• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೆಸ್ಕಾಂಗೆ ಇನ್ನೂ ಪಾವತಿಯಾಗಿಲ್ಲ ಬರೋಬ್ಬರಿ 682 ಕೋಟಿ ಬಿಲ್

|

ಮೈಸೂರು, ಆಗಸ್ಟ್ 1: ಕಳೆದ ಕೆಲವು ದಿನಗಳಿಂದ ಕುಂಟುತ್ತಾ ಸಾಗಿರುವ ಸೆಸ್ಕಾಂ ತನ್ನ ವಿದ್ಯುತ್ ದರ ಏರಿಕೆಗೊಳಿಸಿದರೂ ವೆಚ್ಚದಲ್ಲಿ ಸಮತೋಲನ ಸಾಧಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಬೇರೇನೂ ಅಲ್ಲ, ಬಿಲ್ ಪಾವತಿಯಲ್ಲಿನ ವಿಳಂಬ. ಗ್ರಾಹಕರು ವಿದ್ಯುತ್ ಉಪಯೋಗಿಸಿಕೊಂಡು ಸಮರ್ಪಕವಾಗಿ ಬಿಲ್ ಪಾವತಿಸುತ್ತಿಲ್ಲವಾದ್ದರಿಂದ ಸಮಸ್ಯೆ ಉಂಟಾಗಿದೆ.

ಅಷ್ಟೇ ಅಲ್ಲ, ಸರಕಾರಿ ಕಚೇರಿ ಸಂಸ್ಥೆಗಳೇ ನೂರಾರು ಕೋಟಿ ಬಿಲ್ಲನ್ನು ಇನ್ನೂ ಬಾಕಿ ಉಳಿಸಿಕೊಂಡಿರುವುದು ಸೆಸ್ಕಾಂ ನಷ್ಟದಲ್ಲಿ ವಹಿವಾಟು ನಡೆಸಲು ಕಷ್ಟವಾಗಿದೆ.

24/7 ವಿದ್ಯುತ್ ಪೂರೈಕೆಗೆ ನೀಲಿನಕ್ಷೆ ತಯಾರು

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದಿಂದ ವಿದ್ಯುತ್ ಪಡೆಯುವ ಮೈಸೂರು ವಿಭಾಗದ ಐದು ಜಿಲ್ಲೆಗಳ ನಾನಾ ಇಲಾಖೆ, ಕೈಗಾರಿಕೆ, ಖಾಸಗಿ ಸಂಸ್ಥೆ ಹಾಗೂ ಗ್ರಾಹಕರು ಇದುವರೆಗೂ ಪಾವತಿ ಮಾಡಬೇಕಾದ ವಿದ್ಯುತ್ ದರ ಬರೋಬ್ಬರಿ 682 ಕೋಟಿ ರೂಪಾಯಿ. ಇದು ಮಾರ್ಚ್ 31ರ ಅಂತ್ಯಕ್ಕೆ ಸೀಮಿತಗೊಂಡ ಲೆಕ್ಕ.

ಕಳೆದ ಹಲವು ವರ್ಷಗಳಿಂದ ಸರಕಾರದ ವಿವಿಧ ಇಲಾಖೆಗಳು 313.31 ಕೋಟಿ, ಖಾಸಗಿ ಸಂಸ್ಥೆ ಹಾಗೂ ಗ್ರಾಹಕರು 369 ಕೋಟಿ, ಸೇರಿ ಒಟ್ಟಾರೆ 682 ಕೋಟಿ ಶುಲ್ಕ ಬಿಲ್ ಬಾಕಿ ಉಳಿಸಿಕೊಂಡಿವೆ.

ದಸರೆಗೂ ಮುನ್ನ ಮೈಸೂರಿನಲ್ಲಿ ಝಗಮಗಿಸಲಿವೆ 2,540 ಎಲ್ಇಡಿ ಬಲ್ಬ್ ಗಳು

"ರಾಜ್ಯ ಸರ್ಕಾರ 313 ಕೋಟಿ, ಕೇಂದ್ರ ಸರಕಾರ ವಿವಿಧ ಇಲಾಖೆಗಳಿಂದ 8 ಕೋಟಿ ವಿದ್ಯುತ್ ಶುಲ್ಕ ಪಾವತಿಸಬೇಕು. ಬಿಎಸ್ ಎನ್ ಎಲ್ ಟವರ್ ನಿಂದ ಮೂರು ತಿಂಗಳ ಬಾಕಿ 4 ಕೋಟಿ ವಸೂಲಾಗಬೇಕಿದೆ. ಈ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಪಾವತಿಸಬೇಕಾದ ಮೊತ್ತವನ್ನು ಪಟ್ಟಿ ಮಾಡಿದ್ದೇವೆ. ಹಣಕಾಸು ಸಭೆಯಲ್ಲಿ ಇದರ ಅನ್ವಯ ಚರ್ಚೆ ಸಹ ನಡೆಯಲಿದ್ದು, ಗ್ರಾಹಕರಿಗೆ ನೋಟಿಸ್ ನೀಡಲಾಗಿದೆ. ಸರಕಾರಿ ಇಲಾಖೆ ಹಾಗೂ ಖಾಸಗಿ ವಲಯಕ್ಕೂ ನೋಟಿಸ್ ನೀಡಲಾಗಿದೆ. ಪ್ರತಿ ತಿಂಗಳು ನೋಟಿಸ್ ನೀಡುತ್ತಿದ್ದರೂ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ" ಎನ್ನುತ್ತಾರೆ ಸೆಸ್ಕಾಂ ಆರ್ಥಿಕ ಅಧಿಕಾರಿಗಳಾದ ಶಿವಣ್ಣ.

ಇಲ್ಲಿ ನೀರಿದ್ದರೂ ವಿದ್ಯುತ್ ಇಲ್ಲದೆ ಒಣಗುತ್ತಿವೆ ಬೆಳೆಗಳು

ಪೊಲೀಸ್ ಕ್ವಾರ್ಟರ್ಸ್ ಗಳಲ್ಲಿ ವಾಸವಿರುವ ಅಧಿಕಾರಿಗಳು ಬೇರೆ ಕಡೆ ವರ್ಗಗೊಂಡು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಳ್ಳುತ್ತಾರೆ. ಅದೇ ಕ್ವಾರ್ಟರ್ಸ್ ಗೆ ಮತ್ತೆ ಇನ್ನೊಬ್ಬ ಅಧಿಕಾರಿ ಬಂದರೆ ಹಳೇ ಬಿಲ್ ಪಾವತಿಸಲು ಚಕಾರವೆತ್ತುತ್ತಾರೆ. ಇದೇ ನಮಗೆ ದೊಡ್ಡ ಸಮಸ್ಯೆ ಎನ್ನುತ್ತಾರೆ ಅಧಿಕಾರಿಗಳು. ಪಾವತಿಯಾಗಬೇಕಾದ ಹಣವನ್ನು ವಸೂಲಿ ಮಾಡಲು ಸೆಸ್ಕಾಂ ಅಧಿಕಾರಿಗಳು ಇನ್ನೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯ ಎದುರಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
cescom, which has been on the decline for the past few days, has been unable to balance costs despite rising electricity rates. This is due to the delay in bill payment. Cescom has not yet paid the Rs 682 crore bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more