ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಏನಿದು ಎಚ್ಡಿಕೆ ವಿಶ್ವಾಸದ ಮಾತು

|
Google Oneindia Kannada News

ಮೈಸೂರು, ಸೆ 21: ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ 10 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, "ಉಪ ಚುನಾವಣೆಯಲ್ಲಿ ಕನಿಷ್ಠ ಹತ್ತು ಸ್ಥಾನಗಳನ್ನಾದ್ರೂ ಈ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ" ಎಂದು ಹೇಳಿದರು.

ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವು ಬೇಡಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವು ಬೇಡ

ಚಿಂತನ ಮಂಥನ ಸಭೆಯಲ್ಲಿ ಮಾಜಿ ಸಚಿವ ಜಿ.ಟಿ ದೇವೇಗೌಡರಿಗೆ ಪರೋಕ್ಷ ಟಾಂಗ್ ನೀಡಿದ ಹೆಚ್.ಡಿ.ಕೆ, "ನೀವು ಉಳಿದರೆ ಮಾತ್ರ ಪಕ್ಷ ಉಳಿಯುತ್ತೆ., ನನ್ನ ಹಾಗೇ, ನಿಮ್ಮಂತಹ ಲಕ್ಷಾಂತರ ಕಾರ್ಯಕರ್ತರು ಇದ್ದರೆ ಮಾತ್ರ ಪಕ್ಷ ಉಳಿದುಕೊಳ್ಳೋಕೆ ಸಾಧ್ಯ" ಎಂದು ಹೇಳಿದರು.

By Election Date Announced: HD Kumaraswamy Very Confident To Win Minimum 10 Seats

" ಉಪ ಚುನಾವಣೆಯ ಮೂಲಕ ಸರಕಾರದ ಅಳಿವು ಉಳಿವು ಗೊತ್ತಾಗಲಿದೆ. ಈ ಸರಕಾರ ನಡೆಯಲು ಸಾಧ್ಯವಿಲ್ಲ. ಸರಕಾರದ ನಂಬರ್ ನೋಡಿದರೆ ಗೊತ್ತಾಗತ್ತದೆ" ಎಂದು ಭವಿಷ್ಯ ನುಡಿದರು.

" ಬಿಜೆಪಿಯವರು ಹಣದ ಮೂಲಕ ಜನರನ್ನ ಕೊಂಡುಕೊಳ್ಳಲು ಹೋಗಿದ್ದಾರೆ " ಎಂದು ಕುಮಾರಸ್ವಾಮಿ ಆರೋಪಿಸಿದರು." ಬಿಜೆಪಿಯ ಭದ್ರಕೋಟೆಯಲ್ಲೇ ನಿನ್ನೆ ಜಗದೀಶ್ ಶೆಟ್ಟರ್ ಗೆ ಜನ ಘೇರಾವ್ ಹಾಕಿದ್ದಾರೆ. ಉಪ ಚುನಾವಣೆಯಲ್ಲಿ ಯಾವುದೇ ಹೊಂದಾಣಿಕೆ ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದೇವೆ" ಎಂದು ಕುಮಾರಸ್ವಾಮಿ ಹೇಳಿದರು.

ಉಪಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರ ಸ್ಪರ್ಧೆಉಪಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರ ಸ್ಪರ್ಧೆ

" ಕಳೆದ ಲೋಕಸಭಾ ಚುನಾವಣೆಯಲ್ಲೇ ಫ್ರೆಂಡ್ಲಿ ಫೈಟ್ ಮಾಡೋಣ ಅಂದುಕೊಂಡೆವು. ಆದ್ರೆ ಕೆಲವು ನಾಯಕರ ಮಾತಿನಿಂದ ಅದು ಸಾಧ್ಯವಾಗಲಿಲ್ಲ" ಎಂದು ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

English summary
By Election Date Announced: Former CM HD Kumaraswamy Very Confident To Win Minimum 10 Seats
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X