ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾವೇರಿ ನೀರು ಹಂಚಿಕೆ; ರಾಜ್ಯ ಸರ್ಕಾರ ಬೆಂಬಲಿಸಿದ ದೇವೇಗೌಡ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 09; "ಕಾವೇರಿ ನೀರು ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ನಮ್ಮ ಪಕ್ಷ ಬೆಂಬಲ ನೀಡುತ್ತದೆ" ಎಂದು ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್. ಡಿ. ದೇವೇಗೌಡ ಹೇಳಿದರು.

ಗುರುವಾರ ಮೈಸೂರಿನಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ದೇವೇಗೌಡ, "ಮೈಸೂರಿನಲ್ಲಿ ರಾಜಕೀಯ ಮಾಡುವುದಕ್ಕೆ ಬಂದಿಲ್ಲ. ನನ್ನ ಮೇಲೆ ತಪ್ಪು ತಿಳಿಯಬೇಡಿ. ಆ ರೀತಿಯ ಸನ್ನಿವೇಶ ಬಂದರೆ ನಿಮ್ಮನ್ನು ನಾನೇ ಕರೆಯುತ್ತೇನೆ. ನಿಮ್ಮನ್ನೇ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತೇನೆ" ಎಂದರು.

ಕಾವೇರಿ ಕಾಲಿಂಗ್‌: ಜಗ್ಗಿ ವಾಸುದೇವ್‌ಗೆ ಕೋರ್ಟ್‌ನಿಂದ ಸಿಹಿ ಸುದ್ದಿ ಕಾವೇರಿ ಕಾಲಿಂಗ್‌: ಜಗ್ಗಿ ವಾಸುದೇವ್‌ಗೆ ಕೋರ್ಟ್‌ನಿಂದ ಸಿಹಿ ಸುದ್ದಿ

"ಕೆ. ಎಸ್. ರಂಗಪ್ಪ ಅವರೊಂದಿಗೆ ಪುಸ್ತಕ ಬಿಡುಗಡೆ ವಿಚಾರವಾಗಿ ಚರ್ಚೆ ಮಾಡಲು ಬಂದಿದ್ದೇನೆ. ಯಾರಿಂದ ಪುಸ್ತಕ ಬಿಡುಗಡೆ ಮಾಡಿಸಬೇಕು? ಎಂಬುವುದರ ಬಗ್ಗೆ ಚರ್ಚೆ ಮಾಡಲು ಬಂದಿದ್ದೇನೆ. ಇದರ ಹೊರತು ಯಾವುದೇ ರಾಜಕೀಯ ಉದ್ದೇಶದಿಂದ ಮೈಸೂರಿಗೆ ಬಂದಿಲ್ಲ" ಎಂದು ತಿಳಿಸಿದರು.

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸೂಚಿಸಿದ ಪ್ರಾಧಿಕಾರತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸೂಚಿಸಿದ ಪ್ರಾಧಿಕಾರ

Cauvery Water Sharing Issue Will Support Karnataka Govt Says Deve Gowda

"ಮೈಸೂರು ಭೇಟಿಗೆ ಯಾವುದೇ ವಿಶೇಷತೆ ಇಲ್ಲ. ವೈಯಕ್ತಿಕ ಕಾರಣಕ್ಕಾಗಿ ಬಂದಿದ್ದೇನೆ ಅಷ್ಟೇ ಹೊರತು, ಬೇರೆ ಯಾವ ರಾಜಕೀಯ ವಿಚಾರ ಮಾತನಾಡುವುದಕ್ಕೂ ನಾನು ಬಂದಿಲ್ಲ" ಎಂದು ದೇವೇಗೌಡರು ಸ್ಪಷ್ಟಪಡಿಸಿದರು.

ತಮಿಳುನಾಡಿಗೆ ನೀರು ಬಿಡಲು ಸೂಚನೆ; ಕೆಆರ್‌ಎಸ್ ನೀರಿನ ಮಟ್ಟ ತಮಿಳುನಾಡಿಗೆ ನೀರು ಬಿಡಲು ಸೂಚನೆ; ಕೆಆರ್‌ಎಸ್ ನೀರಿನ ಮಟ್ಟ

ಇನ್ನೂ ರಾಜೀನಾಮೆ ಕೊಟ್ಟಿಲ್ಲ; ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ‌ಕಾಂಗ್ರೆಸ್ ಸೇರುವ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿದ ಎಚ್. ಡಿ. ದೇವೇಗೌಡ, "ಜಿ. ಟಿ. ದೇವೇಗೌಡ ಇನ್ನೂ ಪಕ್ಷಕ್ಕೆ ರಾಜೀನಾಮೆ ಕೊಟ್ಟಿಲ್ಲ. ಪಕ್ಷ ಬಿಟ್ಟಾಗ ನಾನು ಅವರ ಬಗ್ಗೆ ಮಾತನಾಡುತ್ತೇನೆ" ಎಂದರು.

