ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುತ್ತೂರು ಕ್ಷೇತ್ರದ ಸರಳ ಮದುವೆ ಮಾದರಿ ಕಾರ್ಯ : ಸಿಎಂ ಕುಮಾರಸ್ವಾಮಿ

|
Google Oneindia Kannada News

ಮೈಸೂರು, ಫೆಬ್ರವರಿ 2 : ಸುತ್ತೂರು ಜಾತ್ರಾ ಮಹೋತ್ಸದ ಅಂಗವಾಗಿ ನಡೆದ ಸಾಮೂಹಿಕ ವಿವಾಹಕ್ಕೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಶನಿವಾರ ಚಾಲನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಂದಿನ ಬಜೆಟ್ ಹಿನ್ನೆಲೆ ನಾನು ನಿನ್ನೆಯ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಇಂದು ಈ ಕಾರ್ಯಕ್ರಮಕ್ಕೆ ಬರಲೇಬೇಕೆಂದು ಸ್ವಾಮೀಜಿಗಳು ಒತ್ತಾಯಿಸಿದರು. ಈ ಸುಸಂದರ್ಭದಲ್ಲಿ ನಾನು ಆಗಮಿಸಿರುವುದು ನನ್ನ ಸೌಭಾಗ್ಯವೇ ಸರಿ. ಸಾಮೂಹಿಕ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ಜೋಡಿಗಳಿಗೆ ಶುಭವಾಗಲಿ. ತಾಯಿ ಚಾಮುಂಡೇಶ್ವರಿ ನಿಮಗೆ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.

ಮಂಡ್ಯದಿಂದ ನಿಖಿಲ್ ಸ್ಪರ್ಧೆ?, ಮೌನ ಮುರಿದ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಿಂದ ನಿಖಿಲ್ ಸ್ಪರ್ಧೆ?, ಮೌನ ಮುರಿದ ಎಚ್.ಡಿ.ಕುಮಾರಸ್ವಾಮಿ

ಸುತ್ತೂರು ಕ್ಷೇತ್ರ ಹಾಗೂ ದೇವೇಗೌಡರ ಕುಟುಂಬದ ನಡುವೆ ಅವಿನಾಭಾವ ಸಂಬಂಧವಿದೆ. ಸರ್ಕಾರ ಮಾಡದೇ ಇರುವ ವಿಶೇಷ ಕಾರ್ಯಕ್ರಮವನ್ನು ಸುತ್ತೂರು ಕ್ಷೇತ್ರ ಮಾಡುತ್ತಿದೆ.

C M Kumaraswamy inaugurates a special mass wedding program in suttur

ಗ್ರಾಮೀಣ ಪ್ರದೇಶದ ರೈತರಿಗೆ ಕೃಷಿ ಮೇಳ ಆಯೋಜಿಸಿದೆ. ಗ್ರಾಮೀಣ ಸೊಗಡಿಗೆ ಜಾತ್ರೆಯಲ್ಲಿ ಅನಾವರಣಗೊಂಡಿದೆ. ಪ್ರಸ್ತುತ ಕಾಲಕ್ಕೆ ಈ ರೀತಿಯ ಸರಳ ಮದುವೆ ಅವಶ್ಯಕತೆಯಿದೆ.

ಕೇಂದ್ರದ ಬಜೆಟ್ ಬಾಂಬೆ ಮಿಠಾಯಿ ಇದ್ದಂತೆ : ಎಚ್.ಡಿ.ಕುಮಾರಸ್ವಾಮಿ ಕೇಂದ್ರದ ಬಜೆಟ್ ಬಾಂಬೆ ಮಿಠಾಯಿ ಇದ್ದಂತೆ : ಎಚ್.ಡಿ.ಕುಮಾರಸ್ವಾಮಿ

ವಿಶ್ವಕ್ಕೆ ಮಾದರಿಯಾಗುವ ರೀತಿ ಶಿಕ್ಷಣ ನೀಡುತ್ತಿದೆ ಸುತ್ತೂರು ಕ್ಷೇತ್ರ. ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಎಂದರೆ, ಇದು ನನ್ನ ಪೂರ್ವ ಜನ್ಮದ ಪುಣ್ಯ. ಅಮ್ಮನ ಸಮನಾದ ಸುಂದರಮೂರ್ತಿ ಅವರು ಇಲ್ಲಿಯೇ ಇದ್ದರೆ ಮಹಿಳೆ ಹೇಗಿರಬೇಕೆಂಬುದು ಎಂಬ ಸರಳತೆ ತೋರಿಸಿಕೊಟ್ಟವರು ಸುಧಾಮೂರ್ತಿ. ಸುಧಾ ಮೂರ್ತಿಯವರು ಹಲವಾರು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಪ್ರಾರ್ಥಿಸಿದರು.

ಇದೇ ವೇಳೆ ಪರಿಶಿಷ್ಟ ಪಂಗಡದ 16, ಪರಿಶಿಷ್ಟ ಜಾತಿಯ 119, ಹಿಂದುಳಿದ ವರ್ಗದ 23, ವೀರಶೈವ ಸಮಾಜದ 18, ಅಂಗವಿಕಲರು 4, ಅಂತರ್ಜಾತಿ 8, ಒಟ್ಟು 183 ಕ್ಕೂ ಅಧಿಕ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

English summary
CM H D Kumaraswamy inaugurates mass marriage programme in Suttur. He said that, suttur shree doing good social works.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X