ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೆಹಲಿ ಗಲಭೆ ಪೂರ್ವನಿಯೋಜಿತ ಎಂದ ಚಕ್ರವರ್ತಿ ಸೂಲಿಬೆಲೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 29: "ಸಿಎಎ ಪರ, ವಿರೋಧವಾಗಿ ದೆಹಲಿಯಲ್ಲಿ ನಡೆಯುತ್ತಿರುವ ಧಂಗೆ ಪೂರ್ವ ನಿಯೋಜಿತ" ಎಂದು ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದರು.

Recommended Video

Chakravarti Sulibele reacts on recent Delhi protests

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೆಹಲಿ ಗಲಾಟೆಯ ಒಂದೊಂದು ವಿಡಿಯೋಗಳು ಹೊರಬಂದಾಲೂ ಈ ಅಂಶ ಎಲ್ಲರಿಗೂ ತಿಳಿಯುತ್ತಿದೆ.
ದೇಶದಲ್ಲಿ ಅಸಹಿಷ್ಣುತೆ ಇದೆ ಎಂಬುದನ್ನು ಪ್ರಗತಿಪರರು ಹಿಂದಿನಿಂದಲೂ ಹೇಳುತ್ತಿದ್ದಾರೆ. ಅದು ಒಂದು ಧರ್ಮದ ಕಾರಣಕ್ಕಾಗಿ ಆಗುತ್ತಿರುವುದು ನಿಚ್ಚಳವಾಗಿ ಕಾಣುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳುವ ಅಗತ್ಯೆ ಇದೆ" ಎಂದರು.

ದೆಹಲಿ ಹಿಂಸಾಚಾರ: ಕೇಂದ್ರ ಸರ್ಕಾರದ ವೈಫಲ್ಯ ಎಂದ ದೇವೇಗೌಡದೆಹಲಿ ಹಿಂಸಾಚಾರ: ಕೇಂದ್ರ ಸರ್ಕಾರದ ವೈಫಲ್ಯ ಎಂದ ದೇವೇಗೌಡ

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರಿಗೆ ಕೇವಲವಾಗಿ ಮಾತನಾಡುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು,"ಹಿರಿಯರನ್ನು ಗೌರವಿಸುವುದು ಭಾರತದ ಪರಂಪರೆ. ಹೀಗಾಗಿ ಹಿರಿಯರನ್ನು ಗೌರವಿಸುವುದನ್ನು ಪ್ರತಿಯೊಬ್ಬರೂ ಕಲಿಯಬೇಕು" ಎಂದು ಮಾರ್ಮಿಕವಾಗಿ ಹೇಳಿದರು.

Chakravarti Sulibele Reacted To Caa Related Riot In Dehli

"ಕನ್ನಡ ಮತ್ತು ಮರಾಠಿ ವಿಚಾರಕ್ಕೆ ಬಂದರೆ ಯಾರೂ ಪ್ರತ್ಯೇಕರಲ್ಲ. ಭಾರತದ ಅಡಿಯಲ್ಲಿ ನಾವೆಲ್ಲರೂ ಒಂದೇ. ಭಾಷೆ ವಿಚಾರದಲ್ಲಿ ಕಿತ್ತಾಡುವುದು ಬೇಡ. ಜನರನ್ನ ಬೇರ್ಪಡಿಸುವುದು ಬೇಡ. ಭಾಷೆ, ಸಂಸ್ಕೃತಿ ಮತ್ತು ನಮ್ಮ ಗಡಿ ಜಗಳವಾಡದೇ ನಾವೆಲ್ಲರೂ ಒಂದೇ ಎಂಬುದನ್ನು ಕಲಿಯಬೇಕು" ಎಂದು ಹೇಳಿದರು.

English summary
Chakravarti Sulibele reacted to caa related riot in dehli. "This riot in dehli is pre planned" he said in mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X