ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡಿ ಬೆಟ್ಟದ ದೇವಾಲಯದಲ್ಲಿ ಹರಕೆ ಸೀರೆ ಮಾರಾಟದಿಂದ ಬರುವ ಆದಾಯವೆಷ್ಟು?

|
Google Oneindia Kannada News

Recommended Video

Chamundeshwari Temple, Mysore | ಒಂದು ವರ್ಷದಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಗಳಿಸಿದ ಆದಾಯ?

ಮೈಸೂರು, ಅಕ್ಟೋಬರ್. 26: ಚಾಮುಂಡಿಬೆಟ್ಟಕ್ಕೆ ದಿನನಿತ್ಯ ಸಾವಿರಾರು ಜನರು ಬಂದು ತಾಯಿಯ ದರ್ಶನ ಪಡೆದು ಹೋಗುತ್ತಾರೆ. ಹೀಗೆ ಬಂದ ಭಕ್ತಾದಿಗಳು ಸಮರ್ಪಿಸಿದ ಹರಕೆ ಸೀರೆಗಳ ಮಾರಾಟದಿಂದ ದೇವಸ್ಥಾನಕ್ಕೆ ಒಂದು ವರ್ಷದಲ್ಲಿ ಸುಮಾರು 1 ಕೋಟಿ ರೂ.ವರೆಗೆ ಆದಾಯ ಬರುತ್ತದೆ.

ವಿಜೃಂಭಣೆಯಿಂದ ಜರುಗಿದ ಚಾಮುಂಡೇಶ್ವರಿ ಅಮ್ಮನವರ ತೆಪ್ಪೋತ್ಸವವಿಜೃಂಭಣೆಯಿಂದ ಜರುಗಿದ ಚಾಮುಂಡೇಶ್ವರಿ ಅಮ್ಮನವರ ತೆಪ್ಪೋತ್ಸವ

ವಿಶೇಷ ದಿನಗಳೂ ಸೇರಿದಂತೆ ವರ್ಷವಿಡೀ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ರೇಷ್ಮೆ, ಕಾಟನ್ ಸೇರಿದಂತೆ 300 ರೂ.ನಿಂದ 10,000 ರೂ.ಗಳ ಬೆಲೆಯ ಸೀರೆಗಳನ್ನು ಹರಕೆಯಾಗಿ ಸಮರ್ಪಿಸಿ ರಶೀದಿ ಪಡೆಯುತ್ತಾರೆ.

 ಚಾಮುಂಡಿಬೆಟ್ಟದಲ್ಲಿ ಜನಸಾಗರದ ನಡುವೆ ಅದ್ದೂರಿಯಾಗಿ ನಡೆದ ಶ್ರೀ ಚಾಮುಂಡೇಶ್ವರಿ ಮಹಾರಥೋತ್ಸವ ಚಾಮುಂಡಿಬೆಟ್ಟದಲ್ಲಿ ಜನಸಾಗರದ ನಡುವೆ ಅದ್ದೂರಿಯಾಗಿ ನಡೆದ ಶ್ರೀ ಚಾಮುಂಡೇಶ್ವರಿ ಮಹಾರಥೋತ್ಸವ

ಪ್ರತಿ ವರ್ಷ ಅಂದಾಜು 1 ರಿಂದ 2 ಕೋಟಿ ರೂ.ಆದಾಯ ಈ ಹರಕೆ ಸೀರೆ ಮಾರಾಟದಲ್ಲಿ ಬರುತ್ತದೆ. ಈ ಆದಾಯವನ್ನು ಅನ್ನ ದಾಸೋಹಕ್ಕೆ ಬಳಸುತ್ತಾರೆ.

By selling harake saree Chamundi temple has a revenue of up to Rs 1 crore

ಇತ್ತ ಭಕ್ತರಲ್ಲಿ ಹರಕೆ ಸೀರೆಯನ್ನು ತೆಗೆದುಕೊಂಡರೆ ಒಳ್ಳೆಯದಾಗುವುದಿಲ್ಲ ಎಂಬ ಭಾವನೆಯಿದೆ. ಆದರೆ ಈ ಭಾವನೆ ಸುಳ್ಳು. ಈ‌ ಸೀರೆಯನ್ನು ಕೊಂಡುಕೊಂಡರೆ ದೇವರ ಆಶೀರ್ವಾದ ದೊರೆಯುತ್ತದೆ. ಪ್ರಸಾದದ ರೂಪದಲ್ಲಿ ಕುಂಕುಮ ಪಡೆದ ಹಾಗೆ, ಹರಕೆ ಸೀರೆಗಳನ್ನು ಪ್ರಸಾದದ ರೀತಿಯಲ್ಲೆ ಪಡೆದುಕೊಳ್ಳುತ್ತಾರೆ ಎನ್ನುತ್ತಾರೆ ಲೆಕ್ಕ ಪರಿಶೋಧಕರು.

 ಮೈಸೂರು ಅರಸರು ಚಾಮುಂಡೇಶ್ವರಿಯನ್ನೇಕೆ ಪೂಜಿಸುತ್ತಾರೆ ? ಮೈಸೂರು ಅರಸರು ಚಾಮುಂಡೇಶ್ವರಿಯನ್ನೇಕೆ ಪೂಜಿಸುತ್ತಾರೆ ?

ದೇಶದ ಶ್ರೀಮಂತ ದೇವಸ್ಥಾನಗಳಲ್ಲಿ ಚಾಮುಂಡಿ ಬೆಟ್ಟದ ದೇವಾಲಯವೂ ಒಂದು. ಅಷ್ಟೇ ಅಲ್ಲದೇ, ವಿವಿಧ ಧಾರ್ಮಿಕ ಕೈಂಕರ್ಯ, ವಿಶೇಷ ಪೂಜೆ, ಹುಂಡಿ, ಅಲಂಕಾರಗಳಿಂದ ಹಾಗೂ ಭಕ್ತರಿಂದ ಬರುವ ವಿವಿಧ ರೂಪದ ಸೇವಾ ಶುಲ್ಕಗಳೂ ಸಹ ದೇವಾಲಯದ ಸಂಪನ್ಮೂಲವನ್ನು ಹೆಚ್ಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.

English summary
By selling harake saree Mysore Chamundi temple has a revenue of up to Rs 1 crore a year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X