ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೊಲೀಸರಿಗೆ ಚಾಲೆಂಜ್ ಹಾಕಿದವ ಮೈಸೂರಲ್ಲಿ ಸಿಕ್ಕಿಬಿದ್ದ!

|
Google Oneindia Kannada News

Recommended Video

ಹೊಡೆತ ತಿಂದ ಟ್ರಕ್ ಡ್ರೈವರ್ ನಾಪತ್ತೆ, ಪೊಲೀಸ್ ಮೇಲೆ ಅನುಮಾನ..? | Oneindia Kannada

ಬೆಂಗಳೂರು, ಸೆಪ್ಟೆಂಬರ್ 24 : "ಬೆಂಗಳೂರಿಗೆ ಬರ್ತಾ ಇದ್ದೀನಿ. ನನ್ನ ಹತ್ತಿರ ಕಾರಿನ ದಾಖಲೆಗಳು ಇಲ್ಲ, ತಾಕತ್ ಇದ್ರೆ ನನ್ನನ್ನು ಹಿಡಿಯಿರಿ" ಎಂದು ಮೈಸೂರಿನ ಕಾರಿನ ಚಾಲಕನೊಬ್ಬ ಬೆಂಗಳೂರು ಸಂಚಾರಿ ಪೊಲೀಸರಿಗೆ ಚಾಲೆಂಜ್ ಹಾಕಿದ್ದ.

ಪೊಲೀಸರನ್ನು ಅವಮಾನಿಸುವ ರೀತಿಯಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಕಾರು ಚಾಲಕನನ್ನು ಮೈಸೂರಿನಲ್ಲಿಯೇ ಪೊಲೀಸರು ಹಿಡಿದಿದ್ದಾರೆ. ವಿಡಿಯೋದಲ್ಲಿ ಹೇಳಿಕೊಂಡಂತೆ ಆತನ ಬಳಿ ಕಾರಿನ ಯಾವುದೇ ದಾಖಲೆಗಳು ಇಲ್ಲ.

ವೈರಲ್ ವಿಡಿಯೋ; ಹಲ್ಲೆ ಮಾಡಿದ್ದ ಪೇದೆ ಮಹಾಸ್ವಾಮಿ ಎತ್ತಂಗಡಿವೈರಲ್ ವಿಡಿಯೋ; ಹಲ್ಲೆ ಮಾಡಿದ್ದ ಪೇದೆ ಮಹಾಸ್ವಾಮಿ ಎತ್ತಂಗಡಿ

ವಿಡಿಯೋ ಮಾಡಿದವರು 27 ವರ್ಷ ವಯಸ್ಸಿನ ರಘು. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಿವಾಸಿಯಾಗಿದ್ದಾನೆ. ಪೊಲೀಸರು ಈತನ ವಿರುದ್ಧ ದೂರನ್ನು ಸಹ ದಾಖಲು ಮಾಡಿಕೊಂಡಿದ್ದಾರೆ. ತಾನು ಮಾಡಿದ ಕಾರ್ಯ ಸರಿಯಲ್ಲ ಎಂದು ರಘು ತಪ್ಪೊಪ್ಪಿಕೊಂಡಿದ್ದಾನೆ.

ಪೇದೆಯಿಂದ ಹಲ್ಲೆ; ಟ್ರಕ್ ಚಾಲಕನಿಗೆ ಬೆದರಿಕೆ, ಪೇದೆ ಎತ್ತಂಗಡಿಪೇದೆಯಿಂದ ಹಲ್ಲೆ; ಟ್ರಕ್ ಚಾಲಕನಿಗೆ ಬೆದರಿಕೆ, ಪೇದೆ ಎತ್ತಂಗಡಿ

ಅಕ್ಟೋಬರ್ 2ರಂದು ಬೆಂಗಳೂರಿಗೆ ಬರುತ್ತೇನೆ ನನ್ನ ಬಳಿ ಯಾವುದೇ ದಾಖಲೆಗಳು ಇಲ್ಲ ತಾಕತ್ ಇದ್ದರೆ ನನ್ನನ್ನು ಹಿಡಿಯಿರಿ ಎಂದು ವಿಡಿಯೋ ಮಾಡಿದ್ದ ರಘುವನ್ನು ಮೈಸೂರಿನಲ್ಲಿಯೇ ಹುಡುಕಿ ಪೊಲೀಸರು ಹಿಡಿದಿದ್ದಾರೆ. ರಘು ಬೆಂಗಳೂರು ನಗರದಲ್ಲಿಯೂ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದು 1200 ರೂ. ದಂಡ ಕಟ್ಟುವುದು ಬಾಕಿ ಇರುವುದು ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ.