"ಸದ್ಯಕ್ಕೆ ಜಿ. ಟಿ. ದೇವೇಗೌಡ ಇನ್ನೂ ಜೆಡಿಎಸ್‌ನಲ್ಲೇ ಇದ್ದಾರೆ. ಅವರನ್ನು ಉಳಿಸಿಕೊಳ್ಳುವುದು ಮುಂದಿನ ವಿಚಾರ. ಸದ್ಯಕ್ಕೆ ಅವರು ಇನ್ನೂ ಜೆಡಿಎಸ್‌ನಲ್ಲೇ ಇದ್ದಾರೆ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

"ಅಲ್ಲದೇ ಸಿದ್ದರಾಮಯ್ಯ, ಯಡಿಯೂರಪ್ಪ ಮನೆಗೂ ಹೋಗಿದ್ದಾರೆ. ಕ್ಷೇತ್ರದ ವಿಚಾರವಾಗಿ ಚರ್ಚಿಸಲು ಹೋಗಿದ್ದಾರೆ. ಅದಕ್ಕೆ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ" ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದರು.

ಮೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, "ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 7 ರಲ್ಲಿ 4 ಸ್ಥಾನ ಗೆದ್ದಿದ್ದೇವೆ. ಎರಡು ಸ್ಥಾನ ಮಾರ್ಜಿನ್ ನಲ್ಲಿ ಸೋತಿದ್ದೇವೆ. ಇದು ಎಚ್. ಡಿ. ಕುಮಾರಸ್ವಾಮಿ ಅವರ ಶ್ರಮದ ಫಲ" ಎಂದರು.

"ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಶಕ್ತಿ ಏನು ಎಂಬುವವರಿಗೆ ಉತ್ತರ ಸಿಕ್ಕಿದೆ. ಕಲಬುರಗಿ ಪಾಲಿಕೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಮಾತನಾಡಿದ್ದೇನೆ. ಅವರ ಪಕ್ಷದ ನಾಯಕರ ಜತೆ ಚರ್ಚಿಸುವಂತೆ ತಿಳಿಸಿದ್ದೇನೆ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಮಿಳುನಾಡಿಗೆ ನೀರು ಹರಿಸಿ; ಆಗಸ್ಟ್ 31ರಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು. ತಮಿಳುನಾಡಿಗೆ ಆಗಸ್ಟ್ 31ರ ತನಕ ಹರಿಸಬೇಕಾದ ನೀರಿನ ಪೈಕಿ ಸದ್ಯಕ್ಕೆ 7 ಟಿಎಂಸಿ ಅಡಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಪ್ರಾಧಿಕಾರ ಸೂಚನೆ ನೀಡಿತ್ತು.

ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ಅಂತಿಮ ತೀರ್ಪಿನ ಅನ್ವಯ ಕರ್ನಾಟಕ ಸರ್ಕಾರ ಸಾಮಾನ್ಯ ವರ್ಷದಲ್ಲಿ ಜೂನ್‌ನಿಂದ ಆಗಸ್ಟ್ ತನಕ 86.83 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಬೇಕು.

ಈ ವರ್ಷ ಕಾವೇರಿ ಕೊಳ್ಳದಲ್ಲಿ ಮಳೆ ಕಡಿಮೆಯಾಗಿದೆ. ಆದ್ದರಿಂದ ಕೆಆರ್‌ಎಸ್ ಜಲಾಶಯ ಭರ್ತಿಯಾಗಿಲ್ಲ. ಆದ್ದರಿಂದ ಕರ್ನಾಟಕ ಆಗಸ್ಟ್ 30ರ ತನಕ 57.04 ಟಿಎಂಸಿ ಅಡಿ ನೀರನ್ನು ಹರಿಸಿದೆ. ಬಾಕಿ ನೀರನ್ನು ತಮಿಳುನಾಡಿಗೆ ಹರಿಸುತ್ತೇವೆ ಎಂದು ಕರ್ನಾಟಕ ಪ್ರಾಧಿಕಾರಕ್ಕೆ ತಿಳಿಸಿದೆ.

English summary
Will support Karnataka government in the issue of Cauvery water sharing issue with Tamil Nadu said former prime minister H. D. Deve Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X