ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೌರತ್ವ ಪ್ರತಿಭಟನೆಯಿಂದ ಕಳೆಗುಂದಿದ ಪ್ರವಾಸೋದ್ಯಮ

By Coovercolly Indresh
|
Google Oneindia Kannada News

ಮೈಸೂರು, ಡಿಸೆಂಬರ್ 26: ಸಾಂಸ್ಕೃತಿಕ ನಗರಿ ಮೈಸೂರು ರಾಜ್ಯದಲ್ಲಿ ಅತ್ಯಂತ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ನಗರ. ಪ್ರಾಣಿ ಸಂಗ್ರಹಾಲಯ, ಅರಮನೆ ಸೇರಿದಂತೆ ಅನೇಕ ಪ್ರವಾಸಿ ತಾಣಗಳು ಇಲ್ಲಿದ್ದು, ಇವುಗಳನ್ನೆಲ್ಲ ಕಣ್ತುಂಬಿಕೊಳ್ಳಲು ಡಿಸೆಂಬರ್ ನಲ್ಲಿ ರಾಜ್ಯ, ಹೊರ ರಾಜ್ಯ, ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ.

ಆದರೆ ಈ ಬಾರಿ ಇಲ್ಲಿ ಪ್ರವಾಸೋದ್ಯಮ ಕಳೆಗುಂದಿದೆ. ಆರ್ಥಿಕ ಹಿಂಜರಿತದ ನಡುವೆಯೂ ಅಲ್ಪ ಸ್ವಲ್ಪ ಚೇತರಿಕೆ ಕಾಣುತಿದ್ದ ಪ್ರವಾಸೋದ್ಯಮ ಕಳೆದ ಎರಡು ವಾರಗಳಿಂದ ಮಕಾಡೆ ಮಲಗಿದೆ.

 ಶೇ 20ರಿಂದ 40ರಷ್ಟು ಪ್ರವಾಸಿಗರ ಕುಸಿತ

ಶೇ 20ರಿಂದ 40ರಷ್ಟು ಪ್ರವಾಸಿಗರ ಕುಸಿತ

ದೇಶದಲ್ಲಿ ಎನ್​ಆರ್​ಸಿ ಹಾಗೂ ಸಿಎಎ ವಿರೋಧಿ ಪ್ರತಿಭಟನೆಗಳು ಆರಂಭವಾದ ಬಳಿಕ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ರಾಜ್ಯದಲ್ಲೂ ಸಿಎಎ ಮತ್ತು ಎನ್​ಆರ್​ಸಿ ವಿರೋಧಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಪ್ರವಾಸಿ ತಾಣ ಮೈಸೂರಿಗೆ ಭೇಟಿ ನೀಡಲು ಪ್ರವಾಸಿಗರೂ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಪ್ರತಿಭಟನೆಗಳಿಂದ ಶೇ 20ರಿಂದ 40ರಷ್ಟು ಪ್ರವಾಸಿಗರು ಭೇಟಿ ನೀಡಿಲ್ಲ ಎನ್ನುತ್ತಿದೆ ಮೈಸೂರು ಹೋಟೆಲ್ ಅಸೋಸಿಯೇಷನ್.

ವಿಡಿಯೋ: ಚಿನ್ನದ ಪದಕ ಪಡೆದು ವೇದಿಕೆ ಮೇಲೆಯೇ ಸಿಎಎ ಪ್ರತಿ ಹರಿದ ಯುವತಿವಿಡಿಯೋ: ಚಿನ್ನದ ಪದಕ ಪಡೆದು ವೇದಿಕೆ ಮೇಲೆಯೇ ಸಿಎಎ ಪ್ರತಿ ಹರಿದ ಯುವತಿ

 ಖಾಲಿಯಾಗೇ ಉಳಿದಿರುವ ರೆಸಾರ್ಟ್ ಗಳು

ಖಾಲಿಯಾಗೇ ಉಳಿದಿರುವ ರೆಸಾರ್ಟ್ ಗಳು

ಡಿಸೆಂಬರ್ ನಲ್ಲಿ ಪ್ರತಿ ವರ್ಷ ಹೊಸ ವರ್ಷಕ್ಕೆ ಹತ್ತು ದಿನಗಳ ಮುಂಚೆಯೇ ಹೋಟೆಲ್ ರೆಸಾರ್ಟ್ ಗಳು ತುಂಬಿ ತುಳುಕುತ್ತಿದ್ದವು. ಆದರೆ ಈ ಬಾರಿ ಹೊಸ ವರ್ಷಕ್ಕೆ ನಾಲ್ಕೇ ದಿನಗಳು ಬಾಕಿ ಇದ್ದು ರೆಸಾರ್ಟ್​​ಗಳು, ಹೋಟೆಲ್​​ಗಳು ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ. ಬುಕ್ಕಿಂಗ್ ಮಾಡಿರುವ ಹೋಟೆಲ್​​ಗಳಲ್ಲೂ ಪ್ರವಾಸಿಗರು ಬುಕ್ಕಿಂಗ್ ಕ್ಯಾನ್ಸಲ್ ಮಾಡಿಸುತ್ತಿದ್ದಾರೆ ಎನ್ನಲಾಗಿದೆ. ಪ್ರತಿಭಟನೆಗಳಾಗಿ ಗಲಾಟೆಗಳಾದರೆ ತಾವೆಲ್ಲಿ ಅರ್ಧದಲ್ಲಿ ಸಿಲುಕಿ ಪಡಬಾರದ ಪಾಡು ಪಡಬೇಕೇನೋ ಎಂಬ ಭಯದಿಂದ ಪ್ರವಾಸಿಗರು ಮೈಸೂರು ಪ್ರವಾಸವನ್ನೇ ರದ್ದು ಮಾಡುತ್ತಿದ್ದಾರೆ. ಇದರಿಂದ ಮೈಸೂರಿಗೆ ಬರುವ ಪ್ರವಾಸಿಗರಲ್ಲಿ 40%ರಷ್ಟು ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ನಾರಾಯಣ್ ಗೌಡ.

