ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು; 12-18 ವರ್ಷದ 30 ಮಕ್ಕಳ ಮೇಲೆ ಕೊವ್ಯಾಕ್ಸಿನ್ ಪ್ರಯೋಗ

|
Google Oneindia Kannada News

ಮೈಸೂರು, ಜೂನ್ 15; ಭಾರತದಲ್ಲಿ 18 ವರ್ಷದೊಳಗಿನ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ ನಡೆಯುತ್ತಿದೆ. ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ 12 ರಿಂದ 18 ವರ್ಷದ 30 ಮಕ್ಕಳಿಗೆ ಲಸಿಕೆ ನೀಡಲಾಗಿದೆ.

ಮೈಸೂರು ನಗರದ ಕೆ. ಆರ್. ಆಸ್ಪತ್ರೆ ಆವರಣದಲ್ಲಿ ಚೆಲುವಾಂಬ ಆಸ್ಪತ್ರೆ ಇದೆ. ದೇಶದ 10 ಆಸ್ಪತ್ರೆಗಳಲ್ಲಿ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ ನಡೆದಿದ್ದು, ಇದರಲ್ಲಿ ಚೆಲುವಾಂಬ ಆಸ್ಪತ್ರೆಯೂ ಸೇರಿದೆ.

ಕ್ಲಿನಿಕಲ್ ಪ್ರಯೋಗ: ಮೈಸೂರಿನಲ್ಲಿ ಕೋವಾಕ್ಸಿನ್ ಲಸಿಕೆ ಪಡೆದ ಮಕ್ಕಳು ಸುರಕ್ಷಿತಕ್ಲಿನಿಕಲ್ ಪ್ರಯೋಗ: ಮೈಸೂರಿನಲ್ಲಿ ಕೋವಾಕ್ಸಿನ್ ಲಸಿಕೆ ಪಡೆದ ಮಕ್ಕಳು ಸುರಕ್ಷಿತ

ಕಳೆದ ಭಾನುವಾರ ಲಸಿಕೆ ಪ್ರಯೋಗ ನಡೆದಿದೆ. ಲಸಿಕೆ ನೀಡುವುದಕ್ಕೆ ಮೊದಲು ಎಲ್ಲಾ ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ವರದಿ ನಗೆಟಿವ್ ಬಂದ ಬಳಿಕ ಲಸಿಕೆಯನ್ನು ನೀಡಲಾಗಿದೆ.

 ನಾಸಲ್ ಸ್ಪ್ರೇ ಯಾವಾಗ ಲಭ್ಯ, BBV154 ಮಕ್ಕಳು ಕೊರೊನಾ ವಿರುದ್ಧ ಹೋರಾಡಲು ಸಹಕಾರಿಯೇ? ನಾಸಲ್ ಸ್ಪ್ರೇ ಯಾವಾಗ ಲಭ್ಯ, BBV154 ಮಕ್ಕಳು ಕೊರೊನಾ ವಿರುದ್ಧ ಹೋರಾಡಲು ಸಹಕಾರಿಯೇ?

Clinical Trial Of Covaxin 30 Kids Took Part In Mysuru

ಲಸಿಕೆ ನೀಡಿದ 30 ಮಕ್ಕಳ ಮೇಲೆ ಆಸ್ಪತ್ರೆಯಲ್ಲಿಯೇ ಎರಡು ಗಂಟೆಗಳ ಕಾಲ ನಿಗಾವಹಿಸಲಾಗಿತ್ತು. ಬಳಿಕ ಅವರನ್ನು ಮನೆಗೆ ಕಳಿಸಿಕೊಡಲಾಗಿದೆ. ಪ್ರತಿದಿನವೂ ಮಕ್ಕಳ ಪೋಷಕರಿಗೆ ಕರೆ ಮಾಡಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತಿದೆ.

ಕೋವ್ಯಾಕ್ಸಿನ್ ಲಸಿಕೆ ದುಬಾರಿ ಬೆಲೆ ಸಮರ್ಥಿಸಿಕೊಂಡ ಭಾರತ್ ಬಯೋಟೆಕ್ಕೋವ್ಯಾಕ್ಸಿನ್ ಲಸಿಕೆ ದುಬಾರಿ ಬೆಲೆ ಸಮರ್ಥಿಸಿಕೊಂಡ ಭಾರತ್ ಬಯೋಟೆಕ್

ಕೆಲವು ಮಕ್ಕಳಿಗೆ ಜ್ವರ, ಲಸಿಕೆ ನೀಡಿದ ಸ್ಥಳದಲ್ಲಿ ನೋವು ಬಿಟ್ಟರೆ ಎಲ್ಲಾ ಮಕ್ಕಳು ಸಹ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಮುಂದಿನ ಹಂತದಲ್ಲಿ ಆಸ್ಪತ್ರೆಯಲ್ಲಿ 6 ರಿಂದ 12, 2 ರಿಂದ 6 ವರ್ಷದ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಯಲಿದೆ.

ಸುಮಾರು 6 ರಿಂದ 7 ತಿಂಗಳ ಕಾಲ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ ನಡೆಯಲಿದೆ ಎಂದು ವೈದ್ಯರು ಹೇಳಿದ್ದಾರೆ. ಭಾರತದಲ್ಲಿ ಪಸ್ತುತ 18 ವರ್ಷದೊಳಗಿನ ಯಾರಿಗೂ ಸಹ ಲಸಿಕೆ ನೀಡುತ್ತಿಲ್ಲ.

ಕೇಂದ್ರೀಯ ಔಷಧ ಮಾನದಂಡ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಪ್ರಯೋಗ ನಡೆಸಲು ಒಪ್ಪಿಗೆ ನೀಡಿತ್ತು. ಕೋವಿಡ್ 3ನೇ ಅಲೆಯ ಸಾಧ್ಯತೆಯನ್ನು ಪರಿಗಣಿಸಿ 2 ರಿಂದ 18 ವರ್ಷದ ಮಕ್ಕಳ ಮೇಲೆ ಕ್ಲಿನಿಕಲ್ ಪ್ರಯೋಗ ನಡೆಸಲಾಗುತ್ತಿದೆ.

ಭಾರತ್ ಬಯೋಟೆಕ್‌ಗೆ ಲಸಿಕೆ ಪ್ರಯೋಗ ನಡೆಸಲು ಒಪ್ಪಿಗೆ ನೀಡಲಾಗಿದೆ. ಮೊದಲು ಪಾಟ್ನಾದ ಏಮ್ಸ್‌ನಲ್ಲಿ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಸಲಾಗಿದೆ. ಅಮೆರಿಕ, ಯುಕೆ, ಐರೋಪ್ಯ ರಾಷ್ಟ್ರಗಳಲ್ಲಿ ಫೈಜರ್ ಲಸಿಕೆಯನ್ನು ಮಕ್ಕಳಿಗೆ ನೀಡಲಾಗುತ್ತಿದೆ.

ಭಾರತದಲ್ಲಿ ಕೋವಿಶೀಲ್ಡ್, ಕೊವ್ಯಾಕ್ಸಿನ್ ಮತ್ತು ರಷ್ಯಾದ ಸ್ಪುಟ್ನಿಕ್ ಲಸಿಕೆಗಳು ಮಾತ್ರ ಲಭ್ಯವಿದೆ. ಈ ಲಸಿಕೆಯನ್ನು 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುತ್ತಿದೆ. ಮಕ್ಕಳಿಗೆ ಯಾವುದೇ ಲಸಿಕೆ ಲಭ್ಯವಿಲ್ಲ.

ಏಮ್ಸ್ ಮಂಗಳವಾರ 6 ರಿಂದ 12 ವರ್ಷದ ಮಕ್ಕಳ ಮೇಲೆ ಲಸಿಕೆ ಪ್ರಯೋಗ ಮಾಡಲು ನೋಂದಣಿ ಆರಂಭಿಸಿದೆ. ಏಮ್ಸ್‌ನಲ್ಲಿ ಈಗಾಗಲೇ 12 ರಿಂದ 18 ವರ್ಷದ ಮಕ್ಕಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲಿನ ಲಸಿಕೆ ಪ್ರಯೋಗ 3 ಹಂತದಲ್ಲಿ ನಡೆಯಲಿದೆ. 2-6, 6-12 ಮತ್ತು 12-18 ವರ್ಷದ ಮಕ್ಕಳಿಗೆ 28 ದಿನಗಳ ಅಂತರದಲ್ಲಿ ಲಸಿಕೆ ನೀಡಲಾಗುತ್ತದೆ.

English summary
Clinical trial of Covaxin on children began. 12 to 18 age group 30 kids took part in trials at Cheluvamba hospital Mysuru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X