ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾರ್ವಜನಿಕ ರಸ್ತೆಗೆ ವಿಮೆ ಮಾಡಿಸಿದ ಮೈಸೂರಿನ ಕ್ಯಾಬ್ ಚಾಲಕ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 3: ವಾಹನಗಳಿಗೆ, ಮನೆಯ ಫ್ರಿಜ್, ಟಿ.ವಿ, ಇತ್ಯಾದಿ ಗೃಹ ಬಳಕೆಯ ವಸ್ತುಗಳಿಗೆ ಮತ್ತು ಮನುಷ್ಯರಿಗೆ ವಿಮೆ ಮಾಡಿಸುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಕ್ಯಾಬ್ ಚಾಲಕ ತಮ್ಮ ಮನೆಯ ಮುಂದಿನ ಸಾರ್ವಜನಿಕ ರಸ್ತೆಗೆ ವಿಮೆ ಮಾಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Recommended Video

China warns UK ,ಬ್ರಿಟಿಷರಿಗೂ ಹಾಂಗ್ ಕಾಂಗ್ ವಿಚಾರದಲ್ಲಿ ಎಚ್ಚರಿಕೆ ಕೊಟ್ಟ ಚೀನಾ | Oneindia Kannada

ನಗರದ ಸಿ.ಎಫ್‌.ಟಿ.ಆರ್.ಐ ಬಡಾವಣೆಯ ವಾಸು ಎಂಬ ವ್ಯಕ್ತಿ ತಮ್ಮ ಮನೆ ಮುಂದಿನ ರಸ್ತೆಗೆ 3.23 ಲಕ್ಷ ಮೌಲ್ಯದ ವಿಮೆ ಮಾಡಿಸಿದ್ದು, ಅದಕ್ಕೆ ವರ್ಷಕ್ಕೆ ತಗುಲುವ ವಾರ್ಷಿಕ ಪ್ರೀಮಿಯಂ ಹಣ 889 ರೂಪಾಯಿಗಳನ್ನು ವಿಮಾ ಕಂಪೆನಿಗೆ ಪಾವತಿಸಿದ್ದಾರೆ. ಈ ಕುರಿತ ಇನ್ನಷ್ಟು ವಿವರ ಮುಂದಿದೆ...

"ರಸ್ತೆಗೆ ಅಪಾಯವಾದರೆ ನಮಗೇ ತೊಂದರೆ"

ಈ‌ ವಿಮೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ವಾಸು, ನೈಸರ್ಗಿಕವಾಗಿ ಹಾಗೂ ಕಿಡಿಗೇಡಿಗಳಿಂದ ರಸ್ತೆಗೆ ಅಪಾಯವಾದರೆ ನಮಗೂ ತೊಂದರೆ, ಇದನ್ನು ಪಾಲಿಕೆಯವರಿಗೆ ಹೇಳಿದರೆ ರಿಪೇರಿಗೇ ತಿಂಗಳಾನುಗಟ್ಟಲೆ ಸಮಯ ತೆಗೆದುಕೊಳ್ಳುತ್ತಾರೆ. ಆದ್ದರಿಂದ ನಾನೇ ಸ್ವಂತ ದುಡ್ಡಿನಲ್ಲಿ ಓರಿಯಂಟಲ್ ವಿಮಾ ಕಂಪನಿಯಲ್ಲಿ ವಿಮೆ ಮಾಡಿಸಿದೆ ಎಂದು ಹೇಳಿದ್ದಾರೆ.

ಕೆಲಸ ಕಳೆದುಕೊಂಡ ಎಚ್-1 ಬಿ ಉದ್ಯೋಗಿಗಳಿಗೆ ಹೊರೆಯಾದ 'ಆರೋಗ್ಯ ವಿಮೆ'ಕೆಲಸ ಕಳೆದುಕೊಂಡ ಎಚ್-1 ಬಿ ಉದ್ಯೋಗಿಗಳಿಗೆ ಹೊರೆಯಾದ 'ಆರೋಗ್ಯ ವಿಮೆ'

 ಪರಿಚಿತರಿಂದ ಬಂದ ಐಡಿಯಾ

ಪರಿಚಿತರಿಂದ ಬಂದ ಐಡಿಯಾ

ಇಂಥ ಒಂದು ಆಲೋಚನೆ ವಾಸು ಅವರಿಗೆ ಬಂದಿದ್ದು ತಮ್ಮ ಪರಿಚಿತರೊಬ್ಬರಿಂದ. ಉತ್ತರ ಕರ್ನಾಟಕದ ಪರಿಚಿತ ವ್ಯಕ್ತಿಯೊಬ್ಬರು ತಮ್ಮ ಮನೆಯ ಮುಂದಿನ ರಸ್ತೆಗೆ ವಿಮೆ ಮಾಡಿಸಿದ ವಿಚಾರ ತಿಳಿದು, ಅವರಿಂದ ಮಾಹಿತಿ ಸಂಗ್ರಹಿಸಿ, ಪಾಲಿಕೆ ಅಧಿಕಾರಿಗಳಿಂದ ಅನುಮತಿ ಪಡೆದು ವಿಮೆ ಮಾಡಿಸಿದೆ ಎನ್ನುತ್ತಾರೆ ಕ್ಯಾಬ್ ಚಾಲಕ ವಾಸು.

 ಪಾಲಿಕೆ ಆಯುಕ್ತರಿಂದ ಮೆಚ್ಚುಗೆ

ಪಾಲಿಕೆ ಆಯುಕ್ತರಿಂದ ಮೆಚ್ಚುಗೆ

ಸಾಮಾನ್ಯ ನಾಗರಿಕರಾಗಿರುವ ವಾಸು ಅವರ ಈ ಕಾರ್ಯಕ್ಕೆ, ಅವರ ಕಾಳಜಿಗೆ ಪಾಲಿಕೆ ಆಯುಕ್ತ ಗುರುದತ್‌ ಹೆಗಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೇ ಮೊದಲ ಬಾರಿಗೆ ಸಾರ್ವಜನಿಕರೊಬ್ಬರು ರಸ್ತೆಗೆ ವಿಮೆ ಮಾಡಿಸಿದ್ದಾರೆ. ಇದು ಒಳ್ಳೆಯ ಕಾರ್ಯ. ಯಾರಾದರೂ ಆಸಕ್ತಿ ವಹಿಸಿದರೆ ಇನ್ನಷ್ಟು ರಸ್ತೆಗಳಿಗೆ ವಿಮೆ ಮಾಡಿಸಲು ಅನುಮತಿ ನೀಡಲಾಗುವುದು ಎಂದರು.

 ಸಾರ್ವಜನಿಕರಿಂದಲೂ ಮೆಚ್ಚುಗೆ

ಸಾರ್ವಜನಿಕರಿಂದಲೂ ಮೆಚ್ಚುಗೆ

ರಸ್ತೆಗೆ ವಿಮೆ ಮಾಡಿಸಿರುವ ವಾಸು ಅವರ ವಿಚಾರ ತಿಳಿದು ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾಸು ಅವರ ಈ ಮೇಲ್ಪಂಕಿಯಿಂದಾಗಿ ಇತರರೂ ಪ್ರೇರೇಪಣೆ ಪಡೆದು ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ವಿಮೆ ಮಾಡಿಸುವ ಸಾಧ್ಯತೆಯೂ ಹೆಚ್ಚಿದೆ.

English summary
Vasu, a resident of CFTRI layout in Mysuru city, has insured for public road worth Rs 3.23 lakh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X