ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುತ್ತೂರು ಜಾತ್ರೆಯ ಬಲೂನ್ ಸ್ಫೋಟ ಪ್ರಕರಣ:ಬಲೂನ್‌ನಲ್ಲಿದ್ದಿದ್ದು ನೈಟ್ರೋಜನ್ ಅಲ್ಲ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 06: ಸುತ್ತೂರು ಜಾತ್ರಾಮಹೋತ್ಸವದಲ್ಲಿ ನಿನ್ನೆ ಮಂಗಳವಾರ (ಫೆ.05) ಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳೆ ನೈಟ್ರೋಜನ್ ಬಲೂನ್ ಗಳು ಸ್ಫೋಟಗೊಂಡಿದ್ದವು. ಇದೀಗ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುತ್ತೂರು ಜಾತ್ರಾಮಹೋತ್ಸವ ಸಮಿತಿಯಿಂದ ಸ್ಪಷ್ಟೀಕರಣ ನೀಡಲಾಗಿದೆ.

ಯಾವ ತೊಂದರೆಯೂ ಆಗಿಲ್ಲ, ವೈಭವೀಕರಣ ಬೇಡ ಎಂದ ಸುತ್ತೂರು ಶ್ರೀಗಳುಯಾವ ತೊಂದರೆಯೂ ಆಗಿಲ್ಲ, ವೈಭವೀಕರಣ ಬೇಡ ಎಂದ ಸುತ್ತೂರು ಶ್ರೀಗಳು

ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಜಾತ್ರಾ ಮಹೋತ್ಸವ ಸಮಿತಿ‌, ಸ್ಫೋಟಕ್ಕೆ ಕಾರಣ ಬಲೂನ್‌ನಲ್ಲಿದ್ದ ನೈಟ್ರೋಜನ್ ಅಲ್ಲ, ಹೀಲಿಯಂ. ಅದೊಂದು ಆಕಸ್ಮಿಕ ಘಟನೆ, ಸರ್ವರು ಕ್ಷೇಮ. ಕ್ರೀಡಾಜ್ಯೋತಿಯ ಜ್ವಾಲೆ ತಗಲಿ ಬಲೂನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬಲೂನ್‌ನಲ್ಲಿದ್ದ ಹಿಲೀಯಂ ಹೊರಚೆಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಜಾತ್ರೆಯಲ್ಲಿ ಬಲೂನ್ ಸ್ಫೋಟ: ಭಾರೀ ಅವಘಡದಿಂದ ಸುತ್ತೂರು ಶ್ರೀ ಪಾರುಜಾತ್ರೆಯಲ್ಲಿ ಬಲೂನ್ ಸ್ಫೋಟ: ಭಾರೀ ಅವಘಡದಿಂದ ಸುತ್ತೂರು ಶ್ರೀ ಪಾರು

Clarification was given by the Suttur Jatra Mahotsava Committee about balloons burst

ಎಲ್ಲರಿಗು ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದೆ. ಪೂಜ್ಯ ಜಗದ್ಗುರುಗಳಿಗೆ ಯಾವುದೇ ತೊಂದರೆ ಆಗಿಲ್ಲ. ಘಟನೆ ನಂತರ ಶ್ರೀಗಳು ಪೂಜೆ ನೆರವೇರಿಸಿದ್ದಾರೆ. ಪೂಜೆ ಮುಗಿಸಿ ಭಕ್ತಾದಿಗಳಿಗೆ ದರ್ಶನ ನೀಡುತ್ತಿದ್ದಾರೆ. ಘಟನೆಯಿಂದ ಯಾರು ಆತಂಕ ಪಡುವ ಅಗತ್ಯವಿಲ್ಲ‌ ಎಂದು ಘಟನೆ ಕುರಿತು ಸುತ್ತೂರು ಜಾತ್ರಾಮಹೋತ್ಸವ ಸಮಿತಿ ಸ್ಪಷ್ಟೀಕರಣ ನೀಡಿದೆ.
English summary
Nitrogen balloons burst at sutturu jathre yesterday. But now clarification was given by the Suttur Jatra Mahotsava Committee about balloons burst.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X