ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ರೈಲ್ವೆಯಿಂದ ವ್ಯಾಪಾರ ಅಭಿವೃದ್ಧಿ ಘಟಕ ಸ್ಥಾಪನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 01: ರೈಲ್ವೆ ಸರಕು ಸಾಗಣೆಗೆ ಉತ್ತೇಜನ ನೀಡುವ ಸಲುವಾಗಿ ವಲಯಮಟ್ಟ ಮತ್ತು ವಿಭಾಗೀಯ ಮಟ್ಟದಲ್ಲಿ ಎಲ್ಲಾ ಸಂಬಂಧಿತ ಇಲಾಖೆಗಳ ಕಾರ್ಯಕಾರಿಗಳನ್ನು ಒಳಗೊಂಡ ವ್ಯಾಪಾರ ಅಭಿವೃದ್ಧಿ ಘಟಕಗಳನ್ನು (ಬಿ.ಡಿ.ಯು) ಸ್ಥಾಪಿಸಲಾಗಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್, ಬಿ.ಡಿ.ಯು.ನ ನಿರಂತರ ಪ್ರಚಾರದ ಪ್ರಯತ್ನಗಳಿಂದ ಮೈಸೂರು ವಿಭಾಗವು ಮೆಕ್ಕೆಜೋಳದ ಸಾಗಣೆ ದಟ್ಟಣೆಯನ್ನು ಮೊದಲಿನ ಮಟ್ಟಕ್ಕೆ ಪುನಃ ಸ್ಥಾಪಿಸಲು ಸಾಧ್ಯವಾಗಿದ್ದು, ಸಕ್ಕರೆ ಸಾಗಣೆಗಾಗಿ ಹೊಸ ಗ್ರಾಹಕರನ್ನು ಸಹ ಸೆಳೆದಿದೆ ಎಂದು ಮಾಹಿತಿ ನೀಡಿದ್ದಾರೆ.

ಮೈಸೂರು ರೈಲ್ವೆ ನಿಲ್ದಾಣಕ್ಕೆ ಮೈಸೂರು ರೈಲ್ವೆ ನಿಲ್ದಾಣಕ್ಕೆ "ಅತ್ಯುತ್ತಮ ನಿರ್ವಹಣೆಯ ನಿಲ್ದಾಣ" ಪ್ರಶಸ್ತಿ

ಮೊದಲ ಬಾರಿಗೆ ವಿಭಾಗವು, ಮೆಸರ್ಸ್ ಮೈಲಾರ್ ಶುಗರ್ ಕಂಪನಿ ಸಕ್ಕರೆ ಸಾಗಣೆಗಾಗಿ ರೈಲ್ವೆ ಸೇವೆ ಬಳಸಿಕೊಳ್ಳಲಾಗಿದೆ. 1320 ಟನ್ ಸಕ್ಕರೆಯನ್ನು ಹಾವೇರಿಯ ಶ್ರೀ ಮಹಾದೇವಪ್ಪ ಮೈಲಾರ ರೈಲ್ವೆ ನಿಲ್ದಾಣದಿಂದ ಮಧ್ಯ ರೈಲ್ವೆ ವಲಯದ ಪನ್ವೆಲ್​ನ ಮೆಸರ್ಸ್ ನವಕಾರ್ ಕಾರ್ಪ್ ಲಿಮಿಟೆಡ್​ಗೆ ಒಟ್ಟು 760 ಕಿ.ಮೀ. ದೂರ ಸಾಗಿಸಿ ಮೈಸೂರು ವಿಭಾಗವು 13 ಲಕ್ಷ ಆದಾಯ ಗಳಿಸಿದೆ.

Business Development Units Started By Mysuru Railway

ಎರಡು ವರ್ಷಗಳ ನಂತರ ಈ ವರ್ಷದಲ್ಲಿ ಬಿ.ಡಿ.ಯು.ನ ಪ್ರಯತ್ನದಿಂದಾಗಿ 1330 ಟನ್ ಮೆಕ್ಕೆಜೋಳವನ್ನು ರಾಣೆಬೆನ್ನೂರಿನಿಂದ 2303 ಕಿ.ಮೀ. ದೂರದ ಈಶಾನ್ಯ ರೈಲ್ವೆಯ ರುದ್ರಪುರ ನಗರಕ್ಕೆ ಸಾಗಿಸಿ ವಿಭಾಗಕ್ಕೆ ಸುಮಾರು 32 ಲಕ್ಷ ರೂ. ಆದಾಯ ಬಂದಿದೆ. ಸರಕು ಸಾಗಣೆಗೆ ಅತ್ಯಂತ ಅನುಕೂಲಕರ, ಸುರಕ್ಷಿತ ಮತ್ತು ವೇಗ ಮಾರ್ಗವಾಗಿ ರೈಲ್ವೆ ಹೊರಹೊಮ್ಮಿದ್ದು, ಈ ತಿಂಗಳಲ್ಲಿ ವಿಭಾಗವು ಸುಮಾರು 45 ಲಕ್ಷ ರೂ. ಹೆಚ್ಚುವರಿ ಆದಾಯ ಗಳಿಸಲು ಸಾಧ್ಯವಾಗಿದೆ.

ಸರಕು ಸಾಗಣೆ ಯೋಜನೆಗಳನ್ನು ವಿಸ್ತರಿಸಲು ಮತ್ತು ರೈಲ್ವೆಯನ್ನು ತಮ್ಮ ಆದ್ಯತೆಯ ಸಾರಿಗೆ ವಿಧಾನವಾಗಿ ಆಯ್ಕೆ ಮಾಡಲು ವ್ಯಾಪಾರಸ್ಥರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ನಿಯಮಿತವಾಗಿ ಗ್ರಾಹಕ ಸಭೆಗಳನ್ನು ನಡೆಸಲಾಯಿತು. ಮೈಸೂರು ವಿಭಾಗವು ಗ್ರಾಹಕರ ಸರಕು ಸಾಗಣೆ ಮತ್ತು ಸಾರಿಗೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಮೈಸೂರು ವಿಭಾಗದ ವ್ಯಾಪಾರ ಅಭಿವೃದ್ಧಿ ಘಟಕವನ್ನು ಸಂಪರ್ಕಿಸಬಹುದು ಅಥವಾ ಸರಕು ಮತ್ತು ಪಾರ್ಸೆಲ್ ಬುಕ್ಕಿಂಗ್​ಗೆ ಪ್ಲೇ ಸ್ಟೋರ್‌ನಿಂದ ಏಕ ಹಂತದ ತಾಣವಾಗಿ ಕಾರ್ಯನಿರ್ವಹಿಸುವ 'ಸ್ವಿಫ್ಟ್' (SWIFT) ಅಪ್ಲಿಕೇಶನ್ (ಸರಕು ಸಾಗಣೆಗೆ ಏಕ ಗವಾಕ್ಷಿ ಇಂಟರ್ಫೇಸ್) ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Business Development Units (BDUs), comprising the executives of all relevant departments, have been set up at the zonal and divisional level by Mysuru railway to promote rail goods transport
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X