಾತ ಶತ್ರು' ಕಿರುಹೊತ್ತಿಗೆಯನ್ನು ಶ್ರೀನಿವಾಸ್ ಪ್ರಸಾದ್ ಬಿಡುಗಡೆಗೊಳಿಸಿದರು.

ಆ ಬಳಿಕ ಮಾತನಾಡಿದ ಮಾಜಿ ಸಚಿವ ವಿ ಶ್ರೀನಿವಾಸ್ ಪ್ರಸಾದ್, ಶೈಕ್ಷಣಿಕವಾಗಿ- ಸಾಮಾಜಿಕವಾಗಿ ತನ್ನದೇ ದಾರಿಯಲ್ಲಿ ಸ್ವಯಂ ಸೇವೆ ಮಾಡುತ್ತಿದ್ದಾರೆ. ನನ್ನ ನೆಚ್ಚಿನ ಪ್ರೀತಿಯ ವೆಂಕೋಬ ರಾವ್ ಕೂಡ ಇದ್ದಾರೆ. ರಾಜಕಾರಣದಲ್ಲಿ ಧರ್ಮ ಇರಬೇಕು. ಪ್ರಸ್ತುತ ಧರ್ಮದ ಹೆಸರಲ್ಲಿ ರಾಜಕಾರಣ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲಾ ಎಂದು ವಿಷಾದ ವ್ಯಕ್ತಪಡಿಸಿದರು.

English summary
CM Siddaramaiah telling he will made Rahul Gandhi as prime minister, he has to admit in hospital, says former minister and BJP leader V Srinivasa Prasad in Mysuru on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X