ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಅಪ್ಪನ ಪರ ಬ್ಯಾಟಿಂಗ್ ಮಾಡಿದ ವಿಜಯೇಂದ್ರ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 09: "ವಿಶ್ವನಾಥ್ ಹಾಗೂ ಎಂಟಿಬಿಗೆ ಯಡಿಯೂರಪ್ಪ ಅವರು ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ. ಅವರು ಯಾರಿಗೂ ಕೊಟ್ಟ ಮಾತು ತಪ್ಲಿಲ್ಲ. ಇನ್ನು 6 ಸ್ಥಾನ ಬಾಕಿ ಇದೆ. ಅದರಲ್ಲಿ ಮೈಸೂರು ಭಾಗಕ್ಕೆ ಅವಕಾಶ ನೀಡಲಾಗುತ್ತದೆ" ಎಂದು ತಂದೆ ಪರ ಮಾತನಾಡಿದರು ಬಿ.ವೈ.ವಿಜಯೇಂದ್ರ.

ಮೈಸೂರಿನಲ್ಲಿ ಮಾತನಾಡಿದ ಅವರು ಮುಂದಿನ ದಿನದಲ್ಲಿ ಎಂಟಿಬಿ ಹಾಗೂ ವಿಶ್ವನಾಥ್ ಅವರಿಗೆ ಅವಕಾಶ ಸಿಗಲಿದೆ ಎಂಬುದರ ಸೂಚನೆ ನೀಡಿದರು. ಬಿಜೆಪಿ ಸರ್ಕಾರ ಎಷ್ಟು ದಿನ ಇರುತ್ತೋ ಎನ್ನುವ ಎಚ್‌ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಕುಮಾರ‌ಸ್ವಾಮಿ ಹಗಲು ಕನಸು ಕಾಣುತ್ತಿದ್ದಾರೆ. ಮಂತ್ರಿ ಮಂಡಲ ವಿಸ್ತರಣೆ ಬಳಿಕ ಏನೇನೋ ಆಗುತ್ತೆ ಅಂದುಕೊಂಡಿದ್ದರು. ಆದರೆ ಯಾವುದೇ ಸಮಸ್ಯೆ ಇಲ್ಲದೆ ಆಡಳಿತ ನಡೆಸುತ್ತಿದ್ದಾರೆ" ಎಂದು ತಿರುಗೇಟು ನೀಡಿದರು.

ಸಂಪುಟ ವಿಸ್ತರಣೆ: ಸಿದ್ದರಾಮಯ್ಯ ಭೇಟಿಯಾದ ಬಿಎಸ್ವೈ ಪುತ್ರ ವಿಜಯೇಂದ್ರಸಂಪುಟ ವಿಸ್ತರಣೆ: ಸಿದ್ದರಾಮಯ್ಯ ಭೇಟಿಯಾದ ಬಿಎಸ್ವೈ ಪುತ್ರ ವಿಜಯೇಂದ್ರ

"ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಕೆಲವು ಗೊಂದಲಗಳು ಇದ್ದವು. ಗೊಂದಲ ನಿವಾರಣೆ ಮಾಡಿ ಎಲ್ಲವನ್ನು ಯಡಿಯೂರಪ್ಪ ನಿಭಾಯಿಸಿದ್ದಾರೆ. ಸದ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲ್ಲ ಇಲ್ಲ. ಇನ್ನು 6 ಸ್ಥಾನ ಖಾಲಿ ಇದೆ. ಅದನ್ನು ಶೀಘ್ರದಲ್ಲೆ ತುಂಬಿ ಮೈಸೂರು ಭಾಗಕ್ಕೆ ಅವಕಾಶ ನೀಡಲಾಗುತ್ತದೆ" ಎಂದು ಭರವಸೆ ನೀಡಿದರು.

 BY Vijayendra Gave Hope To Vishwanath And MTB Nagaraj

 ಬಿ ವೈ ವಿಜಯೇಂದ್ರ ರಾಜಕೀಯ ಮುಖ್ಯವಾಹಿನಿಗೆ ತರಲು ಸಿದ್ಧವಾಗಿದೆ ವೇದಿಕೆ! ಬಿ ವೈ ವಿಜಯೇಂದ್ರ ರಾಜಕೀಯ ಮುಖ್ಯವಾಹಿನಿಗೆ ತರಲು ಸಿದ್ಧವಾಗಿದೆ ವೇದಿಕೆ!

ಬಜೆಟ್ ಬಗ್ಗೆ ಯಾರು ತಲೆ ಕೆಡಿಸಿಕೊಂಡಿಲ್ಲ ಎಂಬ ಕಾಂಗ್ರೆಸ್ ಆರೋಪ ವಿಚಾರವಾಗಿ ಮಾತನಾಡಿ, "ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಒಬ್ಬರ ಕಾಲು ಇನ್ನೊಬ್ಬರು ಎಳೆಯುತ್ತಿದ್ದಾರೆ. ಅವರು ಬಜೆಟ್ ಬಗ್ಗೆ ಕೆಲಸ ಮಾಡ್ತಿಲ್ಲ ಅಂದರೆ ಅಪಹಾಸ್ಯವಾಗುತ್ತದೆ. ಯಡಿಯೂರಪ್ಪನವರು ಈಗಾಗಲೇ ಬಜೆಟ್ ಸಭೆ ನಡೆಸುತ್ತಿದ್ದಾರೆ. ರಾಜ್ಯಕ್ಕೆ ಉತ್ತಮ ಬಜೆಟ್ ಕೊಡ್ತಾರೆ" ಎಂದು ಹೇಳಿದರು.

English summary
"Yediyurappa will keep his words. There are 6 more pending seats. Mysuru will get part in it” said BY Vijayendra in mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X