ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ 'ಕಾವಾ' ವಿದ್ಯಾರ್ಥಿಗಳ ಚಿತ್ರಕಲೆ

By Manjunatha
|
Google Oneindia Kannada News

ಮೈಸೂರು, ಆಗಸ್ಟ್ 24: ಕುಕ್ಕರಹಳ್ಳಿ ಕೆರೆಯು ದೃಶ್ಯ ಕಲಾವಿದರಿಗೆ ಹೇಗೆ ಕಾಣಬಹುದು ಎಂಬ ಕುತೂಹಲದಿಂದ, ಆಗಸ್ಟ್‌ 26ನೇ ತಾರೀಖಿನಂದು "ಕುಕ್ಕರಹಳ್ಳಿ ಕೆರೆ 'ಕಾವಾ' ಕಣ್ಣಲ್ಲಿ" ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ.

"ವೈಲ್ಡ್ ಮೈಸೂರು" ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಕ್ಕೆ ಖ್ಯಾತ ಚಿತ್ರಕಾರ ಬಾದಲ್ ನಾರಾಯಣಸ್ವಾಮಿ ಆಗಿಸಲಿದ್ದಾರೆ. ಕಾರ್ಯಕ್ರಮವು ಕುಕ್ಕರಹಳ್ಳಿ ಕೆರೆ ಆವರಣದಲ್ಲಿಯೇ ನಡೆಯಲಿದೆ. ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ರಾಜಣ್ಣ ರವರು ಸಹಕರಿಸಿ ಕಾರ್ಯಕ್ರಮದ ಆಯೋಜನೆಗೆ ಅನುವು ಮಾಡಿಕೊಟ್ಟಿದ್ದಾರೆ.

ಮೈಸೂರು ವಿವಿಯಲ್ಲಿ ಚನ್ನಪಟ್ಟಣಗೊಂಬೆ ಪರಿಣಿತಿ ಕೇಂದ್ರಮೈಸೂರು ವಿವಿಯಲ್ಲಿ ಚನ್ನಪಟ್ಟಣಗೊಂಬೆ ಪರಿಣಿತಿ ಕೇಂದ್ರ

ಕಾರ್ಯಕ್ರಮವು ಭಾನುವಾರ (ಆಗಸ್ಟ್‌ 26) ಮುಂಜಾನೆ 7 ರಿಂದ 10 ಘಂಟೆಯವರೆಗೆ ನಡೆಯಲಿದ್ದು, ಕಾವಾ ಕಾಲೇಜಿನ ವಿದ್ಯಾರ್ಥಿಗಳು ಕುಕ್ಕರಹಳ್ಳಿ ಕೆರೆಯನ್ನು ತಮ್ಮ ದೃಷ್ಟಿಕೋನದಿಂದ ಕಂಡು ಕಲಾತ್ಮಕವಾಗಿ ಚಿತ್ರಿಸಲಿದ್ದಾರೆ.

CAVA college students organizing painting exhibition near Kukkarahalli lake

ಅದೇ ದಿನ ಸಂಜೆ 4ರಿಂದ 6ಘಂಟೆಯವರೆಗೆ ವಿದ್ಯಾರ್ಥಿಗಳು ಚಿತ್ರಿಸಿದ ಚಿತ್ರಕಲೆಯ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕುಕ್ಕರಹಳ್ಳಿ ಕೆರೆಯಲ್ಲಿ ವಿದ್ಯಾರ್ಥಿಗಳು ತಮ್ಮ ದೃಷ್ಠಿಕೋನದಿಂದ ನೋಡಿದ ಬಗೆ ಪ್ರದರ್ಶನದಲ್ಲಿ ಕಾಣಬಹುದು.

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಲೀನವಾದ ವಾಜಪೇಯಿ ಚಿತಾಭಸ್ಮ ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಲೀನವಾದ ವಾಜಪೇಯಿ ಚಿತಾಭಸ್ಮ

ಸಾಮಾನ್ಯ ಜನರಗೆ ಕುಕ್ಕರಹಳ್ಳಿ ಕೆರೆಯ ಮಹತ್ವದ ಬಗ್ಗೆ ಅರಿವು ಮೂಡಿಸಿ ಹಾಗೆಯೇ ಕಲಾವಿದರ ದೃಷ್ಟಿಕೋನದಲ್ಲಿ ಕೆರೆಯನ್ನು ಕಾಣುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

English summary
CAVA art college organizing painting exhibition bank of Kukkaraalli lake in Mysuru on August 26. Students of CAVA will draw paint about Kukkarahalli lake in the morning and in the evening best paintings were available to see.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X