ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆರೆ ಸಂತ್ರಸ್ತರಿಗಾಗಿ ಸಿ ಎಫ್ ಟಿ ಆರ್ ಐನಿಂದ ಆಹಾರ ಪೊಟ್ಟಣಗಳ ಪೂರೈಕೆ

|
Google Oneindia Kannada News

ಮೈಸೂರು, ಆಗಸ್ಟ್ 11 : ಮಳೆ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ರೆಡಿ ಟು ಈಟ್ ಆಹಾರ ಪದಾರ್ಥವನ್ನು ಸಿಎಫ್ ಟಿಆರ್ ಐ ಪೂರೈಕೆ ಮಾಡಿದೆ.

ಸಂತ್ರಸ್ತರಿಗೆ ಸಿಎಫ್ ಟಿಆರ್ ಐನಿಂದ ಆಹಾರ ಪೊಟ್ಟಣಗಳ ರವಾನೆಸಂತ್ರಸ್ತರಿಗೆ ಸಿಎಫ್ ಟಿಆರ್ ಐನಿಂದ ಆಹಾರ ಪೊಟ್ಟಣಗಳ ರವಾನೆ

ತೀವ್ರ ಪ್ರವಾಹಕ್ಕೆ ತುತ್ತಾಗುತ್ತಿರುವ ಜನರಿಗೆ ಆಹಾರ ಪದಾರ್ಥವನ್ನು ಕಳುಹಿಸುವಂತೆ ಈ ಹಿಂದೆ ಹಾಸನ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿದ ಮೈಸೂರಿನ ಸಿಎಫ್ ಟಿಆರ್ ಐ ಸಿಬ್ಬಂದಿ 4 ಸಾವಿರ ಚಪಾತಿ, 70 ಕೆ.ಜಿ. ಟೊಮೆಟೊ ಗೊಜ್ಜು, 100 ಕೆ.ಜಿ. ರಸ್ಕ್, 6 ಸಾವಿರ ಬಾಟಲಿ ನೀರು, 300 ಕೆ.ಜಿ. ಅವಲಕ್ಕಿ ಪ್ಯಾಕೆಟ್ ಗಳನ್ನು ಕಳುಹಿಸಲಾಗಿದ್ದು, ಇದನ್ನು ನೇರವಾಗಿ ಸೇವಿಸಬಹುದು.

CFTRI send ready to Food For Flood Victim

ಅಲ್ಲದೆ ಈ ಪದಾರ್ಥಗಳನ್ನು 6 ತಿಂಗಳು ಕಾಲ ಕೆಡದಂತೆ ಇಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಪ್ರವಾಹಕ್ಕೆ ತುತ್ತಾದ ಇತರ ಜಿಲ್ಲೆಗಳಿಂದಲೂ ಆಹಾರ ಪದಾರ್ಥಗಳು ಬೇಕು ಎಂದು ಜಿಲ್ಲಾಧಿಕಾರಿಗಳಿಂದ ಕೋರಿಕೆ ಬಂದರೆ ಅಗತ್ಯ ಆಹಾರ ಪೂರೈಸಲು ಸಿಎಫ್ ಟಿಆರ್ ಐ ತಂಡ ಸಿಧ್ಧವಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

English summary
Central Food Technological Research Institute in Mysuru sending ready-to-eat food materials. A note from the CFTRI said that, CFTRI Mysuru is sending relief food to Hassan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X