ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣಕಾಶಿ ನಂಜನಗೂಡಿನಲ್ಲಿ ಸಂಭ್ರಮದಿಂದ ನಡೆದ ಚಿಕ್ಕ ಜಾತ್ರೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್.26:ದಕ್ಷಿಣಕಾಶಿ ನಂಜನಗೂಡಿನ ಶ್ರೀ ಕಂಠೇಶ್ವರಸ್ವಾಮಿಯವರ ಚಿಕ್ಕ ಜಾತ್ರಾ ಮಹೋತ್ಸವ ಶನಿವಾರ ಸಡಗರ ಸಂಭ್ರಮದಿಂದ ನಡೆಯಿತು. ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತಸಾಗರ ದೇಗುಲದ ಮುಂದೆ ಹಾದು ಹೋದ ರಥಕ್ಕೆ ಹಣ್ಣು ಜವನ ಎಸೆದು ಜೈಕಾರ ಕೂಗಿ ಪುನೀತರಾದರು.

ಶನಿವಾರ ಬೆಳಿಗ್ಗೆ 11-10 ರಿಂದ 11-30 ರವರೆಗೆ ಸಲ್ಲುವ ಶುಭ ಲಗ್ನದಲ್ಲಿ ದೇಗುಲದ ಪ್ರಧಾನ ಆಗಮಿಕರಾದ ಸಿ, ನಾಗಚಂದ್ರ ದೀಕ್ಷಿತ್ ರವರು ರಥಗಳಿಗೆ ಪೂಜೆ ಸಲ್ಲಿಸಿ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ ನಂತರ ಹೂವಿನಿಂದ ಅಲಂಕೃತಗೊಂಡ ಗಣಪತಿ, ಚಂಡಿಕೇಶ್ವರ, ಪಾರ್ವತಿ ಅಮ್ಮನವರು ಶ್ರೀ ಕಂಠೇಶ್ವರಸ್ವಾಮಿ ರಥಗಳಿಗೆ ಚಾಲನೆ ನೀಡಲಾಯಿತು.

ಕಂಡ್ಲೂರಿನಲ್ಲಿ ವಿಶಿಷ್ಟ ಮಾರಿ ಜಾತ್ರೆ ಆಚರಣೆ: ಹೇಗೆ ನೋಡಿ?ಕಂಡ್ಲೂರಿನಲ್ಲಿ ವಿಶಿಷ್ಟ ಮಾರಿ ಜಾತ್ರೆ ಆಚರಣೆ: ಹೇಗೆ ನೋಡಿ?

ಬಳಿಕ ನೆರೆದಿದ್ದ ಸಾವಿರಾರು ಭಕ್ತರು ಜೈ ಶ್ರೀಕಂಠ, ಜೈ ನಂಜುಂಡ ಎಂಬ ಘೋಷಣೆಗಳನ್ನು ಕೂಗುತ್ತಾ ರಥಗಳನ್ನು ರಥಬೀದಿಯಲ್ಲಿ ಎಳೆದರು. ಈ ವೇಳೆ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತಸಮೂಹ ಜೈಕಾರ ಕೂಗುತ್ತಾ ಹೂವು, ಹಣ್ಣು ಜವನಗಳನ್ನು ಎಸೆದರೆ ಮತ್ತೆ ಕೆಲವರು ಭಕ್ತಿಯಿಂದ ನಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Chikka fair was held in Nanjangud

ಸಂಪ್ರದಾಯದಂತೆ ಯಾವುದೇ ಅಡೆತಡೆಯಿಲ್ಲದೆ ರಥಬೀದಿಯಲ್ಲಿ ಸಾಗಿದ ಮೂರು ರಥಗಳು ಮಧ್ಯಾಹ 12-50ರ ವೇಳೆಗೆ ಗಂಟೆಗೆ ಸ್ವಸ್ಥಾನಕ್ಕೆ ಮರಳಿದವು.

Chikka fair was held in Nanjangud

ರಾಜಮಾತೆಯಿಂದ ಪೂಜೆ
ಜಾತ್ರೆಗೆ ಮೈಸೂರು ಅರಸು ಮನೆತನದ ಮಹಾರಾಣಿ ಪ್ರಮೋದ ದೇವಿ ಒಡೆಯರು ಆಗಮಿಸಿ ವಿಶೇಷವಾಗಿ ಹೂವು ಮತ್ತು ವಜ್ರ ವೈಢೂರ್ಯದಿಂದ ಅಲಂಕೃತಗೊಂಡ ಶ್ರೀ ಕಂಠೇಶ್ವರಸ್ವಾಮಿಯವರ ಉತ್ಸವ ಮೂರ್ತಿಗೆ ಹಾಗೂ ಅಮ್ಮನವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಬಳಿಕ ಅವರು ಸ್ಥಳೀಯ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿತ್ತು.

English summary
Sri Kanteshwaraswamy's Chikka fair was held in Nanjangud.Thousands of devotees attended the fair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X