• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೇಮಕಾತಿ ವಿಚಾರದಲ್ಲಿ ಜಾತಿ ನೋಡುವುದಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

|

ಮೈಸೂರು, ನವೆಂಬರ್ 29: ಉನ್ನತ ಶಿಕ್ಷಣದಲ್ಲಿ ಕರ್ನಾಟಕ ರಾಜ್ಯವನ್ನು ವಿಶ್ವ ಭೂಪಟದಲ್ಲಿ ತರಲು ರಾಜ್ಯದ ವಿಶ್ವವಿದ್ಯಾನಿಲಯಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಗೊಳಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದರು.

ಮೈಸೂರು ವಿವಿ ಮಾನಸಗಂಗೋತ್ರಿಯಲ್ಲಿರುವ ರಾಣಿಬಹದ್ದೂರ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯದಲ್ಲಿ ಗುಣಾತ್ಮಕ ಉನ್ನತ ಶಿಕ್ಷಣ: ಹೊಸಸವಾಲುಗಳು' ಕುರಿತು ಕರ್ನಾಟಕ ರಾಜ್ಯದ ಎಲ್ಲಾ ಕುಲಪತಿಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯೋಜನೆ ಹಿನ್ನೆಲೆಯಲ್ಲಿ ವಿವಿಗಳು ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ತ್ವರಿತವಾಗಿ ಯೋಜನೆ ರೂಪಿಸುವಂತೆ ಸೂಚಿಸಿದ ಮುಖ್ಯಮಂತ್ರಿಗಳು, ಸರ್ಕಾರದ ವೇಗಕ್ಕೆ ತಕ್ಕಂತೆ ಕುಲಪತಿಗಳು, ಅಧಿಕಾರಿಗಳು ಕಾರ್ಯನಿರ್ವಹಿಸಬೇಕು.

ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸಾಹಿತಿ ಭೈರಪ್ಪ ಬರೆದ ಪತ್ರದಲ್ಲೇನಿದೆ?

ಮುಂದಿನ ಪೀಳಿಗೆಗೆ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯಿದೆ. ಹಿಂದಿನ ಕಾಯಿದೆ ಈಗಿನ ಆಧುನಿಕ ತಂತ್ರಜ್ಞಾನಕ್ಕೆ ಪೂರಕವಾಗಿಲ್ಲ. ಹೀಗಾಗಿ ಇದರ ಬಗ್ಗೆ ಮರು ಆಲೋಚನೆ ಮಾಡಬೇಕಿದೆ. ಹಿಂದಿನ ಕಾಯಿದೆಯ ಒಳ್ಳೆಯ ಅಂಶಗಳನ್ನು ಉಳಿಸಿಕೊಂಡು ಇದಕ್ಕೆ ಹೆಚ್ಚಿನ ಬಲ ತುಂಬಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.

 ಆರೋಪಗಳಿಗೆ ಎಡೆ ಮಾಡಿಕೊಡಬೇಡಿ

ಆರೋಪಗಳಿಗೆ ಎಡೆ ಮಾಡಿಕೊಡಬೇಡಿ

ಕುಲಪತಿಗಳು ಬೋಧಕ ಸಿಬ್ಬಂದಿ ನೇಮಕಾತಿಯನ್ನು ಪ್ರಸ್ತಾಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಬೋಧಕ ಸಿಬ್ಬಂದಿಯ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಿ, ಅನುಮತಿ ನೀಡುತ್ತೇನೆ. ಜತೆಗೆ ಅರ್ಹತೆ ಆಧಾರದ ಮೇಲೆ ಉಪನ್ಯಾಸಕರನ್ನು ನೇಮಿಸಿಕೊಳ್ಳಿ. ಯಾವುದೇ ಆರೋಪಗಳಿಗೆ ಎಡೆ ಮಾಡಿಕೊಡಬೇಡಿ. ನಾನು ಜಾತಿ ನೋಡುವುದಿಲ್ಲ. ಪಾರದರ್ಶಕತೆ ಇರಲಿ ಎಂದು ತಿಳಿಸಿದರು.

ಬಿಜೆಪಿಗಿಂತ ಒಳ್ಳೆಯ ಹಿಂದುತ್ವ ಪಾಲಿಸುತ್ತೇವೆ: ಕುಮಾರಸ್ವಾಮಿ

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಬೇಕಿದೆ

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಬೇಕಿದೆ

ಇಸ್ರೇಲ್ ಮಾದರಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲೂ ಸುಧಾರಣೆ ತರಬೇಕಿದೆ. ಅಮೆರಿಕ ಬಿಟ್ಟರೆ ಬೋಯಿಂಗ್ ವಿಮಾನ ತಯಾರಿಸುವ ಕೈಗಾರಿಕೆ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಇದಕ್ಕೆ ಪೂರಕವಾಗಿ ತಾಂತ್ರಿಕ ಕಾಲೇಜುಗಳು ತಂತ್ರಜ್ಞಾನ ಕೌಶಲ ಬೆಳೆಸಿಕೊಳ್ಳಬೇಕಿದೆ. ಗುಣಮಟ್ಟದ ಶಿಕ್ಷಣ ನೀಡದಿದ್ದರೆ ಪ್ರಯೋಜನವಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ಕುಮಾರಸ್ವಾಮಿಗೆ ಕುಮಾರ ಬಂಗಾರಪ್ಪ ಎಸೆದ ವಿಚಿತ್ರ ಸವಾಲು!

ಡ್ರೆಸ್ ಕೋಡ್ ಬದಲಾಗಬೇಕು

ಡ್ರೆಸ್ ಕೋಡ್ ಬದಲಾಗಬೇಕು

ಹಿಂದೆ ಶಿಕ್ಷಕರು, ಪ್ರಾಧ್ಯಾಪಕರನ್ನು ನೋಡಿದರೆ ವಿದ್ಯಾರ್ಥಿಗಳು ಹೆದರುತ್ತಿದ್ದರು. ಗೌರವ ನೀಡುತ್ತಿದ್ದರು ಎಂದ ಮುಖ್ಯಮಂತ್ರಿಗಳು ಇಂದು ಪ್ರಾಧ್ಯಾಪಕರು, ವಿದ್ಯಾರ್ಥಿಗಳ ನಡುವೆ ವ್ಯತ್ಯಾಸವೇ ಇರುವುದಿಲ್ಲ. ಪ್ರಾಧ್ಯಾಪಕರೂ ಗೌರವ ತೋರುವ ರೀತಿಯಲ್ಲಿ ಇರಲ್ಲ. ಅವರ ಹಾವ ಭಾವಗಳು (ಮ್ಯಾನರಿಸಂ), ಡ್ರೆಸ್ ಕೋಡ್ ಬದಲಾಗಬೇಕು. ವಿವಿಗಳ ವಾತಾವರಣದಲ್ಲೂ ಬದಲಾವಣೆಯಾಗಬೇಕು ಎಂದು ಹೇಳಿದರು.

 ತರಬೇತಿ ಪಡೆಯಬೇಕು

ತರಬೇತಿ ಪಡೆಯಬೇಕು

ಬೋಧಕ ಸಿಬ್ಬಂದಿಗಳು ತಮ್ಮ ಗುಣಮಟ್ಟ ಹೆಚ್ಚಿಸಿಕೊಳ್ಳಲು ತರಬೇತಿ ಪಡೆಯಬೇಕು. ಇದರಲ್ಲಿ ಯಾವುದೇ ಅಳುಕು ಇರಬಾರದು. ಇದನ್ನು ಸರ್ಕಾರ ಕಡ್ಡಾಯ ಮಾಡಲು ಹೊರಟರೆ ಪ್ರತಿರೋಧ ಎದುರಾಗುತ್ತದೆ.

ತಕ್ಷಣದಲ್ಲೇ ಬೆಂಗಳೂರಿನಲ್ಲಿ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ, ಉನ್ನತಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯದ ಎಲ್ಲಾ ಕುಲಪತಿಗಳ ಪ್ರತ್ಯೇಕ ಸಭೆ ಕರೆಯುತ್ತೇನೆ. ಉನ್ನತಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಸಭೆಯಲ್ಲಿ ಇರುತ್ತಾರೆ ಎಂದು ಮುಖ್ಯಮಂತ್ರಿಗಳು ಹೇಳಿದರು.

English summary
Chief Minister Kumaraswamy talked in conversation program organized with all the Chancellors of the state of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X