ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡಿಬೆಟ್ಟದ ಆದಾಯ 5 ವರ್ಷದಲ್ಲೇ ದಾಖಲೆ ಪ್ರಮಾಣದಲ್ಲಿ ಏರಿಕೆ

|
Google Oneindia Kannada News

ಮೈಸೂರು, ಏಪ್ರಿಲ್ 6 : ನಾಡ ಅಧಿದೇವತೆ ಚಾಮುಂಡಿ ತಾಯಿ ದಿನದಿಂದ ದಿನಕ್ಕೆ ತನ್ನ ಆದಾಯ ಹೆಚ್ಚಿಸಿಕೊಳ್ಳುತ್ತಾ ಶ್ರೀಮಂತಳಾಗುತ್ತಿದ್ದಾಳೆ. ಹೌದು, ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯ ಸಾಲಿನಲ್ಲಿ ವಿವಿಧ ಮೂಲಗಳಿಂದ 33,30ಕೋಟಿ ರರೂ ಆದಾಯ ಬಂದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 3.35 ಕೋಟಿ ರೂ ಆದಾಯ ಹೆಚ್ಚಳವಾಗಿದೆ. ಹುಂಡಿಗಳಿಂದ ಬಂದ ಆದಾಯ, ವಿಶೇಷ ಪ್ರವೇಶ ಶುಲ್ಕ, ನೇರ ಪ್ರವೇಶ ಶುಲ್ಕ, ಡಿಡಿ ಮತ್ತು ಧನಾದೇಶಗಳಿಂದ ಬಂದ ಕಾಣಿಕೆ, ದೇವಾಲಯದ ವಿವಿಧ ಗುತ್ತಿಗೆ, ಲಾಡು ಪ್ರಸಾದದ ಮಾರಾಟ, ಸೇವಾರ್ಥಗಳಿಂದ ಹಾಗೂ ದೇವತೆಗಳ ಮೆರವಣಿಗೆ ಸೇವೆ, ಅತಿಥಿಗೃಹದ ಬಾಡಿಗೆ, ದಾಸೋಹ ಭವನದ ಸೇವಾ ಕಾಣಿಕೆಗಳಿಂದ ಒಟ್ಟು 33.30 ಕೋಟಿ ರೂ ಆದಾಯ ಹರಿದು ಬಂದಿದೆ.

 ಚಾಮುಂಡಿ ಬೆಟ್ಟ ಒತ್ತುವರಿ ಮಾಡಲು ಮುಂದಾದವರಿಗೆ ಅರಣ್ಯ ಇಲಾಖೆ ಶಾಕ್ ಚಾಮುಂಡಿ ಬೆಟ್ಟ ಒತ್ತುವರಿ ಮಾಡಲು ಮುಂದಾದವರಿಗೆ ಅರಣ್ಯ ಇಲಾಖೆ ಶಾಕ್

Chamundi Hills revenue increased by 5 years

ಕಳೆದ ಐದು ವರ್ಷದ ಆದಾಯಗಳಿಗೆ ಹೋಲಿಸಿದರೆ ಈ ಬಾರಿ ಆದಾಯ ದ್ವಿಗುಣಗೊಂಡಿದೆ. ಈ ಬಗ್ಗೆ ಚಾಮುಂಡಿ ಬೆಟ್ಟದ ಆಡಳಿತ ಮಂಡಳಿ ಅಧಿಕೃತವಾಗಿ ಘೋಷಣೆ ಮಾಡಿದೆ.2017-18ಸಾಲಿನಲ್ಲಿ 29,95,17,646 ರಷ್ಟಿದ್ದ ಆದಾಯ ಈ ಬಾರಿ ಮತ್ತಷ್ಟು ಏರಿಕೆಯಾಗಿದೆ. 2018-19 ಸಾಲಿನಲ್ಲಿ 33,30,68,162 ರೂ ಆದಾಯವಾಗಿದ್ದು, ಆದಾಯ ಹೆಚ್ಚಳ ಹಿನ್ನೆಲೆ ಎಫ್ ಡಿ ಹಣ ಕೂಡ ಹೆಚ್ಚಳವಾಗಿದ್ದು, ದೇವಸ್ಥಾನ ಆಡಳಿತ ಮಂಡಳಿ 3 ಕೊಟಿ ಹಣ ಎಫ್ ಡಿ ಇಟ್ಟಿದೆ.

English summary
The revenue from Sri Chamundeshwari Temple of Chamundi Hills is Rs 33,30 crore from various sources. This time compared to last year, Rs 3.35 crore has been added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X