ವೈರಲ್ ವಿಡಿಯೋ; ಪೊಲೀಸ್ ಅಲ್ಲ ಚಾಲಕನ ವಿರುದ್ಧ ಎಫ್‌ಐಆರ್ವೈರಲ್ ವಿಡಿಯೋ; ಪೊಲೀಸ್ ಅಲ್ಲ ಚಾಲಕನ ವಿರುದ್ಧ ಎಫ್‌ಐಆರ್

ಮೈಸೂರು ಪೊಲೀಸರಿಗೆ ಕರೆ

ಮೈಸೂರು ಪೊಲೀಸರಿಗೆ ಕರೆ

ರಘು ಮಾಡಿದ್ದ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ್ದ ಬೆಂಗಳೂರು ನಗರ ಸಂಚಾರ ಜಂಟಿ ಆಯುಕ್ತರಾದ ಡಾ. ಬಿ. ಆರ್. ರವಿಕಾಂತೇಗೌಡ ಮೈಸೂರು ನಗರದ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿ ವಿಡಿಯೋದಲ್ಲಿನ ವಿದ್ಯಮಾನಗಳ ಬಗ್ಗೆ ಹಾಗೂ ಸದರಿ ಚಾಲಕನ ದುರಹಂಕಾರದ ಹಾಗೂ ಅನುಚಿತ ವರ್ತನೆ ಬಗ್ಗೆ ತಿಳಿಸಿದ್ದರು.

ಚಾಲಕನ ಪತ್ತೆಗೆ ಸೂಚನೆ

ಚಾಲಕನ ಪತ್ತೆಗೆ ಸೂಚನೆ

ಮೈಸೂರು ನಗರ ಪೊಲೀಸ್ ಆಯುಕ್ತರು ನರಸಿಂಹರಾಜ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗೆ ಕೆಎ 09 ಬಿ1200 ವಾಹನ ಮತ್ತು ಅದರ ಮಾಲೀಕನನ್ನು ಪತ್ತೆ ಮಾಡಲು ಸೂಚನೆ ನೀಡಿದ್ದರು. ಪೊಲೀಸರು ಮೈಸೂರಿನಲ್ಲಿಯೇ ಆತನನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದರು.

ಯಾವುದೇ ದಾಖಲೆಗಳು ಇಲ್ಲ

ಯಾವುದೇ ದಾಖಲೆಗಳು ಇಲ್ಲ

ಕಾರು ಚಾಲಕ ರಘು ವಿಡಿಯೋದಲ್ಲಿ ಹೇಳಿದಂತೆ ಆತನ ಬಳಿ ವಾಹನದ ಯಾವುದೇ ದಾಖಲಾತಿ ಇಲ್ಲ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ತಾನು ಮಾಡಿದ ಕೃತ್ಯ ಈ ಮಟ್ಟಿಗೆ ಪ್ರಚಾರ ಪಡೆಯುತ್ತದೆ ಎಂದು ಭಾವಿಸಿರಲಿಲ್ಲ ಹಾಗೂ ತಾನು ಮಾಡಿದ್ದು ಸರಿಯಲ್ಲವೆಂದು ಕಾರು ಚಾಲಕ ಒಪ್ಪಿಕೊಂಡಿದ್ದಾನೆ.

ಬೆಂಗಳೂರಿನಲ್ಲಿ ನಿಯಮ ಉಲ್ಲಂಘನೆ

ಬೆಂಗಳೂರಿನಲ್ಲಿ ನಿಯಮ ಉಲ್ಲಂಘನೆ

ರಘು ಬೆಂಗಳೂರಿನಲ್ಲಿಯೂ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾನೆ. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ, ಏಕಮುಖ ವಾಹನ ಸಂಚಾರ, ಸಿಗ್ನಲ್ ಜಂಪ್ ಸೇರಿದಂತೆ ಒಟ್ಟು 1200 ರೂ.ಗಳ ದಂಡ ಮೊತ್ತವು ರಘು ವಾಹನದ ಮೇಲೆ ಬಾಕಿ ಇತ್ತು.

English summary
27 year old youth Raghu detained by the police who challenged Bengaluru Traffic Police to catch him. In video Raghu claimed that he has no document for his car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X