ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೈಸೂರಲ್ಲಿ ಹೆಚ್ಚುತ್ತಿದೆ ಸರಗಳ್ಳರ ಕೈಚಳಕ

|
Google Oneindia Kannada News

ಮೈಸೂರು, ಏಪ್ರಿಲ್ 6 : ಮೈಸೂರಿನಲ್ಲಿ ದಿನೇ ದಿನೇ ಚುನಾವಣಾ ಕಣ ರಂಗೇರುತ್ತಿದೆ. ಇತ್ತ ಎಲ್ಲಾ ಖಾಕಿ ಪಡೆ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮತ್ತೊಂದು ಕಡೆ ದಿನದಿಂದ ದಿನಕ್ಕೆ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿವೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಾರ್ಚ್ ತಿಂಗಳಲ್ಲಿ 9 ಕಡೆ ಸರಗಳ್ಳತನ ನಡೆದಿದೆ. ಆದರೂ ಸರಗಳ್ಳರ ಜಾಡು ಪತ್ತೆಯಾಗಿಲ್ಲ. ಕಳೆದೊಂದು ವಾರದಿಂದ ನಿತ್ಯವೂ ಸರಗಳ್ಳತನ ನಡೆಯುತ್ತಿದೆ. ಒಂಟಿ ಮಹಿಳೆಯರೇ ಕಳ್ಳರ ಗುರಿಯಾಗಿದ್ದಾರೆ. ವೃದ್ಧ ಮಹಿಳೆಯರೂ ಸರ ಕಳೆದುಕೊಳ್ಳುತ್ತಿದ್ದಾರೆ.

 ಶಿರಸಿಯಲ್ಲಿ ದೇವಾಲಯದ ಗೋಡೆ ಧ್ವಂಸಗೊಳಿಸಿ ಕಳಶ ಕದ್ದೊಯ್ದ ಕಿಡಿಗೇಡಿಗಳು ಶಿರಸಿಯಲ್ಲಿ ದೇವಾಲಯದ ಗೋಡೆ ಧ್ವಂಸಗೊಳಿಸಿ ಕಳಶ ಕದ್ದೊಯ್ದ ಕಿಡಿಗೇಡಿಗಳು

ಕೃಷ್ಣರಾಜ ಹಾಗೂ ದೇವರಾಜ ಉಪವಿಭಾಗಗಳಲ್ಲಿ ಹೆಚ್ಚಾಗಿ ಈ ಪ್ರಕರಣಗಳು ನಡೆದಿದ್ದು, ಕಳ್ಳರು ತಮ್ಮ ಕಾರ್ಯಕ್ಷೇತ್ರವನ್ನು ಇನ್ನಷ್ಟು ವಿಸ್ತರಿಸಿಕೊಂಡಿದ್ದಾರೆ. ಸಂಜೆ ವೇಳೆಯಲ್ಲಿ ಮಾತ್ರ ಕೈಚಳಕ ತೋರುತ್ತಿದ್ದ ಕಳ್ಳರು ಇದೀಗ ಮಧ್ಯಾಹ್ನದ ವೇಳೆಯೂ ಕಳವಿಗೆ ಇಳಿದಿದ್ದಾರೆ. ಹೆಚ್ಚಾಗಿ ಸರಣಿ ಕಳ್ಳತನಗಳನ್ನು ಮಾಡದ ಇವರು ಒಂದು ಅಥವಾ ಎರಡು ಕಳವಿಗಷ್ಟೇ ಸೀಮಿತರಾಗಿ ಕೃತ್ಯ ಎಸಗುತ್ತಿದ್ದಾರೆ.

Chain snatching cases increasing in Mysuru during election time

ಎಲ್ಲೂ ತಮ್ಮ ಕುರುಹು ಬಿಟ್ಟುಕೊಡದೇ ಪೊಲೀಸರ ಕಣ್ಣು ತಪ್ಪಿಸುತ್ತಿದ್ದಾರೆ. ಹಲವು ಪ್ರಕರಣಗಳಲ್ಲಿ ಹಿಂಭಾಗದಿಂದ ಬಂದು ಸರ ಕಿತ್ತುಕೊಂಡು ಹೋಗಿದ್ದಾರೆ. ಇದರಿಂದ ಕಳ್ಳರ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ನಿರ್ಜನ ಪ್ರದೇಶಗಳು ಹಾಗೂ ವಿರಳ ಜನಸಂಚಾರ ಇರುವ ಅವಧಿಯಲ್ಲಿ ಹೆಚ್ಚು ಕಳ್ಳತನಗಳು ನಡೆದಿವೆ. ಕೆಲವು ವೇಳೆ ಒಬ್ಬನೇ ವ್ಯಕ್ತಿ ಈ ಕೃತ್ಯ ಎಸಗಿದ್ದರೆ, ಮತ್ತೆ ಕೆಲವೆಡೆ ಇಬ್ಬರು ಭಾಗಿಯಾಗಿರುವುದು ಕಂಡು ಬಂದಿದೆ.

ಯಶಸ್ವಿಯಾದ ಆಪರೇಷನ್ ಕಾವೇರಿ ಎಕ್ಸ್‌ಪ್ರೆಸ್:ಮೂವರ ಬಂಧನ ಯಶಸ್ವಿಯಾದ ಆಪರೇಷನ್ ಕಾವೇರಿ ಎಕ್ಸ್‌ಪ್ರೆಸ್:ಮೂವರ ಬಂಧನ

ಒಟ್ಟಾರೆ ಪೊಲೀಸರು ಒಂದೆಡೆ ಬ್ಯುಸಿಯಾದರೇ ಕಳ್ಳರು ತಮ್ಮ ಕೈಚಳಕ ತೋರಿಸುವಲ್ಲಿ ಭಾಗಿಯಾಗುತ್ತಿರುವುದು ಜನರ ನಿದ್ದೆಗೆಡಿಸುತ್ತಿದೆ.

English summary
Chain snatching cases increasing in Mysuru during election time. In March, there was a 9 cases registered. Single women are the target of thieves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X