ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಅಪ್ರಾಪ್ತೆಗೆ ಬ್ಲಾಕ್‌ ಮೇಲ್‌; ಪ್ರಕರಣ ದಾಖಲು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 25: ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಖಾಸಗಿ ಕ್ಷಣದ ಫೋಟೊ ತೆಗೆದುಕೊಂಡಿದ್ದಲ್ಲದೇ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೊ ಹರಿಬಿಡುವುದಾಗಿ ಬ್ಲಾಕ್‌ ಮೇಲ್‌ ಮಾಡುತ್ತಿರುವನೆಂಬ ಆರೋಪದಲ್ಲಿ ಯುವಕನೊಬ್ಬನ ವಿರುದ್ಧ ದೂರು ದಾಖಲಾಗಿದೆ.

ಅಪ್ರಾಪ್ತೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಮೈಸೂರಿನ ನಿವಾಸಿ ಚಂದ್ರ ಎಂಬಾತ ಅಪ್ರಾಪ್ತೆಯನ್ನು ಪ್ರೀತಿಸುತ್ತೇನೆ, ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ತನ್ನ ಬೈಕಿನಲ್ಲಿ ಬೆಳಗೊಳದ ಬಳಿ ಇರುವ ಬಂಬೂಮಠದ ಫಾಲ್ಸ್ ಗೆ ಕರೆದೊಯ್ದಿದ್ದಾನೆ. ಆಕೆ ಪ್ರತಿರೋಧಿಸಿದರೂ ಆಕೆಯ ಜೊತೆ ಅಶ್ಲೀಲವಾಗಿ ವರ್ತಿಸಿ ಫೋಟೋ ತೆಗೆದುಕೊಂಡಿದ್ದಾನೆ.

ಅಪ್ರಾಪ್ತೆ ಮೇಲೆ ಅತ್ಯಾಚಾರ: ಅಶ್ಲೀಲ ಫೋಟೊ ಹರಿಬಿಟ್ಟ ಆರೋಪಿಗಳು ಅಪ್ರಾಪ್ತೆ ಮೇಲೆ ಅತ್ಯಾಚಾರ: ಅಶ್ಲೀಲ ಫೋಟೊ ಹರಿಬಿಟ್ಟ ಆರೋಪಿಗಳು

Case Registered Against Young Man For Blackmailing Girl In Mysuru

ನಂತರ ಪದೇ ಪದೇ ಹೊರಗಡೆ ತಿರುಗಾಡಲು ಕರೆಯುತ್ತಿದ್ದು, ಆಕೆ ಹೋಗಲು ಒಪ್ಪದಿದ್ದಾಗ ಫೋಟೋ ತೋರಿಸಿ ವ್ಯಾಟ್ಸ್ ಅಪ್, ಫೇಸ್ ಬುಕ್ ನಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಆಕೆಯ ಮನೆಯವರು ಹೋಗಿ ವಿಚಾರ ಮಾಡಿದ್ದಕ್ಕೆ, ಆಕೆಯನ್ನು ಅಪಹರಿಸಿಕೊಂಡು ಹೋಗಿ ಮದುವೆಯಾಗುತ್ತೇನೆ ಎಂದು ಬೆದರಿಸುತ್ತಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಂಡಿಮೊಹಲ್ಲಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

English summary
A case has been registered against young man for blackmailing a girl, uploading her photo in social media in mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X