ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ರಾಜೇಂದ್ರ ಶ್ರೀಗಳ ಪುತ್ಥಳಿ ನಿರ್ಮಾಣಕ್ಕೆ ಬೆಂಬಲ-ವಿರೋಧ!

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 29: ಸುತ್ತೂರು ಮಠದ 23ನೇ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಪುತ್ಥಳಿ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು(ಆಗಸ್ಟ್ 29) ಶಿಲಾನ್ಯಾಸ ನೆರವೇರಿಸಿದರು.
ಮೈಸೂರಿನ ಗನ್ ಹೌಸ್‌ನಲ್ಲಿರುವ ಜೆಎಸ್ ಎಸ್ ಮಹಾವಿದ್ಯಾಪೀಠದ ಮುಂಭಾಗದಲ್ಲಿ ನಿರ್ಮಿಸುತ್ತಿರುವ ಈ ಪುತ್ಥಳಿ ಸುಮಾರು 3 ಕೋಟಿ ವೆಚ್ಚದ, 11 ಅಡಿ ಎತ್ತರದ ಪಂಚಲೋಹದ್ದಾಗಿದೆ.

ಪುತ್ಥಳಿ ನಿರ್ಮಾಣಕ್ಕೆ ವಿರೋಧ!
ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಪುತ್ಥಳಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿರುವ ಅರಮನೆ ಉಳಿಸಿ ಹೋರಾಟ ಸಮಿತಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪುತ್ಥಳಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

CM performs foundation ceremony for statue of Shri Rajendra seer in Mysuru

ಪ್ರತಿಭಟನಾಕಾರರು ಮಾತನಾಡಿ, ಈ ಕುರಿತು ಸಮಗ್ರ ಕರ್ನಾಟಕ ರಾಜ್ಯ ಅರಸು ಸಂಘದವರು ಮನವಿ ಸಲ್ಲಿಸಿದ್ದು ಅದನ್ನು ಕಡೆಗಣಿಸಲಾಗಿದೆ. ಸದರಿ ಸ್ಥಳದಲ್ಲಿ ಶಿಲಾನ್ಯಾಸ ಕೈಬಿಟ್ಟು ಬೇರೆ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ತಪ್ಪಿದಲ್ಲಿ ಯದುವಂಶದ ಮಹಾರಾಜರ ಅಭಿಮಾನಿಗಳ ನಾನಾ ಸಂಘಸಂಸ್ಥೆಗಳಿಂದ ಹಂತಹಂತವಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

Recommended Video

Udupi : Pejawara Shri's Small Injury Gets a Big Publicity | Oneindia Kannada
CM performs foundation ceremony for statue of Shri Rajendra seer in Mysuru

ಪುತ್ಥಳಿ ನಿರ್ಮಾಣ ಬೆಂಬಲಿಸಿ ಧರಣಿ!
ಮೈಸೂರಿನ ನೆರಳು ಫೌಂಡೇಷನ್ ವತಿಯಿಂದ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಪುತ್ಥಳಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಸಂಘಟನೆಗಳ ವಿರುದ್ಧ ಪ್ರತಿಯಾಗಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಧರಣಿ ನಿರತರು, ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಪುತ್ಥಳಿ ಸ್ಥಾಪನೆ ಸರ್ಕಾರ ಹಾಗೂ ಜಿಲ್ಲಾಡಳಿತದ ತೀರ್ಮಾನವಾಗಿದೆ. ಇದರಲ್ಲಿ ವೀರಶೈವ ಸಮುದಾಯದ ಪಾತ್ರವಿಲ್ಲ. ಆದ್ರೂ ಸಮುದಾಯದ ಹೆಸರನ್ನ ಬಳಸಿ ಪ್ರತಿಮೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಬಿಜೆಪಿ ಮುಖಂಡ ಗೋ.ಮಧುಸೂದನ್ ರಾಜವಂಶಸ್ಥರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದಾಗ ಉಳಿಸಿ ಹೋರಾಟ ಸಮಿತಿ ಸೇರಿ ಸಂಘಟನೆಗಳು ಎಲ್ಲಿದ್ದವು ಎಂದು ಪ್ರಶ್ನಿಸಿದರು.

English summary
Chief Minister Siddaramaiah performed the foundation laying ceremony for the statue of Dr Shivarathri Rajendra seer near the Gun House, at Fort Mohalla here on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X