ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು : ನಗರ ಸಾರಿಗೆ ಬಸ್ಸುಗಳಲ್ಲಿ ಉಚಿತ ವೈ-ಫೈ ಸೇವೆ

By Yashaswini
|
Google Oneindia Kannada News

ಮೈಸೂರು, ಜನವರಿ 22 : ಮೈಸೂರು ನಗರದಲ್ಲಿ ಸಂಚಾರ ನಡೆಸುವ ಕೆಎಸ್ಆರ್‌ಟಿಯ ನಗರ ಸಾರಿಗೆ ಬಸ್ಸುಗಳಲ್ಲಿ ಉಚಿತ ವೈ-ಫೈ ಸೇವೆ ಲಭ್ಯವಾಗಲಿದೆ. ನಗರದ 400 ಬಸ್ಸುಗಳಲ್ಲಿ ಈ ಸೇವೆ ಲಭ್ಯವಾಗಲಿವೆ.

ಕೆಐವಿಐ ಸಂಸ್ಥೆಯ ವತಿಯಿಂದ ಕೆಎಸ್ಆರ್‌ಟಿಸಿ ಬಸ್ಸುಗಳಲ್ಲಿ ವೈ-ಫೈ ಸೇವೆ ಒದಗಿಸಲಾಗುತ್ತದೆ. ಉಚಿತವಾಗಿ ಈ ಸೇವೆ ಲಭ್ಯವಿರಲಿದ್ದು, ಬಸ್ ಪ್ರಯಾಣದ ಸಮಯದಲ್ಲಿ ಇಂಟರ್‌ನೆಟ್ ಬಳಸಬಹುದಾಗಿದೆ.

ಗೂಗಲ್ ಉಚಿತ ವೈಫೈ ಪಡೆಯುವ ಮೊದಲ ನಗರ ಯಾವುದು?
ಉಚಿತ ವೈ-ಫೈ ಸೇವೆಯಿಂದಾಗಿ ವಯಸ್ಕರು, ಯುವಕರು, ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಬಸ್ಸಿನಲ್ಲಿ ಪ್ರಯಾಣಿಸುವ ಸ್ಮಾರ್ಟ್ ಫೋನ್ ಹೊಂದಿರುವ ಪ್ರತಿಯೊಬ್ಬರಿಗೂ ವೈ-ಫೈ ಸೇವೆ ಸಿಗಲಿದೆ.

Mysure bus


ಸೇವೆ ಪಡೆಯುವುದು ಹೇಗೆ? : ವೈ-ಫೈ ಆನ್ ಮಾಡಿದ ಬಳಿಕ ಗೂಗಲ್ ಕ್ರೋಮ್‌ಗೆ ಹೋಗಿ ವೂಟ್.ಕಾಮ್ ಎಂದು ಟೈಪ್ ಮಾಡಿದರೆ ಮನರಂಜನೆ ಕಾರ್ಯಕ್ರಮಗಳ ಪಟ್ಟಿ ತೆರೆದುಕೊಳ್ಳುತ್ತವೆ. ಬಳಿಕ ನಿಮಗೆ ಇಷ್ಟ ಬಂದ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.

ಬೆಂಗಳೂರಿನ ಬಸ್ ನಿಲ್ದಾಣ, ಮಾರುಕಟ್ಟೆಯಲ್ಲಿ ವೈಫೈ ಸೌಲಭ್ಯಬೆಂಗಳೂರಿನ ಬಸ್ ನಿಲ್ದಾಣ, ಮಾರುಕಟ್ಟೆಯಲ್ಲಿ ವೈಫೈ ಸೌಲಭ್ಯ


'ಈಗಾಗಲೇ ನಗರದಲ್ಲಿ 400 ಬಸ್ಸುಗಳಿಗೆ ಈ ವೈ-ಫೈ ಸಾಧನ ಅಳವಡಿಸಲಾಗಿದ್ದು, ಶೀಘ್ರದಲ್ಲೇ ಎಲ್ಲ ಬಸ್‍ಗಳಿಗೂ ಅಳವಡಿಸಲಾಗುತ್ತದೆ' ಎಂದು ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಹೇಳಿದ್ದಾರೆ.

ಯಾವ-ಯಾವ ಕಾರ್ಯಕ್ರಮ : ಕನ್ನಡ, ಹಿಂದಿ ಭಾಷೆಗಳಲ್ಲಿ ಮನರಂಜನೆ ಕಾರ್ಯಕ್ರಮ, ಸಿನಿಮಾಗಳನ್ನು ವೀಕ್ಷಿಸಬಹುದು. ಮಕ್ಕಳು ಎರಡು ಭಾಷೆಗಳಲ್ಲಿ ಕಾರ್ಟೂನ್ ಧಾರಾವಾಹಿಗಳನ್ನು ನೋಡಿ ನಲಿಯಬಹುದಾಗಿದೆ.

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಶೋ ಮಜಾ ಟಾಕೀಸ್, ಮಜಾ ಭಾರತ, ನಾಗಕನ್ನಿಕೆ, ರಾಧಾ ರಮಣ, ಕಿನ್ನರಿ, ಅಗ್ನಿಸಾಕ್ಷಿ ಮುಂತಾದ ಧಾರಾವಾಹಿಗಳನ್ನು ವೀಕ್ಷಿಸಬಹುದು.

ಹಿಂದಿ ಭಾಷೆಯ ಕಾಮಿಡಿ ವಿತ್ ಕಪಿಲ್ ಮುಂತಾದ ರಿಯಾಲಿಟಿ ಶೋ ನೋಡಬಹುದು. ಕಾರ್ಟೂನ್‍ಗಳಾದ ಶಿವ, ಮೋಟು ಪತ್ಲೂ, ಡೋರ, ಚೋಟಾ ಭೀಮ್ ಮುಂತಾದ ಧಾರಾವಾಹಿಗಳು ದೊರೆಯಲಿವೆ. ಈ ಬಗ್ಗೆ ನಗರ ಸಾರಿಗೆ ಬಸ್‍ಗಳಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಗಿದೆ.

English summary
Mysuru city bus passengers will get free Wi-Fi service in Karnataka State Road Transport Corporation (KSRTC) bus soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X