ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊಮೊ ಗೇಮ್: ಪೋಷಕರಿಗೆ ಎಚ್ಚರಿಕೆ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ

|
Google Oneindia Kannada News

ಮೈಸೂರು, ನವೆಂಬರ್. 22:ಮಕ್ಕಳ ಹಾಗೂ ಯುವ ಸಮೂಹದ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದ ಬ್ಲೂ ವ್ಹೇಲ್ ಗೇಮ್ ನಂತರ ಶಾಲಾ ಮಕ್ಕಳನ್ನು ಸೆಳೆಯುತ್ತಿರುವ ಹಾಗೂ ಪ್ರಾಣಾಪಾಯಕ್ಕೆ ದೂಡುತ್ತಿರುವ ಇಂಟರ್ ನೆಟ್ ಗೇಮ್ ಮೊಮೊ ಬಗ್ಗೆ ಇದೀಗ ಪೋಷಕರಲ್ಲಿ ಆತಂಕ ಮನೆಮಾಡಿದೆ.

ಮೊಮೊ ಎಂಬ ಅಂತರ್ಜಾಲ ಆಟ ಆಡುವ ಮೂಲಕ ಹದಿಹರೆಯದ ಮಕ್ಕಳು ಪ್ರಾಣಾಪಾಯಕ್ಕೆ ಒಳಗಾಗುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿ ಅನಾರೋಗ್ಯಕರ ಅಂತರ್ಜಾಲ ಆಟದಲ್ಲಿ ವಿದ್ಯಾರ್ಥಿಗಳು ಸಿಲುಕಿ ಕೊಳ್ಳದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ.

ಅಪಾಯಕಾರಿ ಮೊಮೊ ಚಾಲೆಂಜ್‌ಗೆ ಕುಮ್ಮಕ್ಕು: ವಿದ್ಯಾರ್ಥಿ ಅರೆಸ್ಟ್ಅಪಾಯಕಾರಿ ಮೊಮೊ ಚಾಲೆಂಜ್‌ಗೆ ಕುಮ್ಮಕ್ಕು: ವಿದ್ಯಾರ್ಥಿ ಅರೆಸ್ಟ್

ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮೊಮೊ ಆಟದ ವ್ಯಾಮೋಹಕ್ಕೆ ಒಳಗಾಗದಂತೆ ಶಾಲೆಯ ಮುಖ್ಯಸ್ಥರು, ಪಾಲಕರು, ಪೋಷಕರು ಎಚ್ಚರ ವಹಿಸಬೇಕು ಎಂದು ಇಲಾಖೆ ಖಡಕ್ ಆದೇಶ ನೀಡಿದೆ.

Circular from the Department of Education to focus on students

ಶಾಲೆಗಳಲ್ಲಿ ನಿತ್ಯ ಅರಿವು
ಮೊಮೊ ಸಹಿತವಾಗಿ ಅಂತರ್ಜಾಲದ ಅಪಾಯಕಾರಿ ಆಟ ಮತ್ತು ವೆಬ್ ಸೈಟ್ ಬಳಕೆ ಕುರಿತು ಶಾಲೆಗಳಲ್ಲಿ ಪ್ರತಿದಿನ ಮಕ್ಕಳಿಗೆ ತರಗತಿ ಆರಂಭಕ್ಕೂ ಮೊದಲು 10ರಿಂದ 15 ನಿಮಿಷ ಮುಖ್ಯ ಶಿಕ್ಷಕರು ಸಹಿತವಾಗಿ ಸಹ ಶಿಕ್ಷಕರು ಅರಿವು ಮೂಡಿಸಬೇಕು. ಇಂಟರ್ ನೆಟ್ ಬ್ರೌಸಿಂಗ್ ಕೇಂದ್ರಗಳಲ್ಲಿ ಮೊಮೊ ಗೇಮ್ ಆಡಲು ಮಕ್ಕಳಿಗೆ ಅವಕಾಶ ನೀಡಬಾರದು ಎಂದು ಸೂಚಿಸಲಾಗಿದೆ.

 ಬ್ಲೂವ್ಹೇಲ್ ಗೇಮ್ ನಿಷೇಧಕ್ಕೆ ತಜ್ಞರ ಸಮಿತಿ ನೇಮಕ ಬ್ಲೂವ್ಹೇಲ್ ಗೇಮ್ ನಿಷೇಧಕ್ಕೆ ತಜ್ಞರ ಸಮಿತಿ ನೇಮಕ

ಈ ಸಂಬಂಧ ಯಾವುದೇ ಪ್ರಕರಣ ಅಥವಾ ಪಾಲಕ, ಪೋಷಕರಿಂದ ದೂರು ಬಂದರೆ ಗಂಭೀರವಾಗಿ ಪರಿಗಣಿಸಬೇಕು. ಶಾಲೆಗಳಲ್ಲಿ ಮಕ್ಕಳ ವರ್ತನೆಯ ಬಗ್ಗೆಯೂ ವಿಶೇಷ ನಿಗಾ ವಹಿಸಬೇಕು ಎಂದು ನಿರ್ದೇಶಿಸಲಾಗಿದೆ. ಅಲ್ಲದೇ ಮಕ್ಕಳಲ್ಲಿ ಅರಿವು ಮೂಡಿಸಲು ಶಾಲಾ ಶಿಕ್ಷಕರಿಗೆ ಮತ್ತು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿದೆ.

 ಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿ ಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿ

ಈ ಅಪಾಯಕಾರಿ ಕ್ರೀಡೆಗೆ ಒಳಗಾಗದಂತೆ ತಡೆಯುವ ನಿಟ್ಟಿನಲ್ಲಿ ಸಮಾಜದ ವಿವಿಧ ಸ್ತರಗಳಲ್ಲಿ ಅರಿವು ಮೂಡಿಸಬೇಕು. ಮಕ್ಕಳಿಗೆ ಈ ಸೈಟ್ ಉಪಯೋಗಿಸಲು ಅವಕಾಶ ನೀಡ ಕೂಡದು ಎಂದು ಸಂಬಂಧ ಪಟ್ಟ ಪೊಲೀಸ್ ಠಾಣೆಯ ಮೂಲಕ ಇಂಟರ್ ನೆಟ್ ಬ್ರೌಸಿಂಗ್ ಕೇಂದ್ರಕ್ಕೆ ಆದೇಶ ನೀಡುವ ಜವಾಬ್ದಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಹಿಸಲಾಗಿದೆ.

ಮೋಮೊ ಗೇಮ್ ಮಕ್ಕಳಿಗೆ ಸಿಗದಂತೆ ಮಾಡಲು ಜಿಲ್ಲಾಡಳಿತದ ಸಹಕಾರ ಪಡೆದು ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇಲಾಖೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ತುರ್ತು ಅಗತ್ಯ ಕ್ರಮ ವಹಿಸಬೇಕು. ಮಕ್ಕಳು ಮೊಮೊ ಗೇಮ್ ಗೆ ಅಂಟಿಕೊಳ್ಳದಂತೆ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಇಲಾಖೆ ನಿರ್ದೇಶಿಸಿದೆ.

English summary
In the wake of media reports that teenage children are being fatally playing the game 'Momo', the education department has recently taken a circulation and suggested that it take precautionary measures to prevent unhealthy Internet game.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X