ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರಿ ನಿಯಮ ಉಲ್ಲಂಘನೆ ದಂಡ ತಪ್ಪಿಸಲು ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಬುಲೆಟ್‌ ಸವಾರ

By Coovercolly Indresh
|
Google Oneindia Kannada News

ಮೈಸೂರು, ಡಿಸೆಂಬರ್ 9: ಪದೇ ಪದೇ ಸಂಚಾರ ಉಲ್ಲಂಘನೆಯ ದಂಡವನ್ನು ತಪ್ಪಿಸಿಕೊಳ್ಳಲು ಬುಲೆಟ್‌ ಬೈಕ್ ಸವಾರನೊಬ್ಬ ಭಾರೀ ತಂತ್ರ ಮಾಡಿದ್ದು, ಕೊನೆಗೂ ಮೈಸೂರು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.

ಕಳೆದ 8 ತಿಂಗಳ ಅವಧಿಯಲ್ಲಿ ಆರೋಪಿಯು 38 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾನೆ. ಸಿಗ್ನಲ್‌ ಜಂಪ್, ಅತಿ ವೇಗದ ಚಾಲನೆ, ಅಜಾಗರೂಕತೆಯ ಚಾಲನೆ ಪ್ರಕರಣವೇ ಇದರಲ್ಲಿ ಹೆಚ್ಚಾಗಿತ್ತು.

ಇನ್ಮುಂದೆ ಹಾಫ್ ಹೆಲ್ಮೆಟ್ ಹಾಕೊಹಂಗಿಲ್ಲ, ದಂಡ ಇಲ್ಲ ಇನ್ನೇನು?ಇನ್ಮುಂದೆ ಹಾಫ್ ಹೆಲ್ಮೆಟ್ ಹಾಕೊಹಂಗಿಲ್ಲ, ದಂಡ ಇಲ್ಲ ಇನ್ನೇನು?

ದಂಡದಿಂದ ತಪ್ಪಿಸಿಕೊಳ್ಳಲು ನಕಲಿ ನಂಬರ್‌ ಅಳವಡಿಸಿಕೊಂಡಿದ್ದ ಈ ಬೈಕ್ ಸವಾರನನ್ನು ನರಸಿಂಹರಾಜ ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಕನ್ನೇಗೌಡನ ಕೊಪ್ಪಲಿನ ನಿವಾಸಿ ರವಿ ಎಂಬಾತನ ಬುಲೆಟ್‌ ಬೈಕ್ ಅಸಲಿ ನೋಂದಣಿ ಸಂಖ್ಯೆ ಬೇರೆಯಿದ್ದು, ವಾಹನ ಸವಾರ ತನ್ನ ಬೈಕ್ ನ ನಂಬರ್‌ ಪ್ಲೇಟ್‌ ತಿದ್ದುಪಡಿ ಮಾಡಿ ಬೇರೆ ನೋಂದಣಿ ಸಂಖ್ಯೆ ಹಾಕಿಕೊಂಡಿದ್ದ. ಸಿಸಿ ಟಿವಿಗಳ ಫುಟೇಜ್ ಮೂಲಕ ಪೊಲೀಸರು ಒಟ್ಟು 38 ನೋಟೀಸ್‌ ಗಳನ್ನು ಸವಾರನ ಮನೆ ವಿಳಾಸಕ್ಕೆ ಕಳಿಸಿದ್ದರು. ಆದರೆ ಆರೋಪಿಯು ಅಳವಡಿಸಿಕೊಂಡಿದ್ದ ನೋಂದಣಿ ಸಂಖ್ಯೆಯು ಕುವೆಂಪುನಗರದ ನಿವಾಸಿ ಚಂದ್ರ ಅವರ ಹೋಂಡಾ ಡಿಯೋ ಸ್ಕೂಟರ್ ನದಾಗಿತ್ತು.

Bullet Rider Changed Name Plate To Avoid Traffic Fine In Mysuru

ಪೊಲೀಸರು ಕಳಿಸಿದ್ದ 38 ನೋಟೀಸ್‌ ಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದ ಚಂದ್ರ ಅವರು ಟ್ರಾಫಿಕ್‌ ಮ್ಯಾನೇಜ್‌ ಮೆಂಟ್‌ ವಿಭಾಗದಲ್ಲಿ ಪರಿಶೀಲಿಸಿದಾಗ ಬುಲೆಟ್‌ ಸವಾರನೊಬ್ಬ ಈ ಸಂಖ್ಯೆ ಬಳಸುತ್ತಿರುವುದು ಕಂಡುಬಂದಿತ್ತು. ಕೂಡಲೇ ಚಂದ್ರ ಅವರು ಜಯಲಕ್ಷ್ಮಿ ಪುರ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದರು. ದೂರಿನ ಮೇರೆಗೆ 2 ಗಂಟೆಯೊಳಗೇ ಎನ್.ಆರ್. ಸಂಚಾರ ಠಾಣಾ ಆರಕ್ಷಕ ನಿರೀಕ್ಷಕರು ಇರ್ವಿನ್ ರಸ್ತೆಯಲ್ಲಿ ಬುಲೆಟ್ ಮೋಟಾರ್ ಸೈಕಲನ್ನು ಪತ್ತೆ ಮಾಡಿದ್ದಾರೆ.

ದಾಖಲೆ ಇಲ್ಲದ 2 ಕೋಟಿ ರೂ. ಕಾರಿಗೆ 9 ಲಕ್ಷ ದಂಡ ಜಡಿದ ಪೊಲೀಸರುದಾಖಲೆ ಇಲ್ಲದ 2 ಕೋಟಿ ರೂ. ಕಾರಿಗೆ 9 ಲಕ್ಷ ದಂಡ ಜಡಿದ ಪೊಲೀಸರು

ಸಂಚಾರ ನಿಯಮ ಉಲ್ಲಂಘನೆಗಳ ದಂಡವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ರೀತಿ ವಾಹನ ಸಂಖ್ಯೆ ಬದಲಾವಣೆ ಮಾಡಿಕೊಂಡಿರುವುದಾಗಿ ಆರೋಪಿ ರವಿ ತಿಳಿಸಿದ್ದಾನೆ.

ವಾಹನಗಳ ನೋಂದಣಿ ಸಂಖ್ಯೆಯನ್ನು ನಕಲಿಯಾಗಿ ಉಪಯೋಗಿಸುವುದು ಕಾನೂನು ಬಾಹಿರವಾಗಿದ್ದು, ಕ್ರಿಮಿನಲ್ ಸ್ವರೂಪದ ಅಪರಾಧ ಎಂದು ಪೊಲೀಸರು ತಿಳಿಸಿದ್ದಾರೆ.

English summary
Bullet rider changed his bike name plate to avoid traffic fine in Mysuru. 38 cases have been registered against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X