 ಚಾಮುಂಡಿಬೆಟ್ಟದಲ್ಲೂ ಜನ ಕಡಿಮೆ

ಚಾಮುಂಡಿಬೆಟ್ಟದಲ್ಲೂ ಜನ ಕಡಿಮೆ

ಡಿಸೆಂಬರ್‌ ಬಂತೆಂದರೆ ಸಾಕು ಅಯ್ಯಪ್ಪ ಮಾಲಾಧಾರಿಗಳು, ಪ್ರವಾಸಿಗರಿಂದ ಚಾಮುಂಡಿ ಬೆಟ್ಟ ಗಿಜಿಗುಡುತ್ತಿತ್ತು. ಆದರೆ ಈ ವರ್ಷದ ಡಿಸೆಂಬರ್‌ ನಲ್ಲಿ ಮಾತ್ರ ಬೆರಳೆಣಿಕೆಯ ಪ್ರವಾಸಿಗರು ಕಾಣಿಸಿಕೊಂಡಿದ್ದಾರೆ. ದೇಶಾದ್ಯಾಂತ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆಗಳ ಕಾವು ಪ್ರವಾಸೋದ್ಯಮದ ಮೇಲೆ ತಟ್ಟಿದೆ. ಅದಕ್ಕೆ ಸ್ಪಷ್ಟ ಉದಾಹರಣೆ ಮೈಸೂರಿನ ಹೋಟೆಲ್‌ ಬುಕ್ಕಿಂಗ್ ಡಿಟೈಲ್ಸ್. ಜೊತೆಗೆ ಈ ಬಾರಿ ಬಂದಿದ್ದ ಪ್ರವಾಸಿಗರು ತರಾತುರಿಯಲ್ಲಿ ವಾಪಸ್ಸಾಗುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆಲ್ಲಾ ಎನ್‌ಆರ್‌ಸಿ ಹಾಗೂ ಸಿಎಎ ಕಾಯ್ದೆಯ ಪ್ರತಿಭಟನೆಗಳು ಕಾರಣ ಎನ್ನಲಾಗುತ್ತಿದೆ.

ಅವರನ್ನು ಓಲೈಸಲು ಹೋಗಿ, ಇವರ ವಿರೋಧವನ್ನು ಪಕ್ಷ ಕಟ್ಟಿಕೊಳ್ಳುತ್ತಿದೆಯೇ? ಏನಿದು ಹಿರಿಯ ಕಾಂಗ್ರೆಸ್ಸಿಗರ ಭಯಅವರನ್ನು ಓಲೈಸಲು ಹೋಗಿ, ಇವರ ವಿರೋಧವನ್ನು ಪಕ್ಷ ಕಟ್ಟಿಕೊಳ್ಳುತ್ತಿದೆಯೇ? ಏನಿದು ಹಿರಿಯ ಕಾಂಗ್ರೆಸ್ಸಿಗರ ಭಯ

 ದಕ್ಷಿಣ ಭಾರತದ ಮೇಲೂ ಪ್ರತಿಭಟನೆ ಕಾವು

ದಕ್ಷಿಣ ಭಾರತದ ಮೇಲೂ ಪ್ರತಿಭಟನೆ ಕಾವು

ಉತ್ತರ ಭಾರತದಲ್ಲಿ ಇದ್ದ ಪ್ರತಿಭಟನೆಯ ಕಾವು ದಕ್ಷಿಣ ಭಾರತಕ್ಕೂ ಕಾಲಿಟ್ಟಿದೆ. ಅದರಲ್ಲೂ ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು ದೇಶಾದ್ಯಾಂತ ಸುದ್ದಿಯಾಗಿದ್ದು, ಇಂತಹ ಗಲಾಟೆಗಳು ಮೈಸೂರಿನಲ್ಲಿಯೂ ನಡೆಯಬಹುದೆಂದು ಪ್ರವಾಸಿಗರು ಪ್ರವಾಸವನ್ನೇ ರದ್ದು ಮಾಡುತ್ತಿದ್ದಾರಂತೆ. ಇದರಿಂದ ಪ್ರವಾಸೋದ್ಯಮವನ್ನೇ ನಂಬಿದ್ದ ಹೋಟೆಲ್, ಟ್ರಾವೆಲ್, ಶಾಪಿಂಗ್‌ ಮಾಲ್, ಲಾಡ್ಜಿಂಜ್ ಹೋಟೆಲ್‌, ರೆಸಾರ್ಟ್​​​ಗಳು ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ.

English summary
The tourism in mysuru has badly effected by the citizenship amendment act protest
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X