ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಕೊರೊನಾ ಸೋಂಕಿಗೆ ಭಾರತದಲ್ಲಿಯೇ ರಾಸಾಯನಿಕ ಔಷಧಿ ಅಭಿವೃದ್ಧಿ'

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 10: ಕೊರೊನಾ ವೈರಸ್‌ ಸೋಂಕಿನ ಚಿಕಿತ್ಸೆಗೆ ಬೇಕಾದ ಔಷಧ ತಯಾರಿಸಲು ಅಗತ್ಯವಿರುವ ರಾಸಾಯನಿಕವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೇಂದ್ರ ಸರಕಾರದ ವೈಜ್ಞಾನಿಕ ಹಾಗೂ ಔದ್ಯಮಿಕ ಸಂಶೋಧನಾ ಇಲಾಖೆ ಕಾರ್ಯದರ್ಶಿಯೂ ಆಗಿರುವ ಸಿಎಸ್ಐಆರ್ ಮಹಾನಿರ್ದೇಶಕ, ಹೆಸರಾಂತ ವಿಜ್ಞಾನಿ ಡಾ.ಶೇಖರ್‌ ಸಿ.ಮಾಂಡೆ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕೊರೊನಾ ಸೋಂಕಿನ ಚಿಕಿತ್ಸೆಗೆ ಜಗತ್ತಿನ ಅನೇಕ ಕಡೆ ಸಂಶೋಧನೆಗಳು ನಡೆಯುತ್ತಿವೆ' ಎಂದು ತಿಳಿಸಿದರು.

ಕೊರೊನಾ ಎಫೆಕ್ಟ್; ಮೈಸೂರಲ್ಲಿ ಶೇ.70 ಇಳಿದಿದೆ ತರಕಾರಿ ಬೆಲೆಕೊರೊನಾ ಎಫೆಕ್ಟ್; ಮೈಸೂರಲ್ಲಿ ಶೇ.70 ಇಳಿದಿದೆ ತರಕಾರಿ ಬೆಲೆ

"ಸಿಎಸ್ಐಆರ್ ನ ಹೈದರಾಬಾದ್‌ನಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕೆಮಿಕಲ್ ಟೆಕ್ನಾಲಜಿಯಲ್ಲಿ ಈ ಸೋಂಕಿಗೆ ಔಷಧ ತಯಾರಿಸಲು ಅಗತ್ಯ ರಾಸಾಯನಿಕವನ್ನು ಅಭಿವೃದ್ಧಿಪಡಿಸುವ ಕಾರ್ಯ ಆರಂಭಿಸಿದ್ದೇವೆ' ಎಂದು ಹೇಳಿದರು.

Chemical Drug Development In India For Coronavirus Infection

ಕೊರೊನಾ ವೈರಸ್ ಆತಂಕ; ಇಂದಿನಿಂದ ಗಣಪತಿ ಆಶ್ರಮದ ಹಲವು ಸ್ಥಳಗಳು ಬಂದ್ಕೊರೊನಾ ವೈರಸ್ ಆತಂಕ; ಇಂದಿನಿಂದ ಗಣಪತಿ ಆಶ್ರಮದ ಹಲವು ಸ್ಥಳಗಳು ಬಂದ್

ಕೊರೊನಾ ವೈರಸ್‌ ಸೋಂಕಿನ ಬಗ್ಗೆ ಪ್ರತಿದಿನ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ ಎಂದಿದ್ದಾರೆ. ಈಗಾಗಲೇ ಕರ್ನಾಟಕಕ್ಕೂ ಕೊರೊನಾ ಸೋಂಕು ಇರುವ ವ್ಯಕ್ತಿ ಪತ್ತೆಯಾಗಿದ್ದು, ಶೀಘ್ರದಲ್ಲಿಯೇ ಈ ಮಾರಕ ಕಾಯಿಲೆಗೆ ಔಷಧಿ ಕಂಡುಹಿಡಿಯಬೇಕಿದೆ.

English summary
"The Indian Institute of Chemical Technology, (CSIR) Hyderabad, has begun to develop the chemical necessary to manufacture the drug for Corona infection" CSIR Genaral Director Shekhar Mande said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X