ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊರಗೆ ಸ್ಪಾ, ಒಳಗೆ ವೇಶ್ಯಾವಾಟಿಕೆ; ಮೈಸೂರಿನಲ್ಲಿ ಮತ್ತೂ ಒಂದು ಪ್ರಕರಣ ಬೆಳಕಿಗೆ

|
Google Oneindia Kannada News

ಮೈಸೂರು, ಜುಲೈ 18: ಸಾಂಸ್ಕೃತಿಕ ನಗರಿ ಮೈಸೂರಿನ ಹೋಟೆಲ್‌ಗಳಲ್ಲಿ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಹೊಸ ಬೆಳವಣಿಗೆಯಾಗಿದ್ದು, ಮೇಲಿಂದ ಮೇಲೆ ಇಂಥ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ದುರಂತದ ಸಂಗತಿ.

ಮೈಸೂರಿನ ಖಾಸಗಿ ಬಸ್ ನಿಲ್ದಾಣ, ಸಯ್ಯಾಜಿರಾವ್ ರಸ್ತೆಗಳ ಬೀದಿ ಬದಿಗಳಲ್ಲೇ ರಾಜಾರೋಷವಾಗಿ ದಂಧೆ ನಡೆಯುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಮನೆಗಳಲ್ಲೇ ಯುವತಿಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆಗೊಮ್ಮೆ ಈಗೊಮ್ಮೆ ಪೊಲೀಸರು ಕದ ತಟ್ಟಿದಾಗ ಮಾತ್ರ ಪ್ರಕರಣಗಳು ಬೆಳಕಿಗೆ ಬರುತ್ತವೆ. ಉಳಿದಂತೆ ಎಲ್ಲವೂ ಗಪ್ ‌ಚುಪ್ ಆಗಿಯೇ ನಡೆಯುತ್ತಿರುತ್ತವೆ.

 ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ: ನಾಗಾಲ್ಯಾಂಡ್ ಮೂಲದ ಯುವತಿ ಬಂಧನ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ: ನಾಗಾಲ್ಯಾಂಡ್ ಮೂಲದ ಯುವತಿ ಬಂಧನ

ಈಗಾಗಲೇ ಯೋಗ ಕೇಂದ್ರಗಳ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸಿ ಸಿಕ್ಕಿ ಬಿದ್ದ ಪ್ರಕರಣಗಳು ಸಾಕಷ್ಟಿವೆ. ಇದೀಗ ದೊಡ್ಡ ಹೋಟೆಲ್‌ಗಳಲ್ಲಿ ರೂಂ ಪಡೆದು ಮೇಲ್ನೋಟಕ್ಕೆ ಸ್ಪಾ, ಮಸಾಜ್ ನಡೆಸುವಂತೆ ನಾಟಕವಾಡುತ್ತಾ ಒಳಗೊಳಗೆ ವೇಶ್ಯಾವಾಟಿಕೆ ನಡೆಸುತ್ತಿರುವ ಎರಡು ಪ್ರಕರಣವನ್ನು ಸಿಸಿಬಿ ಪೊಲೀಸರು ಒಂದೇ ವಾರದಲ್ಲಿ ಪತ್ತೆ ಹಚ್ಚಿದ್ದಾರೆ.

ccb raided two spas in mysuru which indulge in prostitution

ಕೆಲವು ದಿನಗಳ ಹಿಂದಷ್ಟೆ ನಗರದ ಬೆಂಗಳೂರು ರಸ್ತೆಯಲ್ಲಿರುವ ಹೋಟೆಲ್ ಸಮುದ್ರದಲ್ಲಿ ಮಸಾಜ್ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಂಡಿದ್ದರು. ಇದೀಗ ಮತ್ತೊಂದು ಹೋಟೆಲ್ ಮೇಲೆ ದಾಳಿ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದು, ಇಬ್ಬರು ಕೊಲ್ಕತ್ತಾ ಮೂಲದ ಮಹಿಳೆಯರನ್ನು ರಕ್ಷಿಸಿದ್ದಾರೆ.

ಸ್ಪಾ ಬೇಡ ಮಂಚಕ್ಕೆ ಬಾ ಎಂದು ಕರೆದ ಉದ್ಯಮಿ ಜೈಲಿಗೆ ಸ್ಪಾ ಬೇಡ ಮಂಚಕ್ಕೆ ಬಾ ಎಂದು ಕರೆದ ಉದ್ಯಮಿ ಜೈಲಿಗೆ

ನಗರದ ಗೋಕುಲಂನಲ್ಲಿರುವ ದಿ ಆಲೀವ್ ಶೈನ್ ಎಂಬ ಹೋಟೆಲ್ ನಲ್ಲಿ ಸ್ಪಾ ಹೆಸರಿನಲ್ಲಿ ಶ್ವೇತಾ ಮತ್ತು ರಘುನಂದನ್ ಎಂಬುವರು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಇವರಿಬ್ಬರು ಕಳೆದ ಕೆಲವು ವರ್ಷಗಳಿಂದ ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೇಶ್ಯಾವಾಟಿಕೆ ನಡೆಸಿ ಸಿಕ್ಕಿ ಬಿದ್ದಿದ್ದು, ಪ್ರಕರಣಗಳು ದಾಖಲಾಗಿವೆ. ಇದೀಗ ಇವರು ಹೋಟೆಲ್ ನಲ್ಲಿ ಸ್ಪಾ ನಡೆಸುವ ನೆಪದಲ್ಲಿ ಕೊಲ್ಕತ್ತಾ ಮೂಲದ ಇಬ್ಬರು ಯುವತಿಯರನ್ನಿಟ್ಟುಕೊಂಡು ದಂಧೆ ನಡೆಸುತ್ತಿದ್ದರು.

ಸ್ಪಾ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಮೇಲೆ ರೈಡ್ಸ್ಪಾ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಮೇಲೆ ರೈಡ್

ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮೈಸೂರು ನಗರ ಡಿ.ಸಿ.ಪಿ. ಮುತ್ತುರಾಜು ಅವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ. ಘಟಕದ ಎ.ಸಿ.ಪಿ. ಬಿ.ಆರ್.ಲಿಂಗಪ್ಪ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ವೇಶ್ಯಾವಾಟಿಕೆ ನಡೆಸುತ್ತಿದ್ದ ಶ್ವೇತಾ ಮತ್ತು ರಘುನಂದನ್ ಹಾಗೂ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಪ್ರದೀಪ್, ಸತೀಶ್, ಮೋಹನ್ ಕುಮಾರ್ ಅವರನ್ನು ಬಂಧಿಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ವೇಶ್ಯಾವಾಟಿಕೆಗೆ ಬಳಕೆಯಾಗಿದ್ದ 11, 720 ನಗದು ಹಣ ಹಾಗೂ 6 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

English summary
Ccb raided on two spas in mysuru. On july 16th also, ccb raided samudra hotel ayurvedic spa which indulge in prostitution. Now one more case found. This type of cases are increasing in mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X