ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಜೆಡಿಎಸ್ ಮುಖಂಡರೊಂದಿಗೆ ಎಚ್‌ಡಿಕೆ ದಿಢೀರ್ ಸಭೆ

|
Google Oneindia Kannada News

ಮೈಸೂರು, ಮೇ 18: ಮೈತ್ರಿ ಸರ್ಕಾರದಲ್ಲಿ ಸರಿಹೋಗದಿದ್ದರೆ ಸರ್ಕಾರ ವಿಸರ್ಜಸಿ ಎಂಬುದಾಗಿ ತಿಳಿಸಿದ್ದ ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಹೇಳಿಕೆ ಹಿನ್ನೆಲೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಮ್ಮ ಆಪ್ತರ ಜತೆ ಮೈಸೂರಿನಲ್ಲಿ ಸಭೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಮೈಸೂರಿನ ಖಾಸಗಿ ಹೋಟೆಲ್‌ಗೆ ಮಧ್ಯಾಹ್ನದ ನಂತರ ಬಂದ ಸಿಎಂ ಕುಮಾರಸ್ವಾಮಿ ಮುಖಂಡರೊಂದಿಗೆ ಸಭೆ ನಡೆಸುತ್ತಿದ್ದು, ಸಭೆಯಲ್ಲಿ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ರೇಷ್ಮೆ ಸಚಿವ ಸಾ.ರಾ.ಮಹೇಶ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದಾರೆ.

ಮೈತ್ರಿ ಸರ್ಕಾರ ವಿಸರ್ಜಿಸುವುದು ಉತ್ತಮ: JDS ಮುಖಂಡ ಬಸವರಾಜ ಹೊರಟ್ಟಿ ಮೈತ್ರಿ ಸರ್ಕಾರ ವಿಸರ್ಜಿಸುವುದು ಉತ್ತಮ: JDS ಮುಖಂಡ ಬಸವರಾಜ ಹೊರಟ್ಟಿ

ಸಭೆ ಅತ್ಯಂತ ಮಹತ್ವದ್ದು ಎನ್ನಲಾಗಿದ್ದು, ಮೈತ್ರಿ ಸರ್ಕಾರದ ಸಾಧಕ, ಬಾಧಕ, ಚುನಾವಣೆ ಫಲಿತಾಂಶ ಮತ್ತು ಅದರ ನಂತರದ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಜೊತೆಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಹಿರಿಯ ಮುಖಂಡರನ್ನು ನಿಯಂತ್ರಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

CM Kumarswamy held immediate meeting of JDS leaders at Mysuru

ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಬಸವರಾಜ್ ಹೊರಟ್ಟಿ, ಮೈತ್ರಿ ಸರ್ಕಾರವನ್ನು ವಿಸರ್ಜನೆ ಮಾಡಿ, ಚುನಾವಣೆಗೆ ಹೋಗುವುದು ಒಳ್ಳೆಯದು ಎಂದು ಹೇಳಿದ್ದರು.

ದೇವೇಗೌಡರ ಹೋರಾಟದ ಕೆಚ್ಚು ನನಗೆ ಪ್ರೇರಣೆ: ಸಿದ್ದರಾಮಯ್ಯ ದೇವೇಗೌಡರ ಹೋರಾಟದ ಕೆಚ್ಚು ನನಗೆ ಪ್ರೇರಣೆ: ಸಿದ್ದರಾಮಯ್ಯ

ಈ ಹೇಳಿಕೆ ಸದ್ಯ ತೆನೆ ಹೊತ್ತ ಪಕ್ಷದಲ್ಲಿ ಸಂಚಲನ ಮೂಡಿಸಿದ್ದು, ಸಿಎಂ ಹೆಚ್.ಡಿ ಕುಮಾರಸ್ವಾಮಿ ದಿಢೀರ್ ಮೈಸೂರಿಗೆ ಆಗಮಿಸಿ ಸಭೆ ನಡೆಸುತ್ತಿದ್ದಾರೆ. ಅಲ್ಲದೇ ಬಸವರಾಜ್ ಹೊರಟ್ಟಿ ಮಾತುಗಳಿಂದ ಆಗಬಹುದಾದ ಪರಿಣಾಮಗಳ ಕುರಿತು ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

English summary
CM Kumarswamy held immediate meeting at Mysuru on JDS Leader basavraj horatti statement about co alition government. H D Revanna, G T Devegowda, Sa ra mahesh and some others attended on this meